ಅಹ್ಮದಾಬಾದ್ : ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ (Vijay Hazare Trophy Karnataka) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆಯುವ ಪಂದ್ಯದಲ್ಲಿ ಕರ್ನಾಟಕ ತಂಡ, ಪಂಜಾಬ್ ತಂಡವನ್ನು ಸೋಲಿಸಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲೇ ಪಂಜಾಬ್ ವಿರುದ್ಧ ಕರ್ನಾಟಕ ಸೋಲು ಕಂಡಿತ್ತು. ಈಗ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲೇ ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡಕ್ಕೆ ಒದಗಿ ಬಂದಿದೆ.
ಶನಿವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು 5 ವಿಕೆಟ್’ಗಳಿಂದ ಮಣಿಸಿದ ಕರ್ನಾಟಕ ಕ್ವಾರ್ಟರ್ ಫೈನಲ್’ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ್ದ ಜಾರ್ಖಂಡ್, ಕರ್ನಾಟಕದ ತ್ರಿವಳಿ ವೇಗಿಗಲಾದ ವಿದ್ವತ್ ಕಾವೇರಪ್ಪ(3/20), ರೋನಿತ್ ಮೋರೆ(3/31) ಮತ್ತು ಎಂ.ವೆಂಕಟೇಶ್(3/51) ದಾಳಿಗೆ ತತ್ತರಿಸಿ 47.1 ಓವರ್’ಗಳಲ್ಲಿ 187 ರನ್ನಿಗೆ ಆಲೌಟಾಗಿತ್ತು. ನಂತರ ಗುರಿ ಬೆನ್ನಟ್ಟಿದ್ದ ಕರ್ನಾಟಕ ಉಪನಾಯಕ ಆರ್.ಸಮರ್ಥ್(53) ಮತ್ತು ಯುವ ಬ್ಯಾಟ್ಸ್’ಮನ್ ನಿಕಿನ್ ಜೋಸ್(ಅಜೇಯ 63) ಅವರ ಅರ್ಧಶತಗಳ ನೆರವಿನಿಂದ 40.5 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಸುಲಭ ಜಯ ದಾಖಲಿಸಿತ್ತು.
ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕದ ಪ್ಲೇಯಿಂಗ್ XI
1.ಮಯಾಂಕ್ ಅಗರ್ವಾಲ್(ನಾಯಕ), 2.ಆರ್.ಸಮರ್ಥ್(ಉಪನಾಯಕ), 3.ನಿಕಿನ್ ಜೋಸ್, 4.ಮನೀಶ್ ಪಾಂಡೆ, 5.ಶ್ರೇಯಸ್ ಗೋಪಾಲ್, 6.ಬಿ.ಆರ್ ಶರತ್(ವಿಕೆಟ್ ಕೀಪರ್), 7.ಮನೋಜ್ ಭಾಂಡಗೆ, 8.ಕೃಷ್ಣಪ್ಪ ಗೌತಮ್, 9.ರೋನಿತ್ ಮೋರೆ, 10.ವಿದ್ವತ್ ಕಾವೇರಪ್ಪ, 11.ವಿ.ಕೌಶಿಕ್.
ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ಸ್
- ಕರ್ನಾಟಕ Vs ಪಂಜಾಬ್ (ಬೆಳಗ್ಗೆ 9ಕ್ಕೆ)
- ಮಹಾರಾಷ್ಟ್ರ Vs ಉತ್ತರ ಪ್ರದೇಶ
- ಅಸ್ಸಾಂ Vs ಜಮ್ಮು & ಕಾಶ್ಮೀರ
- ತಮಿಳುನಾಡು Vs ಸೌರಾಷ್ಟ್ರ
ಇದನ್ನೂ ಓದಿ : Sanju Samson Out : ಕಿವೀಸ್ ನಾಡಿನಲ್ಲೂ ಸಂಜು ಮತ್ತೆ ಬಲಿಪಶು, 2ನೇ ಏಕದಿನ ಪಂದ್ಯದಿಂದ ಸ್ಯಾಮ್ಸನ್ ಔಟ್
ಇದನ್ನೂ ಓದಿ : Pro Kabaddi League : ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಪುಣೇರಿ ಪಲ್ಟನ್, ಬುಲ್ಸ್‌ಗಿಂದು ದಬಾಂಗ್ ಸವಾಲ್
ಇದನ್ನೂ ಓದಿ : White ball cricket : ವೈಟ್ ಬಾಲ್ ಕ್ರಿಕೆಟ್‌ಗೆ ರಿಷಬ್ ಪಂತ್ ಲಾಯಕ್ಕಿಲ್ವಾ? ಕ್ರಿಕೆಟ್ ಪ್ರಿಯರು ರೊಚ್ಚಿಗೆದ್ದಿದ್ಯಾಕೆ ?
ವಿಜಯ್ ಹಜಾರೆ ಟ್ರೋಫಿ (Vijay Hazare Trophy Karnataka) : ಕರ್ನಾಟಕದ ಕ್ವಾರ್ಟರ್ ಫೈನಲ್ ಹಾದಿ
ಮೊದಲ ಪಂದ್ಯ: ಮೇಘಾಲಯ ವಿರುದ್ಧ 115 ರನ್ ಗೆಲುವು
2ನೇ ಪಂದ್ಯ: ವಿರರ್ಭ ವಿರುದ್ಧ 66 ರನ್ ಗೆಲುವು
3ನೇ ಪಂದ್ಯ: ಜಾರ್ಖಂಡ್ ವಿರುದ್ಧ 6 ವಿಕೆಟ್ ಗೆಲುವು
4ನೇ ಪಂದ್ಯ: ದೆಹಲಿ ವಿರುದ್ಧ 4 ವಿಕೆಟ್ ಗೆಲುವು
5ನೇ ಪಂದ್ಯ: ಅಸ್ಸಾಂ ವಿರುದ್ಧ 6 ವಿಕೆಟ್ ಸೋಲು
6ನೇ ಪಂದ್ಯ: ಸಿಕ್ಕಿಂ ವಿರುದ್ಧ 6 ವಿಕೆಟ್ ಗೆಲುವು
7ನೇ ಪಂದ್ಯ: ರಾಜಸ್ಥಾನ ವಿರುದ್ಧ 60 ರನ್ ಗೆಲುವು
ಪ್ರೀ ಕ್ವಾರ್ಟರ್ ಫೈನಲ್: ಜಾರ್ಖಂಡ್ ವಿರುದ್ಧ 5 ವಿಕೆಟ್ ಗೆಲುವು
Vijay Hazare Trophy Karnataka : Quarter final tomorrow at Modi Stadium; Karnataka taking revenge against Punjab?