Samyukta Hegde Bikini Photo : ಬಾಡಿ ಶೇಮಿಂಗ್ ಗೆ ಭರ್ಜರಿ ತಿರುಗೇಟು : ಸಂಯುಕ್ತಾ ಹೆಗಡೆ ಬಿಕನಿ ಪೋಟೋ ವೈರಲ್

ಸೋಷಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ಜೀವನದಲ್ಲಿ ಸಿನಿಮಾ‌ ನಟಿಯರಿಗೆ ಟ್ರೋಲ್ ,ಬಾಡಿ ಶೇಮಿಂಗ್, ಲಾಂಗ್ವೇಜ್ ಶೇಮಿಂಗ್ ಎಲ್ಲವೂ ಕಾಮನ್. ಹಳೆಕಾಲದ ನಟಿಯರಿಂದ ಆರಂಭಿಸಿ ಈ ಜಮಾನಾದ ರಶ್ಮಿಕಾ ತನಕ ಎಲ್ಲರಿಗೂ ಬಾಡಿ ಶೇಮಿಂಗ್ ಕಾಡಿದೆ.ಇದಕ್ಕೆ ಬೆದರಿ ಕೆಲ ನಟಿಯರು ನಟನೆಯನ್ನೇ ಬಿಟ್ಟಿರೋ ಉದಾಹರಣೆಯೂ ಇದೆ. ಆದರೆ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ (Samyukta Hegde Bikini Photo Viral) ಮಾತ್ರ ಬಾಡಿ ಶೇಮಿಂಗ್ ಗೆ ಬಿಕನಿ ಇಮೇಜ್ ಜೊತೆ ಉತ್ತರ ಕೊಟ್ಟಿದ್ದಾರೆ.

Body Shaming warning, Samyukta Hegde Bikini Photo Viral

ಕನ್ನಡಿ ಮುಂದೇ ನಿಂತು ಕಪ್ಪು ಬಿಕನಿಯಲ್ಲಿ ತಮ್ಮ ತೆಳ್ಳಗಿನ ಶರೀರದ ಪೋಟೋದೊಂದಿಗೆ ಪೋಸ್ಟ್ ಹಾಕಿರುವ ಸಂಯುಕ್ತಾ,ನಾನು ತೆಳ್ಳಗಿರುವುದು ಎಷ್ಟು ಅದೃಷ್ಟ ಎಂದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಅಷ್ಟೇ ಅಲ್ಲ ನನ್ನ ದೇಹದ ಪ್ರಕೃತಿಯ ಬಗ್ಗೆ ಗಮನಹರಿಸದಿರುವುದಕ್ಕೆ, ನಾನು ಫಿಟ್ ಆಗಿರುವುದಕ್ಕೆ ಮಾಡುವ ಎಲ್ಲ ಪ್ರಯತ್ನಗಳನ್ನು ಟೀಕಿಸಿ ನಾನು ಪುಣ್ಯ ಮಾಡಿದ್ದೇನೆ ಎಂದು ಹೇಳಿದ್ದಕ್ಕೆ.

