ಸೋಮವಾರ, ಏಪ್ರಿಲ್ 28, 2025
HomeSportsCricketWomen’s Premier League : ಆರ್‌ಸಿಬಿಗೆ ಇಂದು ಮಾಡು ಇಲ್ಲ ಮಡಿ ಮಂದ್ಯ, ಮಂಧನ ಪಡೆಗೆ...

Women’s Premier League : ಆರ್‌ಸಿಬಿಗೆ ಇಂದು ಮಾಡು ಇಲ್ಲ ಮಡಿ ಮಂದ್ಯ, ಮಂಧನ ಪಡೆಗೆ ಇನ್ನೂ ಇದೆ ಪ್ಲೇ ಆಫ್ ಚಾನ್ಸ್

- Advertisement -

ಮುಂಬೈ: ಸತತ ಐದು ಸೋಲುಗಳಿಂದ ಬಸವಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore Women) ಮಹಿಳಾ ಪ್ರೀಮಿಯರ್ ಲೀಗ್’ನ (Women’s Premier League 2023) ತನ್ನ 6ನೇ ಲೀಗ್ ಪಂದ್ಯದಲ್ಲಿ ಯು.ಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ.

ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಯು.ಪಿ ವಾರಿಯರ್ಸ್ ವಿರುದ್ಧದ ಪಂದ್ಯ ಸ್ಮೃತಿ ಮಂಧನ ಸಾರಥ್ಯದ ಆರ್’ಸಿಬಿ ತಂಡಕ್ಕೆ ಮಾಡು ಇಲ್ಲ ಮಡಿ ಪಂದ್ಯ. ಈ ಪಂದ್ಯವನ್ನೂ ಸೋತರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ರೇಸ್’ನಿಂದ ನಿರ್ಗಮಿಸಲಿದೆ. ಟೂರ್ನಿಯಲ್ಲಿ ಆಡಿರುವ ಐದೂ ಪಂದ್ಯಗಳಲ್ಲಿ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಇನ್ನೂ ಅಕೌಂಟ್ ಓಪನ್ ಮಾಡಿಲ್ಲ. ಆದರೂ ಆರ್’ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ.

ಸತತ ಐದು ಗೆಲುವುಗಳೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಪ್ಲೇ ಆಫ್ ಹಂತಕ್ಕೇರಿದೆ. 5 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ಲೇ ಆಫ್’ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಉಳಿದೊಂದು ಸ್ಥಾನಕ್ಕೆ ಯು.ಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

ರಾಯಲ್ ಚಾಲೆಂಜರ್ಸ್ ತಂಡದ ಪ್ಲೇ ಆಫ್ ಚಾನ್ಸ್ :
ಮುಂದಿನ ಮೂರೂ ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಗೆಲ್ಲಬೇಕು
ಯು.ಪಿ ವಾರಿಯರ್ಸ್ ಮುಂದಿನ ನಾಲ್ಕೂ ಪಂದ್ಯಗಳನ್ನು ಸೋಲಬೇಕು.
ಗುಜರಾತ್ ಜೈಂಟ್ಸ್ ತಂಡ ತನ್ನ ಮುಂದಿನ ಮೂರೂ ಪಂದ್ಯಗಳನ್ನು ಸೋಲಬೇಕು.
ಆಗ ರಾಯಲ್ ಚಾಲೆಂಜರ್ಸ್ 6 ಅಂಕ, ಯು.ಪಿ ವಾರಿಯರ್ಸ್ 4 ಅಂಕ ಹಾಗೂ ಗುಜರಾತ್ ಜೈಂಟ್ಸ್ 2 ಅಂಕ ಗಳಿಸಿದಂತಾಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 3ನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಲಿದೆ.

WPL ಟೂರ್ನಿ: RCB ತಂಡದ ಮುಂದಿನ ಪಂದ್ಯಗಳು :
ಮಾರ್ಚ್ 15: Vs ಯುಪಿ ವಾರಿಯರ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 18: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 21: Vs ಮುಂಬೈ ಇಂಡಿಯನ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 3.30 pm)

ಯು.ಪಿ ವಾರಿಯರ್ಸ್ ತಂಡದ ಮುಂದಿನ ಪಂದ್ಯಗಳು :
ಮಾರ್ಚ್ 15: Vs ರಾಯಲ್ ಚಾಲೆಂಜರ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 18: Vs ಮುಂಬೈ ಇಂಡಿಯನ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; ಮಧ್ಯಾಹ್ನ 3.30 pm)
ಮಾರ್ಚ್ 20: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; ಮಧ್ಯಾಹ್ನ 3.30 pm)
ಮಾರ್ಚ್ 21: Vs ಡೆಲ್ಲಿ ಕ್ಯಾಪಿಟಲ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; ಮಧ್ಯಾಹ್ನ 3.30 pm)

ಇದನ್ನೂ ಓದಿ : Bangladesh Vs England T20 series : ವಿಶ್ವ ಚಾಂಪಿಯನ್ನರಿಗೆ 3-0 ಅಂತರದಲ್ಲಿ ವೈಟ್‌ವಾಶ್ ಬಳಿದ ಬಾಂಗ್ಲಾ ಟೈಗರ್ಸ್

ಇದನ್ನೂ ಓದಿ : IPL 2023 injury list : ಐಪಿಎಲ್ ಆರಂಭಕ್ಕೂ ಮೊದಲೇ ಫ್ರಾಂಚೈಸಿಗಳಿಗ ಬಿಗ್ ಶಾಕ್, ಆಂಜನೇಯನ ಬಾಲದಂತೆ ಬೆಳೆಯುತ್ತಲೇ ಆದೆ ಆಟಗಾರರ ಇಂಜ್ಯುರಿ ಲಿಸ್ಟ್

ಗುಜರಾತ್ ಜೈಂಟ್ಸ್ ತಂಡದ ಮುಂದಿನ ಪಂದ್ಯಗಳು :
ಮಾರ್ಚ್ 16: Vs ಡೆಲ್ಲಿ ಕ್ಯಾಪಿಟಲ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 18: Vs ರಾಯಲ್ ಚಾಲೆಂಜರ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 20: Vs ಯು.ಪಿ ವಾರಿಯರ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; ಮಧ್ಯಾಹ್ನ 3.30 pm)

Royal Challengers Bangalore Women: RCB can’t do it today, Madi Mandya, Mandhan Pade still has a chance of play off

RELATED ARTICLES

Most Popular