ಮುಂಬೈ: ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆ, ಯುವ ಸೂಪರ್ ಸ್ಟಾರ್ ಶುಭಮನ್ ಗಿಲ್ ಬಾಲಿವುಡ್ ನಟಿಯೊಬ್ಬಳ (Sara Ali Khan) ಜೊತೆ ಡೇಟಿಂಗ್ (Shubman Gill dating) ನಡೆಸ್ತಿದ್ದಾರಾ? ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅದೊಂದು ವೀಡಿಯೋ. Sara Ali Khan
ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದ ಶುಭಮನ್ ಗಿಲ್, ಸದ್ಯ ಕ್ರಿಕೆಟ್’ನಿಂದ ಬಿಡುವು ಪಡೆದಿದ್ದಾರೆ. ರಜಾ ದಿನಗಳನ್ನು ಮುಂಬೈನಲ್ಲಿ ಸ್ನೇಹಿತರ ಜೊತೆ ಕಳೆಯುತ್ತಿರುವ ಗಿಲ್, ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಕಾಣಿಸಿಕೊಂಡಿದ್ದಾರೆ. ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಶುಭಮನ್ ಗಿಲ್ ಮತ್ತು ನಟಿ ಸಾರಾ ಅಲಿ ಖಾನ್ (Sara Ali Khan) ರಾತ್ರಿ ಡಿನ್ನರ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದಕ್ಕೂ ಮೊದಲು ಶುಭಮನ್ ಗಿಲ್ ಅವರ ಹೆಸರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ (Sachin Tendulkar Daughter Sara Tendulkar) ಜೊತೆ ಥಳಕು ಹಾಕಿಕೊಂಡಿತ್ತು. ಇದಕ್ಕೆ ಕಾರಣವೂ ಇದೆ. ಇನ್’ಸ್ಟಾಗ್ರಾಂನದಲ್ಲಿ ಸಕ್ರಿಯರಾಗಿರುವ ಇಬ್ಬರೂ ಪರಸ್ಪರ ಫೋಟೋ, ವೀಡಿಯೊಗಳನ್ನು ಲೈಕ್ ಮಾಡುತ್ತಿದ್ದರು. ಇದೀಗ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಶುಭಮನ್ ಗಿಲ್ ಕಾಣಿಸಿಕೊಂಡಿದ್ದಾರೆ. ಇದ್ರ ಬೆನ್ನಲ್ಲೇ ಒಂದಷ್ಟು ಜೋಕ್’ಗಳೂ ಹರಿದಾಡುತ್ತಿವೆ. “ಮೊದಲು ಕ್ರಿಕೆಟಿಗರೊಬ್ಬರ ಮಗಳು, ಈಗ ಕ್ರಿಕೆಟಿಗರೊಬ್ಬರ ಮೊಮ್ಮಗಳು, ಶುಭಮನ್ ಗಿಲ್ ತುಂಬಾ ದೂರ ಸಾಗಿ ಬಂದಿದ್ದಾರೆ” ಎಂದು ಸಾಮಾಜಿಕ ತಾಲತಾಣದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ಸಾರಾ ಅಲಿ ಖಾನ್ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮಗಳು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಮೊಮ್ಮಗಳು. ಮನ್ಸೂರ್ ಅಲಿ ಖಾನ್ ಪಟೌಡಿ ತಮ್ಮ ಕ್ರಿಕೆಟ್ ಜೀವನ ಉತ್ತುಂಗದಲ್ಲಿದ್ದಾಗ ಬಾಲಿವುಡ್ ನಟಿ ಶರ್ಮಿಳಾ ಠಾಗೋರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪಟೌಡಿ-ಶರ್ಮಿಳಾ ದಂಪತಿಯ ಮಗನೇ ಸೈಫ್ ಅಲಿ ಖಾನ್. ಇದೀಗ ಸೈಫ್ ಅಲಿ ಖಾನ್ ಮೊಮ್ಮಗಳ ಹೆಸರು ಭಾರತ ತಂಡದ ಯುವ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಕೇಳಿ ಬರುತ್ತಿದೆ. ಆಸಕ್ತಿಕರ ಸಂಗತಿ ಏನಂದ್ರೆ, ಶುಭಮನ್ ಗಿಲ್ ಜೊತೆ ಥಳಕು ಹಾಕಿಕೊಂಡಿರುವ ಇಬ್ಬರೂ ಯುವತಿಯರ ಹೆಸರೂ ಸಾರಾ. ಮೊದಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್, ಈಗ ಬಾಲಿವುಡ್ ನಟಿ ಸಾರಾ ಅಲಿ ಖಾನ್.
Shubman gill spotted 👀 with Sara Ali Khan in Dubai . pic.twitter.com/O5Qbh9Vffk
— Yash MSdian ™️ 🦁 (@itzyash07) August 29, 2022
ಇದನ್ನೂ ಓದಿ: ಖರ್ಜೂರ ತಿನ್ನುವಾಗ ನೀವು ಈ ತಪ್ಪುಗಳನ್ನು ಮಾಡ್ಲೇಬೇಡಿ
ಇದನ್ನೂ ಓದಿ: ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕೋಮು ಸಂಘರ್ಷ : 13 ಮಂದಿ ಬಂಧನ
Shubman Gill Dating with Sara Ali Khan Sara Tendulkar