ಭಾನುವಾರ, ಏಪ್ರಿಲ್ 27, 2025
HomeSportsCricketShikhar Dhawan out : ಟೀಮ್ ಇಂಡಿಯಾದಲ್ಲಿ ಶಿಖರ್ ಶಿಕಾರಿಗೆ ಬ್ರೇಕ್, ಒಂದು ದ್ವಿಶತಕಕ್ಕೆ ಅಂತ್ಯಗೊಂಡಿತು...

Shikhar Dhawan out : ಟೀಮ್ ಇಂಡಿಯಾದಲ್ಲಿ ಶಿಖರ್ ಶಿಕಾರಿಗೆ ಬ್ರೇಕ್, ಒಂದು ದ್ವಿಶತಕಕ್ಕೆ ಅಂತ್ಯಗೊಂಡಿತು ಗಬ್ಬರ್ ಆಟ!

- Advertisement -

ಬೆಂಗಳೂರು: ಟೀಮ್ ಇಂಡಿಯಾದ ಅನುಭವಿ ಎಡಗೈ ಓಪನರ್ ಶಿಖರ್ ಧವನ್ (Shikhar Dhawan out) ಅವರ ಅಂತರಾಷ್ಟ್ರೀಯ ವೃತ್ತಿಜೀವನ ಬಹುತೇಕ ಅಂತ್ಯಗೊಂಡಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ (India Vs Sri Lanka ODI series) ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ 37 ವರ್ಷದ ಶಿಖರ್ ಧವನ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಇದು ಶಿಖರ್ ವೃತ್ತಿಜೀವನ ಅಂತ್ಯದ ಸೂಚನೆ ಎಂದೇ ಹೇಳಲಾಗುತ್ತಿದೆ.

ಟೆಸ್ಟ್ ಹಾಗೂ ಟಿ20 ತಂಡಗಳಿಂದ ಹೊರ ಬಿದ್ದಿದ್ದ ಶಿಖರ್ ಧವನ್ ಏಕದಿನ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ಏಕದಿನ ತಂಡದ ನಾಯಕತ್ವ ಕೂಡ ವಹಿಸಿದ್ದರು. ಆದರೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಪ್ರವಾಸದ ವೈಫಲ್ಯದ ಹಿನ್ನೆಲೆಯಲ್ಲಿ ಶಿಖರ್ ಧವನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ನ್ಯೂಜಿಲೆಂಡ್ ಹಾಗೂ ಬಾಂಗ್ಲಾ ಪ್ರವಾಸದಲ್ಲಿ ಆಡಿದ ತಮ್ಮ ಕೊನೆಯ ಐದು ಇನ್ನಿಂಗ್ಸ್’ಗಳಲ್ಲಿ ಶಿಖರ್ ಧವನ್ ಕೇವಲ 49 ರನ್ ಗಳಿಸಿದ್ದರು.

ಒಂದೆಡೆ ಶಿಖರ್ ಧವನ್ ಅವರ ಕಳಪೆ ಫಾರ್ಮ್, ಮತ್ತೊಂದೆಡೆ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಮತ್ತೊಬ್ಬ ಯುವ ಎಡಗೈ ಓಪನರ್ ಇಶಾನ್ ಕಿಶನ್ (Ishan Kishan) ಭರ್ಜರಿ ದ್ವಿಶತಕ ಬಾರಿಸಿರುವುದು ಶಿಖರ್ ಏಕದಿನ ತಂಡದಿಂದ ಹೊರ ಬೀಳಲು ಕಾರಣ. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶಾನ್ ಕಿಶನ್ ಇತ್ತೀಚೆಗಷ್ಟೇ ನಡೆದ ಬಾಂಗ್ಲಾದೇಶ ವಿರುದ್ಧದದ 3ನೇ ಏಕದಿನ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ್ದರು.

ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಯುವ ಆಟಗಾರರಿಗೆ ಹೆಚ್ಚು ಹೆಚ್ಚು ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ.ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಜನವರಿ 3ರಂದು ಮುಂಬೈನಲ್ಲಿ ಆರಂಭವಾಗಲಿದೆ. ನಂತರ 3 ಪಂದ್ಯಗಳ ಏಕದಿನ ಸರಣಿ ಜನವರಿ 10ರಂದು ಅಸ್ಸಾಂನ ಗುವಾಹಟಿಯಲ್ಲಿ ಆರಂಭವಾಗಲಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ (Indian team for Sri Lanka T20 series):
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡ, ರಾಹುಲ್ ತ್ರಿಪಾಛಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಕೇಶ್ ಕುಮಾರ್.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ (Indian team for Sri Lanka ODI series):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ : R Samath Ranji century: ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಬಾರಿಸಿದ ಸಮರ್ಥ್

ಇದನ್ನೂ ಓದಿ : David Warner double century: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ವಾರ್ನರ್ ದ್ವಿಶತಕ, ಸಚಿನ್ ದಾಖಲೆ ಸರಿಗಟ್ಟಿದ ಕ್ರಿಕೆಟ್ ಬಾಕ್ಸರ್

ಇದನ್ನೂ ಓದಿ : Avinash Singh: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಶ್ಮೀರದ ಆಟೋ ಚಾಲಕನ ಮಗ

ಭಾರತ Vs ಶ್ರೀಲಂಕಾ ಸರಣಿಯ ವೇಳಾಪಟ್ಟಿ (India Vs Sri Lanka T20 & ODI series)
ಮೊದಲ ಟಿ20: ಜನವರಿ 03, ಮುಂಬೈ
2ನೇ ಟಿ20: ಜನವರಿ 05, ಪುಣೆ
3ನೇ ಟಿ20: ಜನವರಿ 07, ರಾಜ್’ಕೋಟ್
ಮೊದಲ ಏಕದಿನ: ಜನವರಿ 10, ಗುವಾಹಟಿ
2ನೇ ಏಕದಿನ: ಜನವರಿ 12, ಕೋಲ್ಕತಾ
3ನೇ ಏಕದಿನ: ಜನವರಿ 15, ತಿರುವನಂತಪುರಂ

Shikhar Dhawan out: Break for Shikhar Shikari in Team India, Gabbar’s game ended for a double century!

RELATED ARTICLES

Most Popular