ಮುಂಬೈ : ಮಹಿಳಾ ಐಪಿಎಲ್ ಟೂರ್ನಿಯಲ್ಲಿ (Women’s Premier League 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore Women’s), ಸತತ ಐದು ಸೋಲುಗಳ ನಂತರ ಮೊದಲ ಗೆಲುವು ದಾಖಲಿಸಿದೆ. ಆರ್’ಸಿಬಿ ವನಿತೆಯರ ಈ ಗೆಲುವಿಗೆ ಕಾರಣವಾಗಿದ್ದು ಕಿಂಗ್ ಕೊಹ್ಲಿ (Virat Kohli RCB ). ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತನ್ನ 6ನೇ ಲೀಗ್ ಪಂದ್ಯದಲ್ಲಿ ಸ್ಮೃತಿ ಮಂಧನ ಸಾರತ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಯು.ಪಿ ವಾರಿಯರ್ಸ್ ವಿರುದ್ಧ 5 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು.
ಈ ಮೂಲಕ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಂಭ್ರಮವನ್ನಾಚರಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ. ಯು.ಪಿ ವಾರಿಯರ್ಸ್ ವಿರುದ್ಧ ಆರ್’ಸಿಬಿ ಸಾಧಿಸಿದ ಅಮೋಘ ಗೆಲುವಿನ ಹಿಂದೆ ಕಿಂಗ್ ಕೊಹ್ಲಿಯ ಕರಾಮತ್ತು ಅಡಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡದ ಮಾಜಿ ನಾಯಕರಾಗಿರುವ ವಿರಾಟ್ ಕೊಹ್ಲಿ, ಸತತ ಸೋಲುಗಳಿಂದ ಬಸವಳಿದಿದ್ದ ಆರ್’ಸಿಬಿ ವನಿತೆಯರಿಗೆ ಸ್ಫೂರ್ತಿಯುತ ಮಾತುಗಳನ್ನಾಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಏಕದಿನ ಪಂದ್ಯಕ್ಕಾಗಿ ಮುಂಬೈನಲ್ಲಿರುವ ವಿರಾಟ್ ಕೊಹ್ಲಿ, ಬುಧವಾರ ಯು.ಪಿ ವಾರಿಯರ್ಸ್ ಪಂದ್ಯಕ್ಕೂ ಮುನ್ನ ಆರ್’ಸಿಬಿ ಮಹಿಳೆಯರನ್ನು ಭೇಟಿ ಮಾಡಿದ್ದಾರೆ. ಆರ್’ಸಿಬಿ ವನಿತೆಯರು ತಂಗಿದ್ದ ಹೋಟೆಲ್’ಗೆ ಭೇಟಿ ನೀಡಿದ ವಿರಾಟ್ ಕೊಹ್ಲಿ, ಆಟಗಾರ್ತಿಯರನ್ನುದ್ದೇಶಿ 10 ನಿಮಿಷಗಳ ಕಾಲ ಮಾತನಾಡಿದರು.
“ನಾನು 15 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಆಡುತ್ತಿದ್ದೇನೆ. ಆದರೆ ನಾವು ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಹಾಗಂತ ಇವತ್ತಿಗೂ ನಂಬಿಕೆ ಕಳೆದುಕೊಂಡಿಲ್ಲ. ಮೊದಲ ದಿನ ಆರ್’ಸಿಬಿ ಪರ ಆಡುವಾಗ ಇದ್ದ ಉತ್ಸಾಹ, ತಂಡದ ಮೇಲಿನ ಅಭಿಮಾನ ಈಗಲೂ ಇದೆ. ಕ್ರೀಡೆಯಲ್ಲಿ ಕೆಲವೊಮ್ಮೆ ಅದೃಷ್ಟ ನಿಮ್ಮ ಪರವಾಗಿರುವುದಿಲ್ಲ. ಹಾಗಂತ ನಂಬಿಕೆ ಕಳೆದುಕೊಳ್ಳಬಾರದು. ತಂಡಕ್ಕಾಗಿ 110% ಪರಿಶ್ರಮ ಹಾಕಿ ಆಡಿ. ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ” ಎಂದು ಆರ್’ಸಿಬಿ ವನಿತೆಯರಿಗೆ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದ್ದರು.
ವಿರಾಟ್ ಕೊಹ್ಲಿ ಅವರ ಈ ಮಾತುಗಳಿಂದ ಪುಟಿದೆದ್ದ ಆರ್’ಸಿಬಿ, ಯು.ಪಿ ವಾರಿಯರ್ಸ್ ವಿರುದ್ಧ ಅಮೋಘ ಪ್ರದರ್ಶನ ತೋರಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಯು.ಪಿ ವಾರಿಯರ್ಸ್ ತಂಡವನ್ನು ಆರ್’ಸಿಬಿ ವನಿತೆಯರು 135 ರನ್’ಗಳಿಗೆ ಕಟ್ಟಿ ಹಾಕಿದರು. ನಂತರ ನಂತರ ಗುರಿ ಬೆನ್ನಟ್ಟಿದ ಆರ್’ಸಿಬಿ 18 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಸ್ಮೃತಿ ಮಂಧನ ಬಳಗ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.
ರಾಯಲ್ ಚಾಲೆಂಜರ್ಸ್ ತಂಡದ ಪ್ಲೇ ಆಫ್ ಚಾನ್ಸ್ :
- ಮುಂದಿನ ಎರಡೂ ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಗೆಲ್ಲಬೇಕು
- ಯು.ಪಿ ