ಸೋಮವಾರ, ಏಪ್ರಿಲ್ 28, 2025
HomeSportsCricketSuryakumar Yadav: ಟಿ20 ವಿಶ್ವಕಪ್ : ಪತಿಯ ಯಶಸ್ಸಿಗೆ ದೇವರ ಮೊರೆ ಹೋದ ಸೂರ್ಯನ ಪತ್ನಿ,...

Suryakumar Yadav: ಟಿ20 ವಿಶ್ವಕಪ್ : ಪತಿಯ ಯಶಸ್ಸಿಗೆ ದೇವರ ಮೊರೆ ಹೋದ ಸೂರ್ಯನ ಪತ್ನಿ, ಕರಾವಳಿಯಲ್ಲಿ ದೇವಿಶಾ ಶೆಟ್ಟಿ ತೀರ್ಥಯಾತ್ರೆ

- Advertisement -

ಬೆಂಗಳೂರು: Suryakumar Yadav Devisha Shetty : ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್’ಗೆ (T20 World Cup 2022) ಸಜ್ಜಾಗುತ್ತಿದ್ದಾರೆ. ಈಗಾಗಲೇ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದು ಸತತ ಅಭ್ಯಾಸ ಪಂದ್ಯಗಳನ್ನಾಡುತ್ತಿದೆ. ಅಮೋಘ ಫಾರ್ಮ್’ನಲ್ಲಿರುವ ಸೂರ್ಯಕುಮಾರ್ ಯಾದವ್ ವಿಶ್ವಕಪ್’ನಲ್ಲೂ ತಮ್ಮ ಅದ್ಭುತ ಫಾರ್ಮ್ ಮುಂದುವರಿಸುವ ವಿಶ್ವಾಸದಲಿದ್ದು, ವೆಸ್ಟರ್ಸ್ ಆಸ್ಟ್ರೇಲಿಯಾ ವಿರುದ್ಧ ಎರಡು ದಿನಗಳ ಹಿಂದೆ ನಡೆದ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಇತ್ತ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಟೂರ್ನಿಗೆ ಸಜ್ಜಾಗ್ತಾ ಇದ್ರೆ, ಅತ್ತ ಸೂರ್ಯನ ಪತ್ನಿ ದೇವಿಶಾ ಶೆಟ್ಟಿ (Devisha Shetty) ಪತಿಯ ಯಶಸ್ಸಿಗೆ ದೇವರ ಮೊರೆ ಹೋಗಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪತಿಯ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ.

ದೇವಿಶಾ ಶೆಟ್ಟಿಯವರ ತಂದೆ ಕರಾವಳಿ ಮೂಲದವರು. ತುಂಬಾ ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ದೇವಿಶಾ ಶೆಟ್ಟಿ ಕುಟುಂಬ ಕರಾವಳಿಯ ನಂಟನ್ನು ಬಿಟ್ಟಿಲ್ಲ. ತುಳು ಭಾಷೆ ಮಾತಾಡುವ ಕುಟುಂಬದಲ್ಲಿ ಹುಟ್ಟಿರುವ ಕಾರಣ ದೇವಿಶಾ ಶೆಟ್ಟಿ ಸುಲಲಿತವಾಗಿ ತುಳು ಭಾಷೆ ಮಾತಾಡುತ್ತಾರೆ. ವೃತ್ತಿಯಲ್ಲಿ ಡ್ಯಾನ್ಸ್ ಕೋಚ್ ಆಗಿರುವ ದೇವಿಶಾ ಶೆಟ್ಟಿ, 2016ರಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ದೇವಿಶಾ ಶೆಟ್ಟಿ ಕುಟುಂಬಕ್ಕೆ ಕರಾವಳಿ ದೈವ-ದೇವರಗಳು ಬಗ್ಗೆ ಅಪಾರ ಭಕ್ತಿ ಮತ್ತು ನಂಬಿಕೆ. ಇದೇ ಕಾರಣದಿಂದ ಪತಿ ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ತೆರಳಿರುವ ಸಂದರ್ಭದಲ್ಲಿ ಕುಟುಂಬ ಸದಸ್ಯರೊಂದಿಗೆ ಪತ್ನಿ ಕರಾವಳಿಗೆ ಭೇಟಿ ಕೊಟ್ಟು ದೇವಸ್ಥಾನ ಸುತ್ತುತ್ತಿದ್ದಾರೆ. ವಿಶ್ವಕಪ್’ನಲ್ಲಿ ಪತಿ ಸೂರ್ಯಕುಮಾರ್ ಯಾದವ್’ಗೆ ಯಶಸ್ಸು ಸಿಗಲು ಪ್ರಾರ್ಥಿಸುತ್ತಿದ್ದಾರೆ.

ಕಳೆದ ವರ್ಷ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 32 ವರ್ಷದ ಸೂರ್ಯಕುಮಾರ್ ಯಾದವ್, ಈ ವಿಶ್ವಕಪ್’ನಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕದ ಆಧಾರಸ್ಥಂಭವಾಗಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಭಾರತ ಪರ 34 ಟಿ20 ಪಂದ್ಯಗಳನ್ನಾಡಿರುವ ಸೂರ್ಯ, ಒಂದು ಶತಕ ಹಾಗೂ 9 ಅರ್ಧಶತಕಗಳೊಂದಿಗೆ 176.81ರ ಅಮೋಘ ಸ್ಟ್ರೈಕ್ ರೇಟ್’ನಲ್ಲಿ 1045 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Pro Kabaddi League Schedule: ಪ್ರೊ ಕಬಡ್ಡಿ ಲೀಗ್-9: ಡಿಸೆಂಬರ್ 15ಕ್ಕೆ ಸೆಮಿಫೈನಲ್ಸ್, ಡಿಸೆಂಬರ್ 17ಕ್ಕೆ ಫೈನಲ್

ಇದನ್ನೂ ಓದಿ : Sourav Ganguly snubs by BCCI : ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಬಯಸಿದ್ದ ಗಂಗೂಲಿಗೆ “ಶಾ” ಶಾಕ್!

T20 World Cup Suryakumar Yadav wife Devisha Shetty temple run pray for her husband’s success

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular