ಭಾನುವಾರ, ಏಪ್ರಿಲ್ 27, 2025
HomeSportsCricketExclusive: Ravindra Jadeja fitness test : ರವೀಂದ್ರ ಜಡೇಜಗೆ ಇಂದು Yo-Y0, ಡೆಕ್ಸಾ ಟೆಸ್ಟ್,...

Exclusive: Ravindra Jadeja fitness test : ರವೀಂದ್ರ ಜಡೇಜಗೆ ಇಂದು Yo-Y0, ಡೆಕ್ಸಾ ಟೆಸ್ಟ್, ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ್ರೆ ಮಾತ್ರ ಟೀಮ್ ಇಂಡಿಯಾ ಕಂಬ್ಯಾಕ್

- Advertisement -

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ (Ravindra Jadeja) ಟೀಮ್ ಇಂಡಿಯಾ ಕಂಬ್ಯಾಕ್’ಗೆ ರೆಡಿಯಾಗ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜಡೇಜಾ ಭಾರತ ತಂಡಕ್ಕೆ ಮರಳುವ ಸಾಧ್ಯತೆಯಿದ್ದು, ಅದಕ್ಕೂ ಮೊದಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy – NCA) ಫಿಟ್ನೆಸ್ ಪರೀಕ್ಷೆಗೆ (Ravindra Jadeja fitness test) ಒಳಗಾಗಲಿದ್ದಾರೆ.

NCAನಲ್ಲಿ ರವೀಂದ್ರ ಜಡೇಜ ಯೋ-ಯೋ ಟೆಸ್ಟ್ (Y0-Yo test) ಮತ್ತು ಡೆಕ್ಸಾ ಟೆಸ್ಟ್’ಗೆ (Dexa test) ಒಳಗಾಗಲಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ್ರೆ ಮಾತ್ರ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಗಾಯಗೊಂಡಿರುವ ಆಟಗಾರರು ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡ್ಬೇಕು ಅಂದ್ರೆ ಯೋ-ಯೋ ಟೆಸ್ಟ್ ಮತ್ತು ಡೆಕ್ಸಾ ಟೆಸ್ಟ್’ನಲ್ಲಿ ಪಾಸಾಗುವುದು ಕಡ್ಡಾಯ.“ರವೀಂದ್ರ ಜಡೇಜ ಫಿಟ್ನೆಸ್ ಟೆಸ್ಟ್’ಗಾಗಿ NCAನಲ್ಲಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ಜಡೇಜ ನ್ಯೂಜಿಲೆಂಡ್ ಸರಣಿಗೆ ಲಭ್ಯರಿರಲಿದ್ದಾರೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯ ವೇಳೆ ರವೀಂದ್ರ ಜಡೇಜ ಪಾದದ ಸಮಸ್ಯೆಯಿಂದ ಬಳಲಿದ್ದರು. ಹೀಗಾಗಿ ಟೂರ್ನಿಯ ಮಧ್ಯದಲ್ಲೇ ಭಾರತ ತಂಡವನ್ನು ತೊರೆದು ಮುಂಬೈಗೆ ವಾಪಸ್ಸಾಗಿದ್ದ ಜಡೇಜ, ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಜಡೇಜ, ಫಿಟ್ನೆಸ್ ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದ ಕಾರಣ, ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದರು. ಗಾಯದ ಕಾರಣ ಜಡೇಜ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಅಲಭ್ಯರಾಗಿದ್ದರು,

ಏಷ್ಯಾ ಕಪ್ ನಂತರ ಕ್ರಿಕೆಟ್’ನಿಂದ ದೂರವುಳಿದಿದ್ದ ಜಡೇಜ ಈ ಮಧ್ಯೆ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲೂ ಕಾಣಿಸಿಕೊಂಡಿದ್ದರು. ಜಾಮ್’ನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪತ್ನಿ ರಿವಾಬ ಪರ ಜಡೇಜ ಜಾಮ್’ನಗರದಲ್ಲಿ ರೋಡ್ ಶೋ ಕೂಡ ನಡೆಸಿದ್ದರು. ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಜಡೇಜ ಪತ್ನಿ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಇದೀಗ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರವೀಂದ್ರ ಜಡೇಜ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಅನ್ನು ಎದುರು ನೋಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 18ರಂದು ಹೈದರಾಬಾದ್’ನಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. 2ನೇ ಪಂದ್ಯ ಜನವರಿ 21ರಂದು ರಾಯ್ಪುರದಲ್ಲಿ ನಡೆಯಲಿದ್ರೆ, 3ನೇ ಪಂದ್ಯ ಜನವರಿ 24ರಂದು ಇಂದೋರ್’ನಲ್ಲಿ ನಡೆಯಲಿದೆ. ನಂತರ ನ್ಯೂಜಿಲೆಂಡ್ ವಿರುದ್ಧ ಭಾರತ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಜನವರಿ 27ರಂದು ರಾಂಚಿಯಲ್ಲಿ ನಡೆಯಲಿದೆ.

ಭಾರತ Vs ನ್ಯೂಜಿಲೆಂಡ್ ಏಕದಿನ ಸರಣಿಯ ವೇಳಾಪಟ್ಟಿ :
ಜನವರಿ 18: ಮೊದಲ ಏಕದಿನ (ರಾಜೀವ್ ಗಾಂಧಿ ಕ್ರೀಡಾಂಗಣ, ಹೈದರಾಬಾದ್)
ಜನವರಿ 21: 2ನೇ ಏಕದಿನ (ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ, ರಾಯ್ಪುರ)
ಜನವರಿ 24: 3ನೇ ಏಕದಿನ (ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್)

ಇದನ್ನೂ ಓದಿ : India Vs Sri Lanka ODI series : ನಾಳೆ ಏಕದಿನ ಪಂದ್ಯ; ಕೊಹ್ಲಿ, ರೋಹಿತ್, ರಾಹುಲ್ ಕಂಬ್ಯಾಕ್, ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI

ಇದನ್ನೂ ಓದಿ : Suryakumar Yadav : ಸೂರ್ಯಕುಮಾರ್ ಯಾದವ್ “ತುಳುನಾಡಿನ ಅಳಿಯ”, ತುಂಬಾ ಮಂದಿಗೆ ಗೊತ್ತೇ ಇಲ್ಲದ ಗುಟ್ಟು ಬಿಚ್ಚಿಟ್ಟ ಕೆ.ಎಲ್ ರಾಹುಲ್

ಇದನ್ನೂ ಓದಿ : Rishabh Pant to get 21 CR salary : ಐಪಿಎಲ್ ಆಡದಿದ್ದರೂ ರಿಷಭ್ ಪಂತ್‌ಗೆ ಸಿಗಲಿದೆ 16 ಕೋಟಿ, ಬಿಸಿಸಿಐನಿಂದ + 5 ಕೋಟಿ

ಭಾರತ Vs ನ್ಯೂಜಿಲೆಂಡ್ ಟಿ20 ಸರಣಿಯ ವೇಳಾಪಟ್ಟಿ :
ಜನವರಿ 27: ಮೊದಲ ಟಿ20 (JSCA ಇಂಟರ್’ನ್ಯಾಷನಲ್ ಸ್ಟೇಡಿಯಂ, ರಾಂಚಿ)
ಜನವರಿ 29: 2ನೇ ಟಿ20 (ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ)
ಫೆಬ್ರವರಿ 01: 3ನೇ ಟಿ20 (ನರೇಂದ್ರ ಮೋದಿ ಸ್ಟೇಡಿಯಂ, ಅಹ್ಮದಾಬಾದ್)

Team India comeback only if Ravindra Jadeja passes Yo-Y0, Dexa test, fitness test today

RELATED ARTICLES

Most Popular