“ಅದೊಂದು” ದೊಡ್ಡ ಮೈಲುಗಲ್ಲು ಸ್ಥಾಪಿಸಲಿದ್ದಾರೆ ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್

ಬೆಂಗಳೂರು: ಟೀಮ್ ಇಂಡಿಯಾದ ಹಾರ್ಡ್ ಹಿಟ್ಟಿಂಗ್ ಬ್ಯಾಟ್ಸ್’ಮನ್, ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ (Suryakumar Yadav) ಈಗ ಕ್ರಿಕೆಟ್ (Suryakumar Yadav milestone) ಜಗತ್ತಿನ ಹಾಟ್ ಸನ್ಸೇಶನ್. ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ (India Vs Sri Lanka T20 series) ಬಾರಿಸಿದ ಸಿಡಿಲಬ್ಬರದ ಶತಕದ ನಂತರ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಮ್ಮೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ ನಡೆದ ಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟಿದ್ದರು.ಜಗತ್ತಿನ ನಂ.1 ಟಿ20 ಬ್ಯಾಟ್ಸ್’ಮನ್ ಆಗಿರುವ ಸೂರ್ಯಕುಮಾರ್ ಯಾದವ್ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ರೆಡಿಯಾಗಿದ್ದಾರೆ. ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ (ICC T20 batting ranking) 900 ರೇಟಿಂಗ್ ಪಾಯಿಂಟ್ಸ್ ತಲುಪಿದ ಭಾರತದ ಮೊದಲ ಮತ್ತು ಏಕೈಕ ಬ್ಯಾಟ್ಸ್’ಮನ್ ಎಂಬ ಹಿರಿಮೆಗೆ ಸೂರ್ಯಕುಮಾರ್ ಪಾತ್ರರಾಗಲಿದ್ದಾರೆ.

ಸದ್ಯ 32 ವರ್ಷದ ಸೂರ್ಯಕುಮಾರ್ ಯಾದವ್ 883 ರೇಟಿಂಗ್ ಪಾಯಿಂಟ್’ಗಳೊಂದಿಗೆ ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ರಿಜ್ವಾನ್ (836 ರೇಟಿಂಗ್ಸ್) 2ನೇ ಸ್ಥಾನದಲ್ಲಿದ್ರೆ, ನ್ಯೂಜಿಲೆಂಡ್ ಓಪನರ್ ಡೆವೋನ್ ಕಾನ್ವೇ (788 ರೇಟಿಂಗ್ಸ್) 3ನೇ ಸ್ಥಾನದಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪರಿಷ್ಕೃತ ranking ಬಿಡುಗಡೆಯಾಗಲಿದ್ದು, ಸೂರ್ಯಕುಮಾರ್ ಯಾದವ್ ಅವರ ರೇಟಿಂಗ್ ಪಾಯಿಂಟ್ಸ್ 900ರ ಗಡಿ ದಾಟಲಿದೆ. ಇಲ್ಲಿಯವರೆಗೆ ಟಿ20 ಬ್ಯಾಟಿಂಗ್ rankingನಲ್ಲಿ ಆಸ್ಟ್ರೇಲಿಯಾದ ಆರೋನ್ ಫಿಂಚ್ ಮತ್ತು ಇಂಗ್ಲೆಂಡ್’ನ ಡಾವಿಡ್ ಮಲಾನ್ ಮಾತ್ರ 900 ರೇಟಿಂಗ್ ಪಾಯಿಂಟ್ಸ್ ಗಳಿಸಿದ ಸಾಧನೆ ಮಾಡಿದ್ದರು. ಆ ಸಾಲಿಗೆ ಸೂರ್ಯಕುಮಾರ್ ಯಾದವ್ ಸೇರ್ಪಡೆಯಾಗಲಿದ್ದಾರೆ.

2021ರ ಮಾರ್ಚ್ ತಿಂಗಳಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್, ಎರಡೇ ವರ್ಷಗಳಲ್ಲಿ ಜಗತ್ತಿನ ನಂ.1 ಟಿ20 ಬ್ಯಾಟ್ಸ್’ಮನ್ ಎನಿಸಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಭಾರತ ಪರ 45 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ 46.41ರ ಉತ್ತಮ ಸರಾಸರಿಯಲ್ಲಿ 180.34ರ ಭರ್ಜರಿ ಸ್ಟ್ರೈಕ್’ರೇಟ್’ನಲ್ಲಿ 3 ಶತಕ ಹಾಗೂ 13 ಅರ್ಧಶತಕಗಳ ಸಹಿತ 1578 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : India Vs Sri Lanka ODI series : ನಾಳೆ ಏಕದಿನ ಪಂದ್ಯ; ಕೊಹ್ಲಿ, ರೋಹಿತ್, ರಾಹುಲ್ ಕಂಬ್ಯಾಕ್, ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI

ಇದನ್ನೂ ಓದಿ : Suryakumar Yadav : ಸೂರ್ಯಕುಮಾರ್ ಯಾದವ್ “ತುಳುನಾಡಿನ ಅಳಿಯ”, ತುಂಬಾ ಮಂದಿಗೆ ಗೊತ್ತೇ ಇಲ್ಲದ ಗುಟ್ಟು ಬಿಚ್ಚಿಟ್ಟ ಕೆ.ಎಲ್ ರಾಹುಲ್

ಇದನ್ನೂ ಓದಿ : Rishabh Pant to get 21 CR salary : ಐಪಿಎಲ್ ಆಡದಿದ್ದರೂ ರಿಷಭ್ ಪಂತ್‌ಗೆ ಸಿಗಲಿದೆ 16 ಕೋಟಿ, ಬಿಸಿಸಿಐನಿಂದ + 5 ಕೋಟಿ

ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ಸಾಧನೆ :
ಪಂದ್ಯ: 45
ಇನ್ನಿಂಗ್ಸ್: 43
ರನ್: 1578
ಸರಾಸರಿ: 46.41
ಸ್ಟ್ರೈಕ್’ರೇಟ್: 180.34
ಶತಕ: 03
ಅರ್ಧಶತಕ: 13

Suryakumar Yadav milestone : India’s Mr. 360 Suryakumar Yadav is going to set a big milestone for “It”.

Comments are closed.