ಮಂಗಳವಾರ, ಏಪ್ರಿಲ್ 29, 2025
HomeSportsCricketSachin Tendulkar : ರಾಷ್ಟ್ರೀಯ ಕ್ರೀಡಾ ದಿನದಂದು ಟೆನಿಸ್ ಬಾಲ್ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್

Sachin Tendulkar : ರಾಷ್ಟ್ರೀಯ ಕ್ರೀಡಾ ದಿನದಂದು ಟೆನಿಸ್ ಬಾಲ್ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್

- Advertisement -

ಮುಂಬೈ: ಆಗಸ್ಟ್ 29 ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಹುಟ್ಟಿದ ದಿನ. ದೇಶದ ಸರ್ವಶ್ರೇಷ್ಠ ಕ್ರೀಡಾ ದಿಗ್ಗಜನ ಜನ್ಮದಿನವನ್ನು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ (National Sports Day) ಆಚರಿಸಲಾಗುತ್ತದೆ.(Sachin Tendulkar ) ರಾಷ್ಟ್ರೀಯ ಕ್ರೀಡಾ ದಿನವನ್ನು ಕ್ರೀಡಾಪಟುಗಳು ತಮ್ಮದೇ ರೀತಿಯಲ್ಲಿ ಆಚರಿಸಿದ್ದಾರೆ. ಹಲವರು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಆದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾತ್ರ ಟೆನಿಸ್ ಬಾಲ್ ಕ್ರಿಕೆಟ್ (tennis ball cricket ) ಆಡುವ ಮೂಲಕ ರಾಷ್ಟ್ರೀಯ ಕ್ರೀಡಾ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

ಹುಟ್ಟೂರು ಮುಂಬೈನ ಇಂಡೋರ್ ಬ್ಯಾಡ್ಮಿಂಟನ್ ಕೋರ್ಟ್’ನಲ್ಲಿ ಸಚಿನ್ ತೆಂಡೂಲ್ಕರ್ ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದಾರೆ. ಬಹಳ ದಿನಗಳ ನಂತರ ಬ್ಯಾಟ್ ಹಿಡಿದ ಬ್ಯಾಟಿಂಗ್ ದಿಗ್ಗಜ ಸಚಿನ್, ತಮ್ಮ ನೆಚ್ಚಿನ ಸ್ಟ್ರೇಟ್ ಡ್ರೈವ್ ಸಹಿತ ಹಲವಾರು ಶಾಟ್’ಗಳನ್ನು ಬಾರಿಸಿದರು. ಆ ವೀಡಿಯೊವನ್ನು ಸ್ವತಃ ಸಚಿನ್ ಅವರೇ ತಮ್ಮ ಟ್ವಿಟರ್ ಆಕೌಂಟ್’ನಲ್ಲಿ ಪ್ರಕಟಿಸಿದ್ದು, “ಇವತ್ತು ರಾಷ್ಟ್ರೀಯ ಕ್ರೀಡಾ ದಿನ. ಈ ದಿನ ನಾನು ಅತ್ಯಂತ ಪ್ರೀತಿಸಿದ ಮತ್ತು ತನ್ನ ಜೀವನವನ್ನೇ ಅರ್ಪಿಸಿದ ಕ್ರೀಡೆಯನ್ನು ಆಡದಿರಲು ಹೇಗೆ ಸಾಧ್ಯ” ಎಂದು ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ.

ಟೆನಿಸ್ ಬಾಲ್ ಕ್ರಿಕೆಟ್’ನಲ್ಲಿ ಸಚಿನ್ ತೆಂಡೂಲ್ಕರ್ ಬಾರಿಸಿದ ಹೊಡೆತಗಳು, ಅದರಲ್ಲೂ ವಿಶೇಷವಾಗಿ ಅವರ ಫೇವರಿಟ್ ಸ್ಟ್ರೇಟ್ ಡ್ರೈವ್ ಶಾಟ್ ಕ್ರಿಕೆಟ್ ಪ್ರಿಯನ ಮನಗೆದ್ದಿದೆ. ತಮ್ಮ ಕ್ರಿಕೆಟ್ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಸ್ಟ್ರೇಟ್ ಡ್ರೈವನ್ನು ಅದ್ಭುತವಾಗಿ ಬಾರಿಸುತ್ತಿದ್ದರು. ಸ್ಟ್ರೇಟ್ ಡ್ರೈವ್ ಹೊಡೆತವನ್ನು ಸಚಿನ್ ಅವರಿಗಿಂತ ಅದ್ಭುತವಾಗಿ ಆಡಿದ ಮತ್ತೊಬ್ಬ ಆಟಗಾರನನ್ನು ಕ್ರಿಕೆಟ್ ಜಗತ್ತು ಕಂಡಿಲ್ಲ.

ಇದನ್ನೂ ಓದಿ: ಜೊತೆ ಜೊತೆಯಲಿ ಆರ್ಯವರ್ಧನ್​ ಆಗಿ ಬರಲಿದ್ದಾರೆ ನಟ ಹರೀಶ್​ ರಾಜ್​​

49 ವರ್ಷದ ಸಚಿನ್ ತೆಂಡೂಲ್ಕರ್ 2013ರಲ್ಲಿ ಕ್ರಿಕೆಟ್’ನಿಂದ ನಿವೃತ್ತಿಯಾಗಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬಹುತೇಕ ಬ್ಯಾಟಿಂಗ್ ದಾಖಲೆಗಳೂ ಇವತ್ತಿಗೂ ಸಚಿನ್ ಅವರ ಹೆಸರಲ್ಲೇ ಇದೆ. ವೃತ್ತಿಜೀವನದಲ್ಲಿ ಒಟ್ಟು 100 ಶತಕಗಳು, ಏಕದಿನ ಕ್ರಿಕೆಟ್’ನಲ್ಲಿ 49 ಶತಕ, ಟೆಸ್ಟ್ ಕ್ರಿಕೆಟ್’ನಲ್ಲಿ 51 ಶತಕ, ಏಕದಿನ ಕ್ರಿಕೆಟ್’ನಲ್ಲಿ ವಿಶ್ವದಾಖಲೆಯ 18,426 ರನ್, ಟೆಸ್ಟ್ ಕ್ರಿಕೆಟ್’ನಲ್ಲಿ 15,921 ರನ್’ಗಳ ವಿಶ್ವದಾಖಲೆ ಸಚಿನ್ ಹೆಸರಲ್ಲಿದೆ.

ಇದನ್ನೂ ಓದಿ : Hardik Pandya MS Dhoni : ಹಾರ್ದಿಕ್ ಪಾಂಡ್ಯಗೆ ಮ್ಯಾಚ್ ಫಿನಿಷಿಂಗ್ ಪಾಠ ಕಲಿಸಿದ ದ್ರೋಣಾಚಾರ್ಯ ಇವರೇ

Sachin Tendulkar playing tennis ball cricket on the badminton court on National Sports Day

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular