ಕೋಲ್ಕತಾ: Syed Mushtaq Ali T20 : ಎರಡು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ (Syed Mushtaq Ali T20 quarterfinal) ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ. ಕರ್ನಾಟಕ ಮತ್ತು ಪಂಜಾಬ್ (Karnataka Vs Punjab) ನಡುವಿನ ರೋಚಕ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಾಳೆ (ಮಂಗಳವಾರ) ನಡೆಯಲಿದೆ. ಮಯಾಂಕ್ ಅಗರ್ವಾಲ್ (Mayank Agarwal) ನಾಯಕತ್ವದ ಕರ್ನಾಟಕ ತಂಡ ಎಲೈಟ್ ಗ್ರೂಪ್ ‘ಸಿ’ನಲ್ಲಿ ಆಡಿದ 7 ಪಂದ್ಯಗಳಲ್ಲಿ 6ನ್ನು ಗೆದ್ದು ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್’ಗೆ ಲಗ್ಗೆಯಿಟ್ಟಿತ್ತು.
ಮತ್ತೊಂದೆಡೆ ಮನ್’ದೀಪ್ ಸಿಂಗ್ ನಾಯಕತ್ವದ ಪಂಜಾಬ್ ತಂಡ ಪ್ರೀ ಕ್ವಾರ್ಟರ್ ಫೈನಲ್’ನಲ್ಲಿ ಹರ್ಯಾಣ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಪಂಜಾಬ್ ತಂಡದಲ್ಲಿ ಶುಭಮನ್ ಗಿಲ್, ಮನ್’ದೀಪ್ ಸಿಂಗ್’ರಂತಹ ಸ್ಟಾರ್ ಆಟಗಾರರಿದ್ದಾರೆ. ಕರ್ನಾಟಕ ತಂಡ ಐಪಿಎಲ್ ಸ್ಟಾರ್’ಗಳಿಂದಲೇ ತುಂಬಿದ್ದು ನಾಯಕ ಮಯಾಂಕ್ ಅಗರ್ವಾಲ್, ಮಾಜಿ ನಾಯಕ ಮನೀಶ್ ಪಾಂಡೆ (Manish Pandey), ಮಧ್ಯಮ ಕ್ರಮಾಂಕದ ಸ್ಫೋಟಕ ದಾಂಡಿಗ ಅಭಿನವ್ ಮನೋಹರ್, ಅನುಭವಿ ಆಲ್ರೌಂಡರ್’ಗಳಾದ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಜೆ.ಸುಚಿತ್’ರಂತಹ ಸ್ಟಾರ್ ಆಟಗಾರರು ರಾಜ್ಯ ತಂಡದಲ್ಲಿದ್ದಾರೆ. ಕರ್ನಾಟಕ ತಂಡ 2018-19 ಹಾಗೂ 2019-20ನೇ ಸಾಲಿನಲ್ಲಿ ಸತತ ಎರಡು ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.
ಪಂಜಾಬ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾಯಕ), ರೋಹನ್ ಪಾಟೀಲ್, ಚೇತನ್ ಎಲ್.ಆರ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಕೃಷ್ಣಪ್ಪ ಗೌತಮ್, ಮನೋಜ್ ಭಾಂಡಗೆ, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಲವನೀತ್ ಸಿಸೋಡಿಯಾ (ವಿಕೆಟ್ ಕೀಪರ್), ಬಿ.ಆರ್ ಶರತ್ (ವಿಕೆಟ್ ಕೀಪರ್), ವಿ.ಕೌಶಿಕ್, ವೈಶಾಖ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ವೆಂಕಟೇಶ್ ಎಂ.
ಕೋಚ್: ಪಿ.ವಿ ಶಶಿಕಾಂತ್, ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ, ಫಿಸಿಯೋ: ಜಾಬಾ ಪ್ರಭು.
ಕರ್ನಾಟಕ Vs ಪಂಜಾಬ್ ಕ್ವಾರ್ಟರ್ ಫೈನಲ್
ಪಂದ್ಯ ಆರಂಭ: ಬೆಳಗ್ಗೆ 11ಕ್ಕೆ
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತಾ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಇದನ್ನೂ ಓದಿ : India Cricket Team : ಕಿವೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ: ಶಿಖರ್, ಪಾಂಡ್ಯ ಕ್ಯಾಪ್ಟನ್, ರಿಷಬ್ ವೈಸ್ ಕ್ಯಾಪ್ಟನ್
Syed Mushtaq Ali T20 : Karnataka Vs Punjab quarter final tomorrow; Here are Team, Time, Live details