Rahul captaincy lucky : ರಾಹುಲ್ ನಾಯಕತ್ವ ಸಹ ಆಟಗಾರರಿಗೆ ಅದೃಷ್ಟ, ಕಿಂಗ್ ಕೊಹ್ಲಿ, ಗಿಲ್, ಇಶಾನ್.. ಏನಿದು ಅದೃಷ್ಟದಾಟ?

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ನಾಯಕತ್ವದ ಟೀಮ್ ಇಂಡಿಯಾದ ಸಹ ಆಟಗಾರರಿಗೆ (Rahul captaincy lucky) ಅದೃಷ್ಟ. ರಾಹುಲ್ ನಾಯಕತ್ವ ವಹಿಸಿದಾಗಲೆಲ್ಲಾ ಸಹ ಆಟಗಾರರು ಶತಕಗಳನ್ನು ಬಾರಿಸಿ ವಿಜೃಂಭಿಸಿದ್ದಾರೆ. ಕಿಂಗ್ ಕೊಹ್ಲಿ (Virat Kohli), ಶುಭಮನ್ ಗಿಲ್ (Shubman Gill), ಈಗ ಇಶಾನ್ ಕಿಶನ್ (Ishan Kishan).

ಬಾಂಗ್ಲಾದೇಶ ವಿರುದ್ಧ ಛಟ್ಟೋಗ್ರಾಮ್’ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವವನ್ನು ಕೆ.ಎಲ್ ರಾಹುಲ್ ವಹಿಸಿಕೊಂಡಿದ್ದರು. ರೋಹಿತ್ ಶರ್ಮಾ 2ನೇ ಪಂದ್ಯದಲ್ಲಿ ಎಡಗೈ ಹೆಬ್ಬರಳ ಗಾಯಕ್ಕೊಳಗಾಗಿದ್ದ ಕಾರಣ, ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿ ರಾಹುಲ್ ಹೆಗಲೇರಿತ್ತು. ರಾಹುಲ್ ಸಾರಥ್ಯ ವಹಿಸಿದ ಪಂದ್ಯದಲ್ಲಿ ಯುವ ವಿಕೆಟ್ ಕೀಪರ್ ಓಪನರ್ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಬಾರಿಸಿದ್ರೆ, ವಿರಾಟ್ ಕೊಹ್ಲಿ 40 ತಿಂಗಳುಗಳ ನಂತರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಮೋಘ ಶತಕ ಸಿಡಿಸಿದರು.

ರಾಹುಲ್ ಅವರ ನಾಯಕತ್ವ ವಿರಾಟ್ ಕೊಹ್ಲಿ ಅವರ ಪಾಲಿಗೆ ಅದೃಷ್ಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸತತ 3 ವರ್ಷಗಳಿಂದ ಕಿಂಗ್ ಕೊಹ್ಲಿ ಶತಕದ ಬರ ಎದುರಿಸಿದ್ದಾಗ ಕೊನೆಗೂ ಆ ಶತಕ ಬಂದದ್ದು ರಾಹುಲ್ ಅವರ ನಾಯಕತ್ವದಲ್ಲೇ. ಕಳೆದ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯ ಅಫ್ಘಾನಿಸ್ತಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸುವ ಮೂಲಕ ಶತಕದ ಬರ ನೀಗಿಸಿಕೊಂಡಿದ್ದರು. ವಿಶೇಷವೆಂದರೆ ಅದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಾಟ್ ಕೊಹ್ಲಿ ಸಿಡಿಸಿದ್ದ ಚೊಚ್ಚಲ ಶತಕವೂ ಹೌದು. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದು ಕೆ.ಎಲ್ ರಾಹುಲ್.

ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸದೆ 40 ತಿಂಗಳುಗಳೇ ಕಳೆದಿದ್ದವು. ಏಕದಿನ ಕ್ರಿಕೆಟ್’ನ ಶತಕದ ಬರವನ್ನು ಕಿಂಗ್ ಕೊಹ್ಲಿ, ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದಲ್ಲೇ ನೀಗಿಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಛಟ್ಟೋಗ್ರಾಮ್’ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 113 ರನ್ ಗಳಿಸಿದ್ದರು.ಇನ್ನು ಭಾರತದ ಕಳೆದ ಜಿಂಬಾಬ್ವೆ ಪ್ರವಾಸದ ಏಕದಿನ ಸರಣಿಯಲ್ಲಿ ಯುವ ಆರಂಭಿಕ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಏಕದಿನ ಕ್ರಿಕೆಟ್’ನಲ್ಲಿ ಚೊಚ್ಚಲ ಶತರ ಸಿಡಿಸಿದ್ದರು.

ಇದನ್ನೂ ಓದಿ : Karnataka Ranji Team : ಕರ್ನಾಟಕ ರಣಜಿ ತಂಡಕ್ಕೆ ಮಯಾಂಕ್ ಸಾರಥ್ಯ, ಕರುಣ್ ನಾಯರ್‌ಗೆ ಇಲ್ಲೂ ಇಲ್ಲ ಸ್ಥಾನ

ಇದನ್ನೂ ಓದಿ : India beat Bangladesh by 227 runs : ಇಶಾನ್ ದ್ವಿಶತಕ, ಕೊಹ್ಲಿ ಶತಕ; ಕ್ಲೀನ್ ಸ್ವೀಪ್ ಅವಮಾನ ತಪ್ಪಿಸಿದ ರಾಹುಲ್ ನಾಯಕತ್ವ

ಇದನ್ನೂ ಓದಿ : Virat Kohli 72nd Century : ವಿರಾಟ್ ಕೊಹ್ಲಿ 72ನೇ ಅಂತಾರಾಷ್ಟ್ರೀಯ ಶತಕ, ಪಾಂಟಿಂಗ್ ದಾಖಲೆ ಮುರಿದ ಕಿಂಗ್

ಆ ಸರಣಿಯಲ್ಲೂ ಭಾರತ ತಂಡದ ನಾಯಕರಾಗಿದ್ದದ್ದು ಕೆ.ಎಲ್ ರಾಹುಲ್. ಇದೀಗ ಇಶಾನ್ ಕಿಶನ್ ಸರದಿ. ರಾಹುಲ್ ನಾಯಕತ್ವದಲ್ಲೇ ಇಶಾನ್ ಕಿಶನ್ ಏಕದಿನ ವೃತ್ತಿಜೀವನದ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದ ಎಡಗೈ ಬ್ಯಾಟ್ಸ್’ಮನ್ ಇಶಾನ್ ಕಿಶನ್ ಕೇವಲ 131 ಎಸೆತಗಳಲ್ಲಿ 24 ಬೌಂಡರಿ ಹಾಗೂ 10 ಸಿಕ್ಸರ್’ಗಳ ನೆರವಿನಿಂದ ಸಿಡಿಲಬ್ಬರದ 210 ರನ್ ಬಾರಿಸಿದ್ದರು. ಈ ಪೈಕಿ 156 ರನ್’ಗಳನ್ನು ಬೌಂಡರಿ ಸಿಕ್ಸರ್’ಗಳ ಮೂಲಕೇ ಬಾರಿಸಿದ್ದು ಮತ್ತೊಂದು ವಿಶೇಷ.

Rahul captaincy lucky : Rahul captaincy lucky for teammates, King Kohli, Gill, Ishan.. What is lucky?

Comments are closed.