New Year Trip : ಹೊಸ ವರ್ಷದ ವೀಕೆಂಡ್‌ನಲ್ಲಿ ಟ್ರಿಪ್‌ಗೆ ಹೋಗುತ್ತಿದ್ದೀರಾ; ಬೆಸ್ಟ್‌ ಪ್ಲೇಸ್‌ಗಳ ಬಗ್ಗೆ ಇಲ್ಲಿದೆ ಓದಿ

ಮುಂದಿನ ವರ್ಷದ ಮೊದಲ ದಿನ (January 1st, 2023) ವಾರಾಂತ್ಯದಲ್ಲಿ ಬಂದಿದೆ. ಹಾಗಾಗಿ ಬಹಳಷ್ಟು ಜನರು ಟ್ರಿಪ್‌ (Trip) ಹೋಗಲು ಯೋಚಿಸುತ್ತಿದ್ದಾರೆ. ಅದಕ್ಕಾಗಿ ವಾರಪೂರ್ತಿ ತಯಾರಿಯನ್ನು ಮಾಡುತ್ತಿದ್ದಾರೆ. ಒಬ್ಬರಿಗೊಬ್ಬರು ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಎಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆಯೆಂದರೆ ನ್ಯೂ ಇಯರ್‌ ಟ್ರಿಪ್‌ (New Year Trip) ಪ್ಲಾನ್‌ ಏನು? ಎಂದು. ನಿಮಗೂ ಯಾರಾದರೂ ಇದೇ ಪ್ರಶ್ನೆ ಕೇಳುತ್ತಿದ್ದಾರಾ? ಈ ಪ್ರಶ್ನೆಗೆ ನಿಮಗೆ ಇನ್ನೂ ಸರಿಯಾದ ಉತ್ತರ ಸಿಗಲಿಲ್ಲವಾದರೆ ಅಥವಾ ಯಾವ ಪ್ಲೇಸ್‌ ಬೆಸ್ಟ್‌ ಎಂಬ ಗೊಂದಲದಲ್ಲಿದ್ದರೆ ಇಲ್ಲಿ ಹೇಳಿರುವ ಸ್ಥಳಗಳನ್ನು ಆಯ್ದು ಕೊಳ್ಳಬಹುದು. ಹೊಸ ವರ್ಷವನ್ನು (Happy New Year 2023) ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಟ್ರಿಪ್‌ ಹೋಗುವುದರ ಮೂಲಕ ಆಚರಿಸಬಹುದು.

ಗೋವಾ :
ನ್ಯೂ ಇಯರ್‌ ಟ್ರಿಪ್‌, ಪಾರ್ಟಿಗಳ ಬಗ್ಗೆ ಮಾತನಾಡುತ್ತಿದ್ದರೆ ಗೋವಾವನ್ನು ಮರೆಯಬಹುದೇ? ಹೊಸ ವರ್ಷದ ಪಾರ್ಟಿಗಷ್ಟೆ ಗೋವಾ ಹೆಸರುವಾಸಿಯಾಗಿಲ್ಲ. ಅಲ್ಲಿನ ಬೀಚ್‌ಗಳು ಅತ್ಯಾಕರ್ಷಕವಾಗಿದೆ. ಭಾರತದ ಅತ್ಯುತ್ತಮ ತಾಣಗಳಲ್ಲಿ ಒಂದಾದ ಗೋವಾ ಸ್ನೇಹಿತರೊಂದಿಗೆ ಭೇಟಿ ನೀಡುವ ಸ್ಥಳಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಡಲತೀರಗಳು, ಬೆಟ್ಟಗಳು, ರೆಸಾರ್ಟ್‌ಗಳು, ಪ್ರೇಕ್ಷಣೀಯ ಸ್ಥಳಗಳು ಎಲ್ಲವೂ ಗೋವಾದಲ್ಲಿದೆ.

ಜೈಪುರ:
ಪಿಂಕ್‌ ಸಿಟಿ ಎಂದೇ ಖ್ಯಾತಿಗಳಿಸಿರುವ ಜೈಪುರ ಹೊಸ ವರ್ಷಾಚರಣೆಗೆ ಉತ್ತಮವಾಗಿದೆ. 2022 ಕ್ಕೆ ವಿದಾಯ ಹೇಳಲು ಈ ವರ್ಣರಂಜಿತ ನಗರವನ್ನು ಆಯ್ಕೆ ಮಾಡಿಕೊಳ್ಳಬಹುದು. ಆಕರ್ಷಕ ಪಟಾಕಿಗಳು ಮತ್ತು ಸಂಗೀತ ಹೊಸ ವರ್ಷದ ಪಾರ್ಟಿಗೆ ಹೆಚ್ಚಿನ ಮೆರುಗನ್ನು ನೀಡುತ್ತದೆ. ಜೈಪುರದಲ್ಲಿರುವ ಲೋಹಗಢ್ ಫೋರ್ಟ್ ರೆಸಾರ್ಟ್, ನಹರ್ಗಢ್ ಫೋರ್ಟ್ ಮತ್ತು ಬ್ಲ್ಯಾಕೌಟ್ ಇಲ್ಲಿಯ ಕೆಲವು ಅತ್ಯುತ್ತಮ ಪಾರ್ಟಿ ಸ್ಪಾಟ್‌ಗಳಾಗಿವೆ. ಇದು ಸ್ನೇಹಿತರೊಂದಿಗೆ ಮತ್ತು ಕುಟುಂಬದವರೊಂದಿಗೆ ನ್ಯೂ ಇಯರ್‌ ಸಂಭ್ರಮಿಸಲು ಉತ್ತಮ ಸ್ಥಳವಾಗಿದೆ.

