Savarkar adhyayana peetha : ತುಮಕೂರಿನಲ್ಲೂ ಹೆಚ್ಚಾಯ್ತು ಸಾವರ್ಕರ್​ ದಂಗಲ್​ : ಸಾವರ್ಕರ್​ ಅಧ್ಯಯನ ಪೀಠ ಸ್ಥಾಪಿಸದಂತೆ ಒತ್ತಾಯ

ತುಮಕೂರು : Savarkar adhyayana peetha : ರಾಜ್ಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾವರ್ಕರ್​ ಫೋಟೋ ವಿಚಾರವಾಗಿ ಉಂಟಾದ ಘರ್ಷಣೆಗಳು ಇನ್ನೂ ನೆನಪಿನಲ್ಲಿದೆ. ಶಿವಮೊಗ್ಗದಲ್ಲಂತೂ ಸಾವರ್ಕರ್​ ಫೋಟೋ ವಿಚಾರದ ಗಲಾಟೆಯು ಚಾಕು ಇರಿತದವರೆಗೂ ಹೋಗಿ ತಲುಪಿದೆ. ಇದಾದ ಬಳಿಕ ಇನ್ನೂ ಒಂದು ಹೆಜ್ಜೆ ಮುಂದುವರಿದ ಬಿಜೆಪಿಗರು ಈ ಬಾರಿ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಗಣಪತಿ ಮೂರ್ತಿಯ ಜೊತೆಯಲ್ಲಿ ಸಾವರ್ಕರ್​ ಫೋಟೋವನ್ನು ಇಡಲೂ ಸಹ ಪ್ಲಾನ್​ ಮಾಡ್ತಿದ್ದಾರೆ. ಈ ಎಲ್ಲದರ ನಡುವೆ ಇದೀಗ ತುಮಕೂರಿನಲ್ಲಿ ಸದ್ದಿಲ್ಲದೇ ಸಾವರ್ಕರ್​ ದಂಗಲ್​ ಆರಂಭಗೊಂಡಿದೆ.


ಆಜಾದಿ ಕಾ ಅಮೃತ ಮಹೋತ್ಸವದ ದಿನದಂದು ಸಾವರ್ಕರ್​ ಫೋಟೋ ಹರಿಯುವ ಮೂಲಕ ಶುರುವಾದ ವಿವಾದವು ಇದೀಗ ತುಮಕೂರು ವಿಶ್ವವಿದ್ಯಾಲಯದಲ್ಲಿಯೂ ಸಹ ಸಾವರ್ಕರ್​ ಪೀಠದ ಕಿಚ್ಚು ಹೆಚ್ಚಾಗುವಂತೆ ಮಾಡಿದೆ. ತುಮಕೂರು ವಿಶ್ವ ವಿದ್ಯಾಲಯವು ಸಾವರ್ಕರ್​ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾಗಿದೆ. ಈ ವಿಚಾರವಾಗಿ ಇದೀಗ ಪರ ವಿರೋಧದ ಚರ್ಚೆಯು ಜೋರಾಗಿ ನಡೆಯುತ್ತಿದೆ.


ವಿವಿ ಸಿಂಡಿಕೇಟ್​ ಸಭೆಯಲ್ಲಿ ಸಾವರ್ಕರ್​ ಅಧ್ಯಯನ ಪೀಠವನ್ನು ಆರಂಭಿಸಲು ಗ್ನೀನ್​ ಸಿಗ್ನಲ್​ ನೀಡಲಾಗಿದೆ. ವಿವಿ ಸಿಂಡಿಕೇಟ್​ ಸದಸ್ಯ ಟಿ.ಡಿ ವಿನಯ್​ ಸಾವರ್ಕರ್​ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಪ್ರಸ್ತಾಪ ಮಾಡಿದ್ದರು. ಅಲ್ಲದೇ ಈ ಪೀಠವನ್ನು ಸ್ಥಾಪನೆ ಮಾಡಲು ವೈಯಕ್ತಿಕವಾಗಿ 1 ಲಕ್ಷ ರೂಪಾಯಿಗಳನ್ನು ಠೇವಣಿ ರೂಪದಲ್ಲಿ ನೀಡಿದ್ದಾರೆ. ಪೀಠ ಸ್ಥಾಪನೆ ಮಾಡಲು ಸಿಂಡಿಕೇಟ್​ ಸದಸ್ಯರು ಒಪ್ಪಿಗೆ ಕೂಡ ನೀಡಿದ್ದರು. ಇದಾದ ಬಳಿಕ ಸರ್ಕಾರದಿಂದ ಅನುಮತಿಯನ್ನು ಕೋರಿ ತುಮಕೂರು ವಿವಿ ಪತ್ರವನ್ನು ಕಳುಹಿಸಿದೆ.


ಆದರೆ ಈ ನಡುವೆ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಯಾವುದೇ ಕಾರಣಕ್ಕೂ ಸಾವರ್ಕರ್​ ಪೀಠ ಸ್ಥಾಪನೆಯಾಗಬಾರದು ಎಂದು ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸಾವರ್ಕರ್​ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಬೇಡಿ ಎಂದು ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ತುಮಕೂರು ವಿಶ್ವ ವಿದ್ಯಾಲಯದ ಕುಲಪತಿಗಳ ಕಚೇರಿ ಎದುರು ಪ್ರತಿಭಟನೆ ನಡೆದಿದೆ.


ತುನಕೂರು ಜಿಲ್ಲಾ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟ, ಎನ್​​ಎಸ್​ಯುಐ, ಶರಣರ ಸೇನೆ, ದಲಿತ ವಿದ್ಯಾರ್ಥಿ ಪರಿಷತ್​, ಭಾರತೀಯ ವಿದ್ಯಾರ್ಥಿ ದಳ, ಎಸ್​ಎಫ್​ಸಿ ಸೇರಿದಂತೆ 12ಕ್ಕೂ ಅಧಿಕ ಸಂಘಟನೆಗಳು ಒಂದಾಗಿ ಈ ಸಾವರ್ಕರ್​ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿವೆ .ದೇಶದ್ರೋಹಿ ಸಾವರ್ಕರ್​ ಎಂದು ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಸಾವರ್ಕರ್​ ಅಧ್ಯಯನ ಪೀಠ ನಿರ್ಮಾಣ ಯೋಜನೆಯನ್ನು ಕೈ ಬಿಡದೇ ಹೋದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಇದನ್ನು ಓದಿ : zee kannada jote joteyali : ಜೊತೆ ಜೊತೆಯಲಿ ಆರ್ಯವರ್ಧನ್​ ಆಗಿ ಬರಲಿದ್ದಾರೆ ನಟ ಹರೀಶ್​ ರಾಜ್​​

ಇದನ್ನೂ ಓದಿ : Mithali Raj Join BJP : ಬಿಜೆಪಿ ಸೇರ್ತಾರಾ ಸ್ಟಾರ್ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ?

Opposition to establishment of Savarkar adhyayana peetha in Tumkur

Comments are closed.