ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಭಾರತೀಯ ಕ್ರಿಕೆಟ್ ಇತಿಹಾಸದ ದಂತಕತೆ ಎಂದು ಹೇಳಿದರೆ ತಪ್ಪಾಗಲಾರದು. ಸೌರವ್ ಗಂಗೂಲಿ ನಾಯಕತ್ವ ದಲ್ಲಿ ಟೀಂ ಇಂಡಿಯಾ ಸಾಕಷ್ಟು ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಗೆಲುವಂತೂ ಮರೆಯುವ ಹಾಗೆಯೇ ಇಲ್ಲ. ಅಭಿಮಾನಿಗಳು ಈಗಲೂ ಸೌರವ್ ಗಂಗೂಲಿಯನ್ನು ಪ್ರೀತಿಸುತ್ತಿರೋದಕ್ಕೆ ಅನೇಕ ಕಾರಣಗಳಿವೆ. ಸೌರವ್ ಗಂಗೂಲಿ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದಾರೆ . ಟೀಂ ಇಂಡಿಯಾದ ಭವಿಷ್ಯ ಸಂಬಂಧಿ ಸಾಕಷ್ಟು ಮಹತ್ವದ ನಿರ್ಧಾರಗಳನ್ನು ಗಂಗೂಲಿ ಕೈಗೊಂಡಿದ್ದಾರೆ .
ಕ್ರಿಕೆಟ್ ಇತಿಹಾಸದಲ್ಲಿ ಗಂಗೂಲಿ ಇಷ್ಟೆಲ್ಲ ಸಾಧನೆ ಮಾಡಿರುವಾಗ ಅವರ ಮಾತುಗಳನ್ನು ಕೇಳುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಆದರೆ ಸೌರವ್ ಗಂಗೂಲಿ ಮಾತ್ರ ತಮ್ಮ ಹೇಳಿಕೆಯೊಂದರ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಗುರುಗಾಂವ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಗೂಲಿ ಭಾರತೀಯ ಕ್ರಿಕೆಟ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಒತ್ತಡ ನಿರ್ವಹಣೆ ವಿಚಾರದಲ್ಲಿ ಸೌರವ್ ಗಂಗೂಲಿ ನೀಡಿದ ಹೇಳಿಕೆಯು ಇದೀಗ ಭಾರೀ ವಿವಾದಕ್ಕೆ ಗ್ರಾಸವಾಗಿದೆ.
ಜೀವನದಲ್ಲಿ ಯಾವುದೇ ಒತ್ತಡವಿಲ್ಲ. ಪತ್ನಿ ಹಾಗೂ ಗೆಳತಿ ಮಾತ್ರ ಒತ್ತಡವನ್ನು ಕೊಡುತ್ತಾರೆ ಎಂದು ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ ತಮಾಷೆ ಮಾಡಿದ್ದಾರೆ. ಆದರೆ ಪತ್ನಿ ಹಾಗೂ ಗೆಳತಿ ವಿರುದ್ಧ ಸೌರವ್ ಗಂಗೂಲಿ ನೀಡಿದ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹೇಳಿಕೆಯ ವಿಡಿಯೋವನ್ನು ನೋಡಿದ ನೆಟ್ಟಿಗರು ಗಂಗೂಲಿ ಹೇಳಿಕೆಗೆ ವ್ಯಾಪಕ ವಿರೋಧವನ್ನು ವ್ಯಕ್ತಪಡಿಸಿದ್ದಾರೆ .. ಈ ಹೇಳಿಕೆಯನ್ನು ನೀಡಿದ್ದಕ್ಕೆ ನೆಟ್ಟಿಗರು ಗಂಗೂಲಿಯನ್ನು ಲಿಂಗ ಬೇಧಭಾವ ಮಾಡುವ ವ್ಯಕ್ತಿ ಎಂದು ಜರಿದಿದ್ದಾರೆ. ಸೌರವ್ ಗಂಗೂಲಿಯಂತಹ ವ್ಯಕ್ತಿಯಿಂದ ಇಂತಹ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ .
ಇದನ್ನು ಓದಿ : Free buspass garment employees : ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ: BMTC ನೀಡಲಿದೆ ಉಚಿತ ಪಾಸ್
ಇದನ್ನೂ ಓದಿ : Lucknow list out IPL 2022 : ಲಕ್ನೋ ತಂಡದಲ್ಲಿ ರಾಹುಲ್, ರಶೀದ್ ಖಾನ್, ಸ್ಟೀವ್ ಸ್ಮಿತ್ ಮತ್ತು ಸುರೇಶ್ ರೈನಾ
ಇದನ್ನೂ ಓದಿ : Ahmedabad list out IPL 2022 : ಅಹಮದಾಬಾದ್ ಸೇರ್ತಾರೆ ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್, ಹಾರ್ದಿಕ್ ಪಾಂಡ್ಯ
Sourav Ganguly jokingly says ‘only wife and girlfriend give stress’, called out for ‘sexism’