Body Shaming warning, Samyukta Hegde Bikini Photo Viral 1

ನೀನು ಏನು ಬೇಕಾದರೂ ತಿನ್ನು ಅದು ನಿನ್ನ ದೇಹ ತೋರಿಸೋದಿಲ್ಲ ಎಂದು ಹೇಳಿರುವುದಕ್ಕೆ ಹಾಗೂ ತೆಳ್ಳಗಿರುವವರು ಫಿಟ್ ಆಗಿರೋದು ಲೆಕ್ಕಕ್ಕಿಲ್ಲ, ದಪ್ಪ ಇರೋರು ಮಾತ್ರ ಫಿಟ್ ಆಗಿರುತ್ತಾರೆ ಎಂದಿದ್ದಕ್ಕೆ ಧನ್ಯವಾದಗಳು ಎಂದು ಸಂಯುಕ್ತಾ ಹೆಗ್ಡೆ ಸುದೀರ್ಘವಾಗಿ ಕಮೆಂಟ್ ಮಾಡೋ ಮೂಲಕ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ ಟ್ರೋಲರ್ ಗಳಿಗೆ ಬುದ್ಧಿ ಹೇಳಿರೋ ಸಂಯುಕ್ತಾ ಹೆಗ್ಡೆ ಯಾರೂ ಹುಟ್ಟಿನಿಂದ ಪರಿಪೂರ್ಣರಲ್ಲ. ಎಲ್ಲರ ದೇಹದಲ್ಲೂ ಒಂದಿಲ್ಲೊಂದು ಕೊರತೆ ಇರುತ್ತದೆ. ಆದರೆ ಅದೆಲ್ಲವನ್ನು ಗೆದ್ದು ಪರಿಪೂರ್ಣತೆ ಸಾಧಿಸುವುದೇ ಬದುಕಿನ ಗುರಿಯಾಗಬೇಕು ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿರೋ ಸಂಯುಕ್ತಾ ಹೆಗ್ಡೆ ಸದಾ ಅರೆಬೆತ್ತಲೇ ಪೋಟೋಗಳನ್ನು ಹಾಗೂ ಮಾದಕ ಡ್ಯಾನ್ಸ್ ಗಳನ್ನು ಹಂಚಿಕೊಂಡು ಪಡ್ಡೆ ಹೈಕಳ ಎದೆ ಬಡಿತ ಹೆಚ್ಚಿಸುತ್ತಿರುತ್ತಾರೆ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತಾ ಹೆಗ್ಡೆ ಗೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಲಭ್ಯವಾಗಲೇ ಇಲ್ಲ.‌ಇದೇ ಕಾರಣಕ್ಕೆ ಕೆಲ‌ದಿನಗಳ ಹಿಂದೆ ಸಂಯುಕ್ತಾ ಸೋಷಿಯಲ್ ಮೀಡಿಯಾದಲ್ಲಿ ಬೇಸರ ತೋಡಿ ಕೊಂಡಿದ್ದರು.

ಕಾಲೇಜು ಕುಮಾರ್ ಸಿನಿಮಾದ ವಿವಾದದ ಬಳಿಕ ಸಂಯುಕ್ತಾ ಪಾರ್ಕ್ ವೊಂದರಲ್ಲಿ ವರ್ಕೌಟ್ ಮಾಡಲು ಹೋಗಿ ಕಾಂಗ್ರೆಸ್ ನಾಯಕಿಯೊಬ್ಬರಿಂದ ಹಲ್ಲೆಗೊಳಗಾಗಿ ಸುದ್ದಿ ಯಾಗಿದ್ದರು. ಈಗ ಬಾಡಿ ಶೇಮಿಂಗ್ ಗೆ ಬೋಲ್ಡ್ ಆನ್ಸರ್ ಕೊಟ್ಟಿದ್ದಾರೆ. ಸದಾ ಡ್ಯಾನ್ಸ್ ,ಟ್ರೆಕ್ಕಿಂಗ್ ಹಾಗೂ ಬೋಲ್ಡ್ ಪೋಟೋಶೂಟ್ ನಲ್ಲೇ ಸಂಯುಕ್ತಾ ಕಾಣಸಿಗುತ್ತಾರೆ.

ಇದನ್ನೂ ಓದಿ : ಮತ್ತೆ ಚಿಗುರಿತಾ ಪ್ರೀತಿ….?! ರಶ್ಮಿಕಾ ಸಂದೇಶಕ್ಕೆ ರಕ್ಷಿತ್ ಶೆಟ್ಟಿ ಮನತುಂಬಿದ ಹಾರೈಕೆ…!!

ಇದನ್ನೂ ಓದಿ : ಸಿಂಗಲ್ ಆಗಿಯೇ ಸಾಯುತ್ತೇನೆ…! ಇಷ್ಟಕ್ಕೂ ನನ್ನನ್ನು ಯಾರು ಮದುವೆಯಾಗ್ತಾರೆ..! ಕಿರಿಕ್ ಸಂಯುಕ್ತಾ ಹೊಸ ಅವತಾರ..!!

(Body Shaming warning, Samyukta Hegde Bikini Photo Viral)

Comments are closed.