Engagement Cancel : ಎಂಗೇಜ್ಮೆಂಟ್‌ ಆದ್ಮೇಲೆ ಹಳೆ ಪ್ರಿಯತಮೆ ಜೊತೆ ಓಡಿಹೋದ ಮರೆಪ್ಪ

ಕಲಬುರುಗಿ : ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ನಿವಾಸಿಯೊಬ್ಬ ಮನೆಯಲ್ಲಿ ನಿಶ್ಚಿರ್ಥವಾದ ನಡೆದ ಮೇಲೆ ಹಳೆ ಪ್ರೇಯಸಿ ಜೊತೆ (Engagement Cancel) ಮನೆಬಿಟ್ಟು ಓಡಿಹೋಗಿದ್ದಾನೆ. ನಿನ್ನೆ ಮದುವೆ ಆಗುತ್ತೇನೆ, ಎಂಗೇಜ್ಮೆಂಟ್‌ ಕ್ಯಾನ್ಸಲ್‌ ಮಾಡಿಕೊಂಡು ಬಾ ಎಂದು ಕಾಡ್ತಿದ್ದ ಹಳೆಯ ಪ್ರೇಯಸಿಯ ಕಾಟಕ್ಕೆ ಬೇಸತ್ತು ಅಪ್ಪ-ಅಮ್ಮನನ್ನು ಬಿಟ್ಟು ಓಡಿ ಹೋಗಿದ್ದಾನೆ.

ನಾಪತ್ತೆಯಾದ ಯುವಕ ಕಲಬುರುಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಮರೆಪ್ಪಾ ಎನ್ನುವ ಯುವಕ ಆಗಿದ್ದಾನೆ. ಈ ಹಿಂದೆ ಹೆಣ್ಣು ನೋಡೋಕೆ ಹೋದಾಗ ಹುಡುಗ ಇಷ್ಟವಿಲ್ಲ ಎಂದು ಮರೆಪ್ಪನನ್ನು ತಿರಸ್ಕರಿಸಿದ್ದಾಳೆ. ನಂತರ ಮರಪ್ಪಾ ಮತ್ತೊಂದು ಹುಡುಗಿಯನ್ನು ನೋಡಿ ನಿಶ್ಚಿರ್ಥವಾದ ಮೇಲೆ ಮೊದಲು ತಿರಸ್ಕರಿಸಿದ ಯುವತಿ ಮರಪ್ಪಾಗೆ ಕಾಟ ಕೋಡಲು ಶುರು ಮಾಡಿದ್ದಾಳೆ. ನಿನ್ನೇ ಮದುವೆ ಆಗುವೇ ಎಂಗೇಜ್ಮೆಂಟ್‌ ಕ್ಯಾನ್ಸಲ್‌ ಮಾಡಿಕೊಂಡು ಬಾ ಎಂದು ಯುವತಿ ನಿರಂತರವಾಗಿ ಕಾಡಲು ಶುರು ಮಾಡಿದ್ದಾಳೆ. ಯುವತಿಯ ಕಾಟಕ್ಕೆ ಬೇಸತ್ತು ಮರೆಪ್ಪ ಮನೆ ಬಿಟ್ಟು ಹೋಗಿದ್ದಾನೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾನದ ಮರೆಪ್ಪ ಬೀದರ್‌ ಜಿಲ್ಲಾ ಪಂಚಾಯತ್‌ನಲ್ಲಿ ನರೇಗಾ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದನು. ಸ್ನೇಹಿತರ ಜೊತೆ ಸೇರಿಕೊಂಡು ಬೀದರ್‌ನಲ್ಲೇ ಹುಡುಗಿ ನೋಡಿದ್ದಾನೆ. ಆ ಯುವತಿ ಹುಡುಗ ಸರಿ ಇಲ್ಲ ಅಂತಾ ಮೊದಲು ತಿರಸ್ಕರಿಸಿದ್ದಳು. ನಂತರ ಮರೆಪ್ಪ ಮತ್ತೊಂದು ಹುಡುಗಿ ನೋಡಿ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದು, ಈ ಮಧ್ಯೆ ಹಳೆ ಯುವತಿ ಸಿಕ್ಕಿ ಇಬ್ಬರ ಮಧ್ಯೆ ಸ್ನೇಹವಾಗಿದೆ. ಇಬ್ಬರು ಮೊಬೈಲ್‌ ನಂಬರ್‌ ಬದಲಾಯಿಸಿಕೊಂಡು ಕಾಲ್‌ ಮತ್ತು ಮೆಸೇಜ್‌ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಬಳಿಕ ಮರೆಪ್ಪಾಗೆ ಎಂಗೇಜ್ಮೆಂಟ್‌ ಆದ ವಿಷಯ ತಿಳಿದು ತಿರಸ್ಕಾರ ಮಾಡಿದ ಯುವತಿ ಮತ್ತೆ ಮದುವೆಯಾಗುವಂತೆ ಕಾಟ ಕೊಟ್ಟಿದ್ದಾಳೆ.

ಇದನ್ನೂ ಓದಿ : Assault On Student by Teacher : ಮಗ್ಗಿ ಹೇಳದ ವಿದ್ಯಾರ್ಥಿ ಕೈಗೆ ಗಾಯ ಮಾಡಿದ ಶಿಕ್ಷಕ

ಇದನ್ನೂ ಓದಿ : Bomb blast target:‌ ಧರ್ಮಸ್ಥಳ ಮತ್ತು ಕೃಷ್ಣ ಮಠವನ್ನೂ ಟಾರ್ಗೆಟ್‌ ಮಾಡಿದ್ನಾ ಉಗ್ರ ಶಾರೀಖ್‌ ?

ಇದನ್ನೂ ಓದಿ : Charmadi bomb blast:‌ ಮಂಗಳೂರು ಚಾರ್ಮಾಡಿಯಲ್ಲೂ ಬಾಂಬ್ ಬ್ಲಾಸ್ಟ್

ಮರೆಪ್ಪಾ ಐದು ಪುಟಗಳ ಪತ್ರ ಬರೆದು, ತನ್ನ ಮೊಬೈಲ್‌ ಫೋನ್‌ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾನೆ. ಮನೆಯಲ್ಲಿ ವೃದ್ಧ ತಂದೆ ತಾಯಿ ನಾಪತ್ತೆಯಾದ ಮಗನಿಗಾಗಿ ಕಣ್ಣೀರು ಹಾಕುತ್ತಾ ಕಾದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನೆಲೋಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾಣೆಯಾದ ಮರೆಪ್ಪನಿಗಾಗಿ ಹುಡುಕಾಟ ನಡೆಸಿದ್ದಾರೆ.

Engagement Cancel: Mareppa ran away with his old lover after getting engaged

Comments are closed.