ಮುಂಬೈ: “ಸಚಿ…..ನ್ ಸಚಿನ್.., “ಸಚಿ…..ನ್ ಸಚಿನ್”. ಇದನ್ನು ಸಚಿನ್ ತೆಂಡೂಲ್ಕರ್ (Sachin Tendulkar Fans) ಯಾವತ್ತೂ ಮರೆಯಲು ಸಾಧ್ಯವಿಲ್ಲ. ಮಾಸ್ಟರ್ ಬ್ಲಾಸ್ಟರ್ ಆಡುತ್ತಿದ್ದ ಕಾಲದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ್ರೆ ಸಾಕು, ಕ್ರೀಡಾಂಗಣದಲ್ಲಿ “ಸಚಿ…..ನ್ ಸಚಿನ್..” ಅನ್ನೋ ಸದ್ದು ಮಾರ್ಧನಿಸುತ್ತಿತ್ತು. ಅಂಥದ್ದೇ ಒಂದು ಅನುಭವ ಕ್ರಿಕೆಟ್ ದೇವರಿಗೆ ವಿಮಾನವೊಂದರಲ್ಲಿ ಆಗಿದೆ.
49 ವರ್ಷದ ಸಚಿನ್ ತೆಂಡೂಲ್ಕರ್ ಮೂರು ದಿನಗಳ ಹಿಂದೆ ವಿಮಾನ ಪ್ರಯಾಣದಲ್ಲಿದ್ದರು. ಇನ್ನೇನು ಸೀಟ್ ಬೆಲ್ಟ್ ಧರಿಸಿ ಪ್ರಯಾಣಕ್ಕೆ ಸಿದ್ಧರಾಗಿ ಕೂತಿದ್ದರು. ತಮ್ಮ ವಿಮಾನದಲ್ಲಿ ಸಚಿನ್ ಇರುವುದು ಸಹ ಪ್ರಯಾಣಿಕರಿಗೆ ಗೊತ್ತಾಗುತ್ತಿದ್ದಂತೆ ಎಲ್ಲರೂ “ಸಚಿ…..ನ್ ಸಚಿನ್” ಎಂದು ಕೂಗಲು ಆರಂಭಿಸಿದ್ದಾರೆ. ಅಭಿಮಾನಿಗಳು ಎಷ್ಟೇ ಕೂಗಿದರು ಸಚಿನ್ ಕೂತ ಜಾಗದಿಂದ ಎದ್ದಿರಲಿಲ್ಲ. ಕಾರಣ ವಿಮಾನ ಪ್ರಯಾಣದ ನಿಯಮದಂತೆ ಸಚಿನ್ ಸೀಟ್ ಬೆಲ್ಟ್ ಧರಿಸಿ ಕೂತಿದ್ದರು.
ವಿಮಾನ ಪ್ರಯಾಣದ ನಂತರ ತಮ್ಮ ಮೇಲೆ ಅಭಿಮಾನ ತೋರಿಸಿದವರಿಗೆ ಸಚಿನ್ ಟ್ವಿಟರ್ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
“ಕೆಲವೇ ಸಮಯದ ಹಿಂದೆ ವಿಮಾನದಲ್ಲಿ ನನ್ನ ಹೆಸರನ್ನು ಕೂಗಿ ಅಭಿಮಾನ ತೋರಿಸಿದವರಿಗೆ ಧನ್ಯವಾದಗಳು. ಇದು ನಾನು ಬ್ಯಾಟಿಂಗ್ ಮಾಡಲು ಬರುತ್ತಿದ್ದ ಕ್ಷಣಗಳನ್ನು ನೆನಪಿಸಿತು. ವಿಮಾನದಲ್ಲಿ ಸೀಟ್ ಬೆಲ್ಟ್ ಧರಿಸುವಂತೆ ಸೂಚನೆ ಇತ್ತು. ಹೀಗಾಗಿ ನಾನು ನಿಮಗೆ ಪ್ರತಿಕ್ರಿಯಿಸಲಾಗಲಿಲ್ಲ. ಅವರೆಲ್ಲರಿಗೂ ಈಗ “ಹಲೋ” ಎನ್ನುತ್ತಿದ್ದೇನೆ”ಎಂದು ಸಚಿನ್ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ.
2013ರಲ್ಲಿ ಕ್ರಿಕೆಟ್’ನಿಂದ ನಿವೃತ್ತಿಯಾಗಿದ್ದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 100 ಶತಕಗಳನ್ನು ಬಾರಿಸಿದ ಜಗತ್ತಿನ ಮೊದಲ ಹಾಗೂ ಏಕೈಕ ಆಟಗಾರನೆಂಬ ವಿಶ್ವದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದೆ.
ಇದನ್ನೂ ಓದಿ : IPL Players Auction : ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೇಲ್, ಎಬಿಡಿ, ರೈನಾ, ಉತ್ತಪ್ಪ!
ಇದನ್ನೂ ಓದಿ : BCCI big meeting tomorrow : ನಾಳೆ ಬಿಸಿಸಿಐ ಬಿಗ್ ಮೀಟಿಂಗ್, ಟಿ20 ತಂಡಕ್ಕೆ ಹೊಸ ಕ್ಯಾಪ್ಟನ್ ಕೋಚ್ ಬಗ್ಗೆ ನಾಳೆಯೇ ನಿರ್ಧಾರ
ಟೆಸ್ಟ್ ಕ್ರಿಕೆಟ್’ನಲ್ಲಿ 200 ಪಂದ್ಯಗಳನ್ನಾಡಿರುವ ಸಚಿನ್ 51 ಶತಕಗಳ ಸಹಿತ 15921 ರನ್, ಏಕದಿನ ಕ್ರಿಕೆಟ್’ನಲ್ಲಿ 49 ಶತಕಗಳೊಂದಿಗೆ 18426 ರನ್ ಹಾಗೂ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯದಿಂದ 10 ರನ್ ಗಳಿಸಿದ್ದಾರೆ.
Sachin Tendulkar Fans : The wait for Sachin Tendulkar who boarded the flight was a surprise.. Do you know the reason?