ಸೋಮವಾರ, ಏಪ್ರಿಲ್ 28, 2025
HomeSportsCricketIndia Offered Bad Sandwich : ಸಿಡ್ನಿಯಲ್ಲಿ ಭಾರತ ತಂಡಕ್ಕೆ "ಕೆಟ್ಟು ಹೋಗಿದ್ದ ಸ್ಯಾಂಡ್ ವಿಚ್"...

India Offered Bad Sandwich : ಸಿಡ್ನಿಯಲ್ಲಿ ಭಾರತ ತಂಡಕ್ಕೆ “ಕೆಟ್ಟು ಹೋಗಿದ್ದ ಸ್ಯಾಂಡ್ ವಿಚ್” ನೀಡಿದ ವಿಶ್ವಕಪ್ ಆಯೋಜಕರು, ಐಸಿಸಿಗೆ ದೂರಿತ್ತ ಟೀಮ್ ಇಂಡಿಯಾ

- Advertisement -

ಸಿಡ್ನಿ: ಟಿ20 ವಿಶ್ವಕಪ್’ನಲ್ಲಿ (T20 World Cup 2022) ಆಡುತ್ತಿರುವ ಟೀಮ್ ಇಂಡಿಯಾಗೆ ಕಾಂಗರೂಗಳ ನಾಡಿನಲ್ಲಿ ಘೋರ ಅವಮಾನ ಎದುರಾಗಿದೆ. ಸಿಡ್ನಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ಭಾರತ ತಂಡದ ಆಟಗಾರರಿಗೆ ಕೆಟ್ಟು ಹೋಗಿದ್ದ ಸ್ಯಾಂಡ್ ವಿಚ್(India Offered Bad Sandwich) ನೀಡಲಾಗಿದೆ. ವಿಶ್ವಕಪ್ ಆಯೋಜಕರ ಈ ನಡೆಯಿಂದ ಆಕ್ರೋಶಗೊಂಡ ಟೀಮ್ ಇಂಡಿಯಾ ಆಟಗಾರರು, ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ (Sydeny Cricket Ground) ನೀಡಲಾದ ಆಹಾರವನ್ನು ತಿರಸ್ಕರಿಸಿ ಹೋಟೆಲ್’ನಲ್ಲಿ ಊಟ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ನಡೆಸಿಕೊಂಡ ರೀತಿಗೆ ಭಾರತ ತಂಡದ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್’ಗೆ (International Cricket Council – ICC) ದೂರು ನೀಡಿದ್ದಾರೆ.


ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್’ನ ಸೂಪರ್-12 ಹಂತದ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಭಾರತ, ಗುರುವಾರ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಇದಕ್ಕೆ ಪೂರ್ವಭಾವಿಯಲ್ಲಿ ರೋಹಿತ್ ಶರ್ಮಾ ಬಳಗ ಬುಧವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಅಭ್ಯಾಸ ನಡೆಸಿತು. ಈ ವೇಳೆ ಆಟಗಾರರಿಗೆ ನೀಡಲಾದ ಸ್ಯಾಂಡ್ ವಿಚ್ (India Offered Bad Sandwich)ಉತ್ತಮ ಗುಣಮಟ್ಟದ್ದಾಗಿರಲಿಲ್ಲ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ (Indian Cricket Team offered ‘cold and not good’ sandwiches after practice session in Sydney)

ಇದನ್ನೂ ಓದಿ : Dinesh Karthik thanks Aswhin : “ನನ್ನನ್ನು ಉಳಿಸಿದ್ದಕ್ಕೆ ಥ್ಯಾಂಕ್ಸ್” ಅಶ್ವಿನ್’ಗೆ ಹೀಗಂದಿದ್ಯಾಕೆ ದಿನೇಶ್ ಕಾರ್ತಿಕ್?

ಇದನ್ನೂ ಓದಿ : India vs Netherland: ಟಿ20 ವಿಶ್ವಕಪ್: ಭಾರತಕ್ಕೆ ನಾಳೆ ನೆದರ್ಲೆಂಡ್ಸ್ ಎದುರಾಳಿ, ಇಲ್ಲಿದೆ ಪಂದ್ಯದ ಪಿನ್ ಟು ಪಿನ್ ಡೀಟೇಲ್ಸ್

ಇದನ್ನೂ ಓದಿ : Ireland beat England : ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಅಚ್ಚರಿ. ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲುಂಡ ಇಂಗ್ಲೆಂಡ್


“ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಅಭ್ಯಾಸ ನಡೆಸಿದ ನಂತರ ಟೀಮ್ ಇಂಡಿಯಾ ಆಟಗಾರರಿಗೆ ನೀಡಲಾಗಿದ್ದ ಆಹಾರ ಚೆನ್ನಾಗಿರಲಿಲ್ಲ. ಅವರು ಕೇವಲ ಸ್ಯಾಂಡ್ ವಿಚ್ ಮಾತ್ರ ನೀಡಿದ್ದರು. ಆ ಸ್ಯಾಂಡ್ ವಿಚ್’ಗಳೂ ಕೂಡ ತಂಪಾಗಿದ್ದವು ಮತ್ತು ಉತ್ತಮವಾಗಿರಲಿಲ್ಲ. ಈ ಬಗ್ಗೆ ಐಸಿಸಿಗೆ ದೂರು ನೀಡಲಾಗಿದೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟಿ20 ವಿಶ್ವಕಪ್’ನಲ್ಲಿ ಆಟಗಾರರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಬೇಕಾದ ಜವಾಬ್ದಾರಿ ಐಸಿಸಿ ಮೇಲಿದೆ. ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಲ್ಲಾದರೆ ಈ ಜವಾಬ್ದಾರಿ ಟೂರ್ನಿಗೆ ಆತಿಥ್ಯ ವಹಿಸುವ ಆತಿಥೇಯ ಕ್ರಿಕೆಟ್ ಸಂಸ್ಥೆಯದ್ದಾಗಿರುತ್ತದೆ.

Team India complains to ICC after World Cup organizers gave ‘bad sandwich’ to Indian team in Sydney

RELATED ARTICLES

Most Popular