ಭಾನುವಾರ, ಏಪ್ರಿಲ್ 27, 2025
HomeSportsCricketಬೆಳಗಾವಿ ಕ್ರಿಕೆಟಿಗನ ಫೀಲ್ಡಿಂಗ್‌ಗೆ ಫಿದಾ ಆದ್ರು ತೆಂಡೂಲ್ಕರ್, ಅದ್ಭುತ ಕ್ಯಾಚ್‌ಗೆ ಬಹುಪರಾಕ್ ಅಂದ್ರು ಕ್ರಿಕೆಟ್ ದಿಗ್ಗಜರು

ಬೆಳಗಾವಿ ಕ್ರಿಕೆಟಿಗನ ಫೀಲ್ಡಿಂಗ್‌ಗೆ ಫಿದಾ ಆದ್ರು ತೆಂಡೂಲ್ಕರ್, ಅದ್ಭುತ ಕ್ಯಾಚ್‌ಗೆ ಬಹುಪರಾಕ್ ಅಂದ್ರು ಕ್ರಿಕೆಟ್ ದಿಗ್ಗಜರು

- Advertisement -

ಬೆಳಗಾವಿ: ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಗಲ್ಲಿ ಗಲ್ಲಿಗಳಲ್ಲೂ ಯುವಕರು ಕ್ರಿಕೆಟ್ ಆಡುತ್ತಾರೆ. ಕೆಲವರು ಲೆದರ್ ಬಾಲ್ ಕ್ರಿಕೆಟ್ ಆಡಿದರೆ, ಹೆಚ್ಚಿನವರು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾರೆ. ಎಲೆಮರೆಯ ಕಾಯಿಗಳಂತೆ ಇರುವ ಈ ಕ್ರಿಕೆಟಿಗರು ಬೆಳಕಿಗೆ ಬರುವುದೇ ವಿರಳ. ಅಂತಹ ವಿರಳ ಆಟಗಾರರ ಪೈಕಿ ಬೆಳಗಾವಿಯ ಹುಡುಗ ಕಿರಣ್ ತಾರಳೇಕರ್ ತನ್ನ ಅದ್ಭುತ ಫೀಲ್ಡಿಂಗ್ ಮೂಲಕ (Sachin Tendulkar – Kiran Taralekar) ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar)ಅವರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಕಿರಣ್ ತಾರಳೇಕರ್ (Kiran Taralekar) ಫೀಲ್ಡಿಂಗ್ ಕೌಶಲ್ಯಕ್ಕೆ ಕೆಲ ವಿದೇಶೀ ಆಟಗಾರರೂ ಬೆರಗಾಗಿದ್ದಾರೆ.

ಬೆಳಗಾವಿಯಲ್ಲಿ ಮೂರು ದಿನಗಳ ಹಿಂದೆ ಟೆನಿಸ್‌ ಬಾಲ್ ಕ್ರಿಕೆಟ್ ಟೂರ್ನಿಯೊಂದು ನಡೆದಿತ್ತು. ಟೂರ್ನಿಯ ಪಂದ್ಯವೊಂದರಲ್ಲಿ ಬ್ಯಾಟ್ಸ್’ಮನ್ ಬಾರಿಸಿದ ಚೆಂಡನ್ನು ಕಿರಣ್ ತಾರಳೇಕರ್, ಬೌಂಡರಿ ಗೆರೆಯ ಬಳಿ ಅದ್ಭುತವಾಗಿ ತಡೆದಿದ್ದ. ಬೌಂಡರಿಯಾಚೆ ಹೋದ ಚೆಂಡನ್ನು ಗಾಳಿಯಲ್ಲಿ‌‌ ನೆಗೆದು ಹಿಡಿದಿದ್ದ ಕಿರಣ್, ಬೌಂಡರಿ ಗೆರೆ ದಾಟುವ ಮುನ್ನ ಕೈಯಲ್ಲಿದ್ದ ಚೆಂಡನ್ನು ಮೇಲಕ್ಕೆಸೆದಿದ್ದ. ಆದರೆ ಚೆಂಡು ಸೀಮಾರೇಖೆಯ ಆಚೆ ಬೀಳುತ್ತಿದ್ದಂತೆ ಕ್ಷಣಮಾತ್ರದಲ್ಲಿ ಗಾಳಿಯಲ್ಲಿ ಹಾರಿ ಫುಟ್ಬಾಲ್ ಶೈಲಿಯಲ್ಲಿ ಚೆಂಡನ್ನು ಕಾಲಿನಿಂದ ಒದ್ದು ಮೈದಾನಕ್ಕೆ ಒಳಕ್ಕೆ ಅಟ್ಟಿದ್ದ.

ಗಾಳಿಯಲ್ಲಿ ತೇಲಿ ಬಂದ ಚೆಂಡನ್ನು ಮತ್ತೊಬ್ಬ ಆಟಗಾರ ಹಿಡಿದಿದ್ದ. ಹೀಗೆ ಕ್ರಿಕೆಟ್ ಜಗತ್ತು ಕಂಡು ಕೇಳರಿಯದ ಅದ್ಭುತ ಕ್ಯಾಚ್’ಗೆ ಆ ಪಂದ್ಯ ಸಾಕ್ಷಿಯಾಗಿತ್ತು.ಕಿರಣ್ ತಾರಳೇಕರ್’ನ ಫೀಲ್ಡಿಂಗ್ ಕೌಶಲ್ಯದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ವಿಡಿಯೋ ತುಣುಕನ್ನ ರಿಟ್ವೀಟ್ ಮಾಡಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, “ಫುಟ್ಬಾಲ್ ಆಡಲು ಗೊತ್ತಿರುವ ವ್ಯಕ್ತಿಯನ್ನು ನೀವು ಕ್ರಿಕೆಟ್‌ ಮೈದಾನಕ್ಕೆ ಕರೆ ತಂದಾಗ ಹೀಗೇ ಆಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರಷ್ಟೇ ಅಲ್ಲದೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಕೂಡ ಕಿರಣ್ ತಾರಳೇಕರ್’ನ ಅದ್ಭುತ ಕ್ಯಾಚ್’ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಖಂಡಿತಾ ಇದು ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಜಿಮ್ಮಿ ನೀಶಮ್ ಕೂಡ ಇದೇ ವಿಡಿಯೋವನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದು, “ನಿಜಕ್ಕೂ ಅತ್ಯದ್ಭುತ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Prasidh Krishna : ಪ್ರಸಿದ್ಧ್ ಕೃಷ್ಣಗೆ ಕ್ರಿಕೆಟ್ ಅವಕಾಶ ಕೊಟ್ಟ ಕರ್ನಾಟಕಕ್ಕಿಂತ ಐಪಿಎಲ್ ಟೂರ್ನಿಯೇ ಮುಖ್ಯವಾಯ್ತಾ?

ಇದನ್ನೂ ಓದಿ : Narenda Modi : ರಾಜಭವನದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್

ಇದನ್ನೂ ಓದಿ : Prasidh Krishna : ಪ್ರಸಿದ್ಧ್ ಕೃಷ್ಣಗೆ ಕ್ರಿಕೆಟ್ ಅವಕಾಶ ಕೊಟ್ಟ ಕರ್ನಾಟಕಕ್ಕಿಂತ ಐಪಿಎಲ್ ಟೂರ್ನಿಯೇ ಮುಖ್ಯವಾಯ್ತಾ?

Sachin Tendulkar – Kiran Taralekar: Belagavi cricketer’s fielding, Bahuparak Andru Tendulkar’s brilliant catch

RELATED ARTICLES

Most Popular