karnataka hijab ban:ಹಿಜಾಬ್​ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಆದೇಶದಲ್ಲಿ ಏನಿತ್ತು: ಇಲ್ಲಿದೆ ಸಂಪೂರ್ಣ ಮಾಹಿತಿ

karnataka hijab ban : ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ವಿವಾದವನ್ನು ಸೃಷ್ಟಿಸಿದ್ದ ಹಿಜಾಬ್​​ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ವಿಭಿನ್ನ ತೀರ್ಪನ್ನು ನೀಡಿದೆ. ನ್ಯಾ. ಹೇಮಂತ್​ ಗುಪ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದರೆ ನ್ಯಾಯಮೂರ್ತಿ ಸುಧಾಂಶು ಹಿಜಾಬ್​ ವಿಚಾರವಾಗಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿದ್ದಾರೆ. ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಜೆಐ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.


ರಾಜ್ಯ ಹೈಕೋರ್ಟ್​ ನೀಡಿದ ಆದೇಶದಲ್ಲಿ ಏನಿತ್ತು..?
ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್​, ಇಸ್ಲಾಂ ಧರ್ಮದಲ್ಲಿ ಹಿಜಾಬ್​ ಕಡ್ಡಾಯವಲ್ಲ. ಹೀಗಾಗಿ ರಾಜ್ಯ ಸರ್ಕಾರ ನೀಡಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರದ ಜೊತೆಯಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಬೇಕು ಎಂಬ ಆದೇಶ ಸರಿಯಾಗಿಯೇ ಇದೆ ಎಂದು ಹೇಳಿತ್ತು .


ರಾಜ್ಯ ಹೈಕೋರ್ಟ್​ನಲ್ಲಿ ಸಿಜೆ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ನೇತೃತ್ವದ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಮುಸ್ಲಿಂರ ಪವಿತ್ರ ಗ್ರಂಥವಾದ ಕುರಾನ್​ನಲ್ಲಿ ಮಹಿಳೆಯರು ಹಿಜಾಬ್​ ಧರಿಸಲೇಬೇಕು ಎಂದು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಈ ಬಟ್ಟೆ ಧರಿಸಬೇಕು ಎಂದು ಸೂಚಿಸಲಾಗಿದೆ ಹಾಗೆಂದ ಮಾತ್ರಕ್ಕೆ ಮುಸ್ಲಿಂ ಧರ್ಮದಲ್ಲಿ ಹಿಜಾಬ್​ ಕಡ್ಡಾಯವೇನಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಗೆಂದು ಮುಸ್ಲಿಂದ ಧರ್ಮದಲ್ಲಿ ಹಿಜಾಬ್​​ ಧರಿಸುವುದನ್ನು ಸೂಚಿಸಲಾಗುತ್ತದೆ. ಹೀಗಾಗಿ ಇದು ಮುಸ್ಲಿಂ ಸಂಸ್ಕೃತಿಯ ಭಾಗವೇ ಹೊರತು ಧರ್ಮವಲ್ಲ ಎಂದು ಹೇಳಿತ್ತು.


ತಮ್ಮ ಮನೆಯಿಂದ ಹೊರ ಹೋಗುವಾಗ ಶಿರವಸ್ತ್ರವನ್ನು ಧರಿಸಿದರೆ ಸುರಕ್ಷತೆ ಸಿಗುತ್ತದೆ ಎಂಬುದು ಮುಸ್ಲಿಂ ನಂಬಿಕೆ. ಆದರೆ ಇದು ಧಾರ್ಮಿಕವಾಗಿ ಕಡ್ಡಾಯವಲ್ಲ. ಶೈಕ್ಷಣಿಕ ಸಂಸ್ಥೆಗಳಲ್ಲಿ ಯಾರಿಗೂ ತಾರತಮ್ಯ ಮಾಡಬಾರದು, ಇಲ್ಲಿ ಎಲ್ಲರೂ ಸಮಾನರು. ಹೀಗಾಗಿ ಈ ಸಮಾನತೆಯನ್ನು ಎತ್ತಿ ಹಿಡಿಯಲು ವಿದ್ಯಾರ್ಥಿಗಳು ಕೇವಲ ಸಮವಸ್ತ್ರವನ್ನು ಧರಿಸಬೇಕು. ಹಿಜಾಬ್​ ಧರಿಸಿದ ಬಳಿಕ ಸಮವಸ್ತ್ರವನ್ನು ಸಮವಸ್ತ್ರ ಎಂದು ಕರೆಯಲು ಆಗುವುದಿಲ್ಲ. ಒಬ್ಬರು ಸಮವಸ್ತ್ರದ ಜೊತೆ ಹಿಜಾಬ್​ ಧರಿಸುತ್ತಾರೆ. ಉಳಿದ ಧರ್ಮದವರು ಕೇವಲ ಸಮವಸ್ತ್ರ ಧರಿಸುತ್ತಾರೆ. ಆಗ ಧರ್ಮದ ಆಧಾರದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತ್ಯೇಕತೆಯ ಭಾವ ಮೂಡುತ್ತದೆ . ಹೀಗಾಗಿ ರಾಜ್ಯ ಸರ್ಕಾರದ ಸೂಚನೆಯಂತೆ ಶಾಲಾ – ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸುವುದು ಸೂಕ್ತವಾಗಿದೆ ಎಂದು ಹೇಳಿತ್ತು .

ಇದನ್ನು ಓದಿ : Karnataka hijab ban : ಶಾಲೆ, ಕಾಲೇಜಲ್ಲಿ ಹಿಜಾಬ್ ಗೆ ಅವಕಾಶವಿಲ್ಲ, ಪ್ರಕರಣ ಸಿಜೆಐ ಪೀಠಕ್ಕೆ ವರ್ಗಾವಣೆ : ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಇದನ್ನೂ ಓದಿ : ಹಿಜಾಬ್ ಧರಿಸಲು ಶಾಲೆ, ಕಾಲೇಜುಗಳಲ್ಲಿ ಅವಕಾಶವಿಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

karnataka hijab ban supreme court deliver judgement

Comments are closed.