ಭಾನುವಾರ, ಏಪ್ರಿಲ್ 27, 2025
HomeCoastal NewsSachin Tendulkar : ಉಡುಪಿ ಮೂಲದವರಂತೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​​

Sachin Tendulkar : ಉಡುಪಿ ಮೂಲದವರಂತೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​​

- Advertisement -

ಉಡುಪಿ : ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ (Sachin Tendulkar)​​ ಕ್ರಿಕೆಟ್​ ಸಾಧನೆಗಳ ಬಗ್ಗೆ ಎರಡು ಮಾತಿಲ್ಲ. ಹೀಗಾಗಿಯೇ ಅವರಿನ್ನೂ ಅಭಿಮಾನಿಗಳ ಪಾಲಿಗೆ ಕ್ರಿಕೆಟ್​ ದೇವರಾಗಿಯೇ ಉಳಿದಿದ್ದಾರೆ. ಸಚಿನ್​ ತೆಂಡೂಲ್ಕರ್ ಎಲ್ಲಿಯವರು ಎಂದು ಕೇಳಿದರೆ ಬಹುತೇಕರು ಮಹಾರಾಷ್ಟ್ರ ಎಂದೇ ಉತ್ತರ ನೀಡುತ್ತಾರೆ. ಆದರೆ ಕ್ರಿಕೆಟ್​ ಲೋಕದ ದಂತಕತೆ ಸಚಿನ್​ ಮೂಲತಃ ಕರ್ನಾಟಕದ ಕರಾವಳಿ ಭಾಗದವರು ಎಂಬ ಸುದ್ದಿ ಮಾತ್ರ ಹಲವು ಊಹಾಪೋಹಗಳ ಜೊತೆ ಹರಿದಾಡುತ್ತಲೇ ಇದೆ.

ಈ ಹಿಂದೆ ಕೂಡ ಸಚಿನ್​ ತೆಂಡೂಲ್ಕರ್​ ಉಡುಪಿ ಮೂಲದವರು ಎಂಬ ಸುದ್ದಿ ಹರಿದಾಡಿತ್ತು. ಇದೀಗ ನಾಗಾರಾಧನೆಯ ಕಾರಣಕ್ಕೆ ಈ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಕರಾವಳಿ ಭಾಗದಲ್ಲಿ ನಾಗಾರಾಧನೆಗೆ ತುಂಬಾನೇ ಮಹತ್ವವಿದೆ . ಸಚಿನ್​ ತೆಂಡೂಲ್ಕರ್​ ಅವರ ಕುಟುಂಬಕ್ಕೆ ಸೇರಿದ ನಾಗಬನವೊಂದು ಉಡುಪಿಯ ಅತ್ರಾಡಿಯಲ್ಲಿದೆ ಎಂದು ಹೇಳಲಾಗುತ್ತಿದೆ.

ಹಾಗಂತ ಇದೇನು ನಿನ್ನೆ ಮೊನ್ನೆಯ ವದಂತಿಯಲ್ಲ. ಸಚಿನ್​ ಹಾಗೂ ಉಡುಪಿ ನಡುವಿನ ನಂಟಿನ ವದಂತಿ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಸಚಿನ್​ ಕುಟುಂಬದ ಹಿರಿಯರು ಉಡುಪಿಯಲ್ಲೇ ಇದ್ದರು. ಆದರೆ ಆಸ್ತಿ ವಿಚಾರವಾಗಿ ಉಂಟಾದ ಕಲಹದಿಂದಾಗಿ ಬೆಳಗಾವಿಗೆ ತೆರಳಿದ ಸಚಿನ್​ ಕುಟುಂಬ ಕ್ರಮೇಣವಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಯ್ತು ಎಂದು ಹೇಳಲಾಗುತ್ತದೆ.

ಉಡುಪಿಯ ಅತ್ರಾಡಿಯಲ್ಲಿರುವ ಅಪ್ಪು ಪ್ರಭು ಎಂಬವರು ಈ ಎಲ್ಲಾ ವದಂತಿಗಳಿಗೆ ಮತ್ತಷ್ಟು ಪುಷ್ಟಿಯಂತೆ ಕಂಡಿದ್ದಾರೆ. ಈ ಹಿಂದೆ ಕೂಡ ಅಪ್ಪು ಪ್ರಭು ಸಚಿನ್​ ತೆಂಡೂಲ್ಕರ್​​ ಕುಟುಂಬಸ್ಥರು ಎಂಬ ವಿಚಾರ ವ್ಯಾಪಕವಾಗಿ ಚರ್ಚೆಯಾಗಿತ್ತು. ಇದೀಗ ಮತ್ತೆ ಈ ವಿಚಾರಕ್ಕೆ ರೆಕ್ಕೆ ಪುಕ್ಕ ಬಂದತಾಗಿದೆ. ಉಡುಪಿಯ ಬಹುತೇಕ ಕಡೆಗಳಲ್ಲಿ ತೆಂಡೂಲ್ಕರ್​ ಎಂಬ ಅಡ್ಡ ಹೆಸರಿನ ಅನೇಕರಿದ್ದಾರೆ. ಆದರೆ ಅಪ್ಪು ಪ್ರಭು ಮಾತ್ರ ಎಲ್ಲಿಯೂ ಈ ವಿಚಾರದ ಲಾಭವನ್ನು ಪಡೆಯದೇ ಸರಳವಾಗಿ ಬದುಕಿದ್ದಾರೆ.

ಅಪ್ಪು ಪ್ರಭು ನೀಡಿರುವ ಮಾಹಿತಿಯ ಪ್ರಕಾರ ಇವರ ತಂದೆ ವಿಠ್ಠಲ ಪ್ರಭುವಿಗೆ ಒಟ್ಟು 5 ಮಂದಿ ಸಹೋದರರು. ಈ ಸಹೋದರರಲ್ಲಿ ಲಕ್ಷ್ಮಣ ಪ್ರಭು ಹಿರಿಯರು. ನಂತರ ಜನಿಸಿದವರು ರಾಮ ಹಾಗೂ ಕೃಷ್ಣ ಹೆಸರಿನ ಅವಳಿ ಸಹೋದರರು. ಈ ಐವರಲ್ಲಿ ಒಂದು ಕುಟುಂಬ ಮಹಾರಾಷ್ಟ್ರಕ್ಕೆ ವಲಸೆ ಹೋಗಿದೆ. ಹಾಗೂ ಅವರ ಮೊಮ್ಮಗನೇ ಸಚಿನ್​ ತೆಂಡೂಲ್ಕರ್​ ಎಂದು ಹೇಳಿದ್ದಾರೆ. ಆದರೆ ಈ ಎಲ್ಲಾ ಮಾತಿಗೆ ಸಾಕ್ಷ್ಯ ಎಂಬುವಂತ ಯಾವುದೇ ಪುರಾವೆಗಳು ಅಪ್ಪು ಪ್ರಭು ಬಳಿ ಇಲ್ಲ.

ಸಚಿನ್​ ತೆಂಡೂಲ್ಕರ್​ ಅಜ್ಜ ಭೂ ಒಡೆತನದ ವಿಚಾರದಲ್ಲಿ ಗಲಾಟೆಯಾದ ಬಳಿಕ ಉಡುಪಿಯನ್ನು ತೊರೆದು ಬೆಳಗಾವಿ ಭಾಗಕ್ಕೆ ಹೋಗಿದ್ದರು ಎನ್ನಲಾಗಿದೆ. ಇದಾದ ಬಳಿಕ ಅವರು ಅಲ್ಲಿಂದ ಮಹಾರಾಷ್ಟ್ರಕ್ಕೆ ತೆರಳಿದ್ದರು. ಆದರೆ ಸಚಿನ್​ ತೆಂಡೂಲ್ಕರ್​ ಕುಟುಂಬಕ್ಕೆ ಸೇರಿದ ನಾಗಬನ ಇನ್ನೂ ಅತ್ರಾಡಿಯ್ಲಲಿದೆ.

ಕೆಲ ವರ್ಷಗಳ ಹಿಂದೆ ಸಚಿನ್​ ತೆಂಡೂಲ್ಕರ್​​ ಕುಕ್ಕೆ ಸುಬ್ರಹ್ಮಣ ದೇಗುಲದಲ್ಲಿ ಸರ್ಪ ಸಂಸ್ಕಾರ ನಡೆಸಿದ್ದರು. ನಾಗ ಮೂಲ ತಿಳಿಯದವರು ಈ ರೀತಿ ಕುಕ್ಕೆಗೆ ತೆರಳಿ ನಾಗನ ಸೇವೆ ಸಲ್ಲಿಸಿದ್ದರು. ಸಚಿನ್​ ಇಲ್ಲೇಕೆ ಪೂಜೆ ಸಲ್ಲಿಸಿದರು ಎಂಬ ವಿಚಾರ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಸಚಿನ್​ ಮೂಲತಃ ಉಡುಪಿಯವರಾ ಅಲ್ಲವಾ ಎನ್ನುವ ಬಗ್ಗೆ ಸ್ವತಃ ಸಚಿನ್​ ಅವರೇ ಸ್ಪಷ್ಟನೆ ನೀಡಬೇಕಿದೆ.

ಇದನ್ನು ಓದಿ : Ross Taylor retirement : ಐಪಿಎಲ್ 2022 ರ ಮೆಗಾ ಹರಾಜಿನ ಮೊದಲೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ RCB ಆಟಗಾರ

ಇದನ್ನೂ ಓದಿ : Glenn Maxwell RCB Captain : ಗ್ಲೆನ್‌ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ನಾಯಕ ಎಂದ ಮಾಜಿ ಕೋಚ್ ಡೇನಿಯಲ್‌ ವೆಟ್ಟೋರಿ ‌

sachin tendulkar family is basically from udupi

RELATED ARTICLES

Most Popular