ಸೋಮವಾರ, ಏಪ್ರಿಲ್ 28, 2025
HomeSportsCricketSachin Vs Virat : ಅಂದು ಸಚಿನ್, ಇಂದು ಕಿಂಗ್ ಕೊಹ್ಲಿ : ಬಾಂಗ್ಲಾದೇಶ ವಿರುದ್ಧವೇ...

Sachin Vs Virat : ಅಂದು ಸಚಿನ್, ಇಂದು ಕಿಂಗ್ ಕೊಹ್ಲಿ : ಬಾಂಗ್ಲಾದೇಶ ವಿರುದ್ಧವೇ ನೀಗಿತು ಶತಕದ ಬರ

- Advertisement -

ಬೆಂಗಳೂರು: ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮಧ್ಯೆ ಸಾಕಷ್ಟು (Sachin Vs Virat) ಹೋಲಿಕೆಗಳಿವೆ. ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಒಂದೊಂದೇ ವಿಶ್ವದಾಖಲೆಗಳನ್ನು ಪುಡಿಗಟ್ಟುತ್ತಾ ಮುನ್ನುಗ್ಗುತ್ತಿದ್ದಾರೆ.

ಶನಿವಾರ ಬಾಂಗ್ಲಾದೇಶ ವಿರುದ್ಧ ಛಟ್ಟೋಗ್ರಾಮ್’ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 72ನೇ ಶತಕ ಬಾರಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳನ್ನು ದಾಖಲಿಸಿದವರ ಸಾಲಿನಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ (71 ಶತಕ) ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದರು. 100 ಶತಕಗಳನ್ನು ಬಾರಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ (Most centuries in international cricket).

ದಾಖಲೆಗಳ ಆಟದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಮಧ್ಯೆ ಮತ್ತೊಂದು ಸಾಮ್ಯತೆಯಿದೆ. 100ನೇ ಅಂತಾರಾಷ್ಟ್ರೀಯ ಶತಕಕ್ಕಾಗಿ ಸತತ ಒಂದು ವರ್ಷ ಕಾದಿದ್ದ ಸಚಿನ್ ಕೊನೆಗೂ ಆ ಶತಕವನ್ನು ಬಾರಿಸಿದ್ದು ಬಾಂಗ್ಲಾದೇಶ ವಿರುದ್ಧ. ಬಾಂಗ್ಲಾದೇಶ ವಿರುದ್ಧ 2012ರಲ್ಲಿ ಮೀರ್’ಪುರ್’ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 100ನೇ ಶತಕ ಬಾರಿಸಿದ್ದರು.

ಇದೀಗ ವಿರಾಟ್ ಕೊಹ್ಲಿ ಸರದಿ. ಸತತ 40 ತಿಂಗಳುಗಳಿಂದ ಏಕದಿನ ಕಿಂಗ್ ಕೊಹ್ಲಿ ಏಕದಿನ ಶತಕದ ಬರ ಎದುರಿಸುತ್ತಾ ಬಂದಿದ್ದರು. 2019ರ ಆಗಸ್ಟ್ 14ರಂದು ಪೋರ್ಟ್ ಆಫ್ ಸ್ಪೇನ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ ನಂತರ, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ ಅವರ ಬ್ಯಾಟ್’ನಿಂದ ಶತಕ ಸಿಡಿದಿರಲಿಲ್ಲ. ವಿಶೇಷ ಏನಂದ್ರೆ ಸಚಿನ್ ತೆಂಡೂಲ್ಕರ್ ಅವರಂತೆ ವಿರಾಟ್ ಕೊಹ್ಲಿ ಕೂಡ ಬಾಂಗ್ಲಾದೇಶ ವಿರುದ್ಧವೇ ಶತಕದ ಬರ ನೀಗಿಸಿಕೊಂಡಿದ್ದಾರೆ.

ಇದನ್ನೂ ಓದಿ : Karnataka Ranji Team : ಕರ್ನಾಟಕ ರಣಜಿ ತಂಡಕ್ಕೆ ಮಯಾಂಕ್ ಸಾರಥ್ಯ, ಕರುಣ್ ನಾಯರ್‌ಗೆ ಇಲ್ಲೂ ಇಲ್ಲ ಸ್ಥಾನ

ಇದನ್ನೂ ಓದಿ : Rahul captaincy lucky : ರಾಹುಲ್ ನಾಯಕತ್ವ ಸಹ ಆಟಗಾರರಿಗೆ ಅದೃಷ್ಟ, ಕಿಂಗ್ ಕೊಹ್ಲಿ, ಗಿಲ್, ಇಶಾನ್.. ಏನಿದು ಅದೃಷ್ಟದಾಟ?

ಇದನ್ನೂ ಓದಿ : India beat Bangladesh by 227 runs : ಇಶಾನ್ ದ್ವಿಶತಕ, ಕೊಹ್ಲಿ ಶತಕ; ಕ್ಲೀನ್ ಸ್ವೀಪ್ ಅವಮಾನ ತಪ್ಪಿಸಿದ ರಾಹುಲ್ ನಾಯಕತ್ವ

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 782 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ 100 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ 536 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ 72 ಶತಕಗಳನ್ನು ಬಾರಿಸಿದ್ದಾರೆ. ರಿಕಿ ಪಾಂಟಿಂಗ್ 668 ಇನ್ನಿಂಗ್ಸ್’ಗಳಿಂದ 71 ಶತಕಗಳನ್ನು ಸಿಡಿಸಿದ್ದಾರೆ. ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕರ 63 ಶತಗಳೊಂದಿಗೆ 4ನೇ ಸ್ಥಾನದಲ್ಲಿದ್ರೆ, ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜಾಕ್ ಕಾಲೀಸ್ 62 ಶತಕಗಳನ್ನು ಸಿಡಿಸಿ 5ನೇ ಸ್ಥಾನದಲ್ಲಿದ್ದಾರೆ.

Sachin Vs Virat: Then Sachin, Today King Kohli: Century drought ended against Bangladesh

RELATED ARTICLES

Most Popular