SriLanka Drug Mafia: ಶಸ್ತ್ರಾಸ್ತ್ರ, ಡ್ರಗ್ಸ್‌ ಕಳ್ಳ ಸಾಗಾಣಿಕೆ : ಪಾಕ್‌ ನಂಟು ಹೊಂದಿದ 9 ಮಂದಿಯ ಬಂಧನ

ದೆಹಲಿ: (SriLanka Drug Mafia) ಶ್ರೀಲಂಕಾ ಮತ್ತು ಭಾರತದ ಮಧ್ಯೆ ಡ್ರಗ್ಸ್‌ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪಾಕ್‌ ನಂಟು ಹೊಂದಿರುವ 9 ಮಂದಿ ಶ್ರೀಲಂಕಾದ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಸಿ.ಗುಣಶೇಖರನ್, ಪುಷ್ಪರಾಜ, ಮೊಹಮ್ಮದ್ ಅಸ್ಮಿನ್, ಅಲಹಪ್ಪೆರುಮಗ ಸುನೀಲ್ ಘಾಮಿನಿ ಫೋನ್ಸಿಯಾ, ಸ್ಟಾನ್ಲಿ ಕೆನ್ನಾಡಿ ಫೆರ್ನಾಂಡೋ, ಲಾಡಿಯಾ ಚಂದ್ರಸೇನ, ಧನುಕ್ಕ ರೋಶನ್, ವೆಲ್ಲಾ ಸುರಂಕಾ ಮತ್ತು ತಿಲಿಪನ್ ಎಂದು ಗುರುತಿಸಲಾಗಿದ್ದು, ಇವರುಗಳನ್ನು ಡ್ರಗ್‌ ಮಾಫಿಯಾದ ಚಟುವಟಿಕೆಗಳಿಗೆ ಸಂಬಂಧಿಸಿದವರು ಎನ್ನಲಾಗಿದೆ.

ಸಿ ಗುಣಶೇಖರನ್‌ ಹಾಗೂ ಪುಷ್ಪರಾಜ್‌ ನಿಂದ ನಿಯಂತ್ರಿಸಲ್ಪಡುವ ಶ್ರೀಲಂಕಾದ ಡ್ರಗ್‌ ಮಾಫಿಯಾಕ್ಕೆ (SriLanka Drug Mafia) ಸಂಬಂಧಿಸಿದ ಈ ಪ್ರಕರಣವು ಭಾರತದಲ್ಲಿ ಎಲ್‌ಟಿಟಿಇ ಪುನರುಜ್ಜೀವನಕ್ಕಾಗಿ ನಿಧಿ ಸಂಗ್ರಹಿಸಲು ಪಾಕಿಸ್ತಾನ ಮೂಲದ ಶಸ್ತ್ರಾಸ್ತ್ರ ಮತ್ತು ಡ್ರಗ್ ಪೂರೈಕೆದಾರ ಹಾಜಿ ಸಲೀಮ್‌ನ ಸಹಯೋಗದೊಂದಿಗೆ ಅಕ್ರಮ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಕಳ್ಳಸಾಗಾಣಿಕೆ ಮಾಡಿದ ಶಸ್ತ್ರಾಸ್ತ್ರಗಳನ್ನು ಶ್ರೀಲಂಕಾ ವ್ಯಾಪಾರ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಎನ್‌ಐಎ ಜುಲೈ 8 ರಂದು ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿತ್ತು. ದೂರು ದಾಖಲಾದ ನಂತರದಲ್ಲಿ ಆರೋಪಿಗಳು ಹಾಗೂ ಶಂಕಿತರ ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿತು. ಇದೀಗ ಎನ್‌ಐಎ ಗೆ ಪ್ರಕರಣದ ದೊಡ್ಡ ಯಶಸ್ಸು ಲಭಿಸಿದ್ದು, ಶ್ರೀಲಂಕಾ ಮತ್ತು ಭಾರತ ನಡುವೆ ಡ್ರಗ್ಸ್‌ ಹಾಗೂ ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆ ನಡೆಸುತ್ತಿದ್ದ 9 ಮಂದಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ : LPG Cylinders: ಬಿಪಿಎಲ್​ ಕಾರ್ಡ್​ದಾರರಿಗೆ 500 ರೂಪಾಯಿಗೆ ಎಲ್​ಪಿಜಿ ಸಿಲಿಂಡರ್​​​ : ಶೀಘ್ರದಲ್ಲೇ ಯೋಜನೆ ಜಾರಿ

(SriLanka Drug Mafia) The National Investigation Agency (NIA) has arrested 9 Sri Lankan accused with links to Pakistan in connection with the smuggling of drugs and arms between Sri Lanka and India.

Comments are closed.