Suryakumar Yadav century : ಕಿವೀಸ್ ನಾಡಿನಲ್ಲಿ ಸೂರ್ಯ ಶಿಕಾರಿ, ಟಿ20ಯಲ್ಲಿ 2ನೇ ಶತಕ ಬಾರಿಸಿದ ಸೂರ್ಯಕುಮಾರ್

ಮೌಂಟ್ ಮೌಂಗನ್ಯುಯ್ : ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಸ್ಫೋಟಕ ದಾಂಡಿಗ ಸೂರ್ಯಕುಮಾರ್ ಯಾದವ್ (Suryakumar Yadav century) ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 2ನೇ ಶತಕ ಬಾರಿಸಿದ್ದಾರೆ.

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ (India Vs New Zealand T20 series) 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಶತಕದೊಂದಿಗೆ ಅಬ್ಬರಿಸಿದರು. 49 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಸೂರ್ಯ ಕುಮಾರ್ ಯಾದವ್ ಶತಕದ ಇನ್ನಿಂಗ್ಸ್’ನಲ್ಲಿ 11 ಬೌಂಡರಿಗಳು ಮತ್ತು 7 ಸಿಕ್ಸರ್’ಗಳಿದ್ದವು. 51 ಎಸೆತಗಳಲ್ಲಿ ಅಜೇಯ 111 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ 216.65ರ ಸ್ಟ್ರೈಕ್’ರೇಟ್’ನಲ್ಲಿ ಬ್ಯಾಟ್ ಬೀಸಿದರು.

32 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಸೂರ್ಯ ಮುಂದಿನ 19 ಎಸೆತಗಳಲ್ಲಿ 61 ರನ್ ಸಿಡಿಸಿದರು. ಕಳೆದ ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿದ್ದರು.

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ನಡೆಸಿದ ಭಾರತ, ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವಾ ಅವರ ಸ್ಫೋಟಕ ಶತಕದ ಬಲದಿಂದ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು.

ಇದನ್ನೂ ಓದಿ : CSK Fielding Coach : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುರೇಶ್ ರೈನಾ ಫೀಲ್ಡಿಂಗ್ ಕೋಚ್?

ಇದನ್ನೂ ಓದಿ : Mohammedraje Chiyaneh Shadlu : ಒಂದೇ ಪಂದ್ಯದಲ್ಲಿ 16 ಟ್ಯಾಕಲ್ ಪಾಯಿಂಟ್ಸ್, ಅಮೋಘ ದಾಖಲೆ ಬರೆದ ಇರಾನ್’ನ ಶಾದ್ಲೂ

ಇದನ್ನೂ ಓದಿ : India Vs new Zealand T20: ನಾಳೆ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20, ಭಾರತಕ್ಕೆ ಸರಣಿ ಮುನ್ನಡೆಯ ನಿರೀಕ್ಷೆ

ಕಿವೀಸ್ ಪರ ಅನುಭವೀ ವೇಗಿ ಟಿಮ್ ಸೌಥೀ 20ನೇ ಓವರ್’ನ ಸತತ 3 ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ, ದೀಪಕ್ ಹೂಡ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದು ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ 2ನೇ ಹ್ಯಾಟ್ರಿಕ್ ಸಾಧನೆ ಮಾಡಿದರು.

Suryakumar Yadav century : Suryakumar hit 2nd T20 century in Kiwis country

Comments are closed.