ಮನಾಲಿ:
ಪ್ರವಾಸಿಗರ ಪ್ರೀತಿಯ ಸ್ಥಳಗಳಲ್ಲಿ ಮನಾಲಿ ಬಹಳ ಜನಪ್ರಿಯವಾಗಿದೆ. ಟಿಬೆಟಿಯನ್ ಮಠ, ವಾನ್ ವಿಹಾರ್, ವಶಿಷ್ಠ ದೇವಾಲಯ ಮತ್ತು ಬೆಟ್ಟಗಳ ನಡುವೆ ಹೊಸ ವರ್ಷಾಚರಣೆಯು ಆ ದಿನವನ್ನು ಸ್ಮರಣೀಯವಾಗಿಸುತ್ತದೆ. ಪ್ಯಾರಾಚೂಟಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಸ್ಕೇಟಿಂಗ್ ಇಲ್ಲಿನ ಕೆಲವು ಪ್ರಮುಖ ಆಕರ್ಷಣೆಗಲ್ಲಿ ಒಂದಾಗಿದೆ. ಇದು ಸಾಹಸ ಪ್ರಿಯರ ನೆಚ್ಚಿನ ತಾಣವಾಗಿದೆ. ಇದರೊಂದಿಗೆ ಇಲ್ಲಿನ ಪ್ರಸಿದ್ಧ ಮಣಿಕರಣ್ ಸಾಹಿಬ್ ಗುರುದ್ವಾರವೂ ಹೊಸ ವರ್ಷದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.

ಶಿಮ್ಲಾ:
ವರ್ಷದ ಕೊನೆಯ ದಿನಗಳನ್ನು ಆನಂದಿಸಲು ನೀವು ಶೀತ ಮತ್ತು ಹಿಮದಿಂದ ಆವೃತವಾದ ಸ್ಥಳವನ್ನು ಸಹ ಆಯ್ಕೆ ಮಾಡಬಹುದು. ಚಳಿಗಾಲದಲ್ಲಿ ಉತ್ತರ ಭಾರತದವರು ಸೇವಿಸುವ ವಿಶಿಷ್ಟ ಆಹಾರ ಮತ್ತು ಪಾನೀಯದೊಂದಿಗೆ ವರ್ಷವನ್ನು ಆನಂದಿಸಲು ಈ ಸ್ಥಳ ಉತ್ತಮವಾಗಿದೆ. ಶೀಮ್ಲಾದಲ್ಲಿರುವ ಚರ್ಚ್‌ಗಳು, ಮಾಲ್ ರೋಡ್ ಅಥವಾ ದಿ ರಿಡ್ಜ್ ಅನ್ನು ನಿಮ್ಮ ಸ್ಥಳ ವೀಕ್ಷಣೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು. ಅಲ್ಲಿನ ಬೋನ್‌ಫಯರ್‌ ಅನ್ನು ಸ್ನೇಹಿತರೊಂದಿಗೆ ಆನಂದಿಸಬಹುದಾಗಿದೆ. ಹಾಗೆಯೇ ಅಲ್ಲಿನ ಬಿಸಿ ಬಿಸಿ ಕಾಫಿ ಬಹಳ ಜನಪ್ರಿಯವಾಗಿದೆ. ಹಿಮಚ್ಛಾದಿತ ಈ ಸ್ಥಳವು ಸ್ಕೀಯಿಂಗ್‌ಗೆ ಸಹ ಉತ್ತಮವಾಗಿದೆ.

ಇದನ್ನೂ ಓದಿ : Hot or Cold Water Bath In Winter:ಚಳಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳಿತೋ, ಕೆಡಕೋ?

ಇದನ್ನೂ ಓದಿ : Mussoorie Winterline : ಮಸ್ಸೂರಿ ವಿಂಟರ್‌ಲೈನ್‌ ಉತ್ಸವ; ಪ್ರಕೃತಿ ಸೌಂದರ್ಯದ ಸೊಬಗು

(New Year Trip these places are best for new year celebration. Happy new year 2023)

Comments are closed.