ಭಾನುವಾರ, ಜೂನ್ 15, 2025
HomeSportsCricketVirat Kohli Scooter Ride: ಪತ್ನಿಯನ್ನು ಕೂರಿಸಿಕೊಂಡು ಅಜ್ಞಾತ ವೇಷದಲ್ಲಿ ಸ್ಕೂಟರ್ ಓಡಿಸಿದ ವಿರಾಟ್ ಕೊಹ್ಲಿ

Virat Kohli Scooter Ride: ಪತ್ನಿಯನ್ನು ಕೂರಿಸಿಕೊಂಡು ಅಜ್ಞಾತ ವೇಷದಲ್ಲಿ ಸ್ಕೂಟರ್ ಓಡಿಸಿದ ವಿರಾಟ್ ಕೊಹ್ಲಿ

- Advertisement -

ಮುಂಬೈ: (Virat Kohli Anushka Sharma) ಭಾರತದಲ್ಲಿ ಕ್ರಿಕೆಟಿಗರಿಗೆ ಇರುವ ಜನಪ್ರಿಯತೆ, ಫ್ಯಾನ್ ಬೇಸ್ ಬೇರೆ ಯಾವ ಕ್ರೀಡಾಪಟುಗಳಿಗೂ ಇಲ್ಲ. ಅದರಲ್ಲೂ ಕಿಂಗ್ ಕೊಹ್ಲಿ ಅಂದ್ರೆ ಕ್ರಿಕೆಟ್ ಪ್ರಿಯರಿಗೆ ತುಂಬಾ ಅಚ್ಚುಮೆಚ್ಚು. ಕೊಹ್ಲಿ ಅಲ್ಲೇ ಹೋದರೂ, ಅಭಿಮಾನಿಗಳು ಜೇನುನೊಣಗಳಂತೆ ಮುತ್ತಿಕೊಳ್ತಾರೆ. ಅಭಿಮಾನಿಗಳಿಂದ ತಪ್ಪಿಸಿಕೊಳ್ಳುವುದೇ ಕ್ರಿಕೆಟಿಗರಿಗೆ ದೊಡ್ಡ ಸವಾಲು.

ಆದರೆ ಎರಡು ದಿನಗಳ ಹಿಂದೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಕೂರಿಸಿಕೊಂಡು ಮುಂಬೈನ ಬೀದಿಯಲ್ಲಿ ಸ್ಕೂಟರ್ ಓಡಿಸಿದ್ದಾರೆ. ಅಚ್ಚರಿಯ ಸಂಗತಿ ಏನಂದ್ರೆ ಕೊಹ್ಲಿ ಸ್ಕೂಟರ್ ಓಡಿಸುತ್ತಿದ್ದರೂ, ಅವರನ್ನು ಯಾರೂ ಗುರುತು ಹಿಡಿದಿಲ್ಲ. ವಿರುಷ್ಕಾ ದಂಪತಿ ತಲೆಗೆ ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿ ಗುರುತೇ ಸಿಗದ ರೀತಿಯಲ್ಲಿದ್ದ ಕಾರಣ, ಸ್ಕೂಟರ್ ಓಡಿಸುತ್ತಿರುವುದು ಇವರೇ ಎಂಬುದು ಯಾರಿಗೂ ಗೊತ್ತಾಗಿಲ್ಲ.

ಸದ್ಯ ಕ್ರಿಕೆಟ್’ನಿಂದ ಬಿಡುವು ಪಡೆದಿರುವ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಮತ್ತು ಪುತ್ರಿ ವಾಮಿಕಾ ಜೊತೆ ಕಾಲ ಕಳೆಯುತ್ತಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಆಡುವ ಮೂಲಕ ಕೊಹ್ಲಿ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಷ್ಯಾ ಕಪ್ ಟಿ20 ಟೂರ್ನಿಗಾಗಿ ಭಾರತ ತಂಡ ಮಂಗಳವಾರ ಅಥವಾ ಬುಧವಾರ ದುಬೈಗೆ ತೆರಳಲಿದ್ದು, ಆಗಸ್ಟ್ 28ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್ ಪ್ರವಾಸದ ನಂತರ ವಿರಾಟ್ ಕೊಹ್ಲಿ ಕ್ರಿಕೆಟ್’ನಿಂದ ಬಿಡುವು ಪಡೆದಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಬಿಡುವಿನ ವೇಳೆಯಲ್ಲಿ ಮುಂಬೈ ಬೀದಿಗಳಲ್ಲಿ ಸ್ಕೂಟರ್ ಓಡಿಸುವ ಮೂಲಕ ವಿರಾಟ್ ಕೊಹ್ಲಿ ಸುದ್ದಿಯಾಗಿದ್ದಾರೆ.

https://twitter.com/Vineetsharma906/status/1560998884674920449?s=20&t=V0s8qLIe9m3nA03rUf_bJw

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸದೆ ಬರೋಬ್ಬರಿ ಸಾವಿರ ದಿನಗಳೇ ಕಳೆದು ಹೋಗಿವೆ. ಬಾಂಗ್ಲಾದೇಶ ವಿರುದ್ಧ 2019ರ ನವೆಂಬರ್ ತಿಂಗಳಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದ್ದೇ ಕೊನೆ. ನಂತರ ಕಿಂಗ್ ಕೊಹ್ಲಿಯ ಬ್ಯಾಟ್’ನಿಂದ ಶತಕ ಸಿಡಿದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊನೆಯ ಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ 68 ಪಂದ್ಯಗಳನ್ನಾಡಿದ್ದು 82 ಇನ್ನಿಂಗ್ಸ್’ಗಳಿಂದ 34.05ರ ಸರಾಸರಿಯಲ್ಲಿ 2,554 ರನ್ ಗಳಿಸಿದ್ದಾರೆ. ಈ ವೇಳೆ ಒಟ್ಟು 24 ಬಾರಿ ಅರ್ಧಶತಕದ ಗಡಿ ದಾಟಿದ್ರೂ, ಶತಕ ಮಾತ್ರ ಮರೀಚಿಕೆಯಾಗಿಯೇ ಉಳಿದು ಬಿಟ್ಟಿದೆ.

https://twitter.com/Realishfaq95/status/1560981390766002176?s=20&t=V0s8qLIe9m3nA03rUf_bJw

ಇದನ್ನೂ ಓದಿ : RCB coach Sridharan Sriram : ಆರ್‌ಸಿಬಿ ಮಾಜಿ ಕೋಚ್ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸೇರ್ಪಡೆ

ಇದನ್ನೂ ಓದಿ : KL Rahul Zimbabwe player : ಕೆ.ಎಲ್ ರಾಹುಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಬಂದ ಜಿಂಬಾಬ್ವೆ ಆಟಗಾರ

Virat Kohli Anushka Sharma drove a scooter in an unknown disguise with his wife sitting on it

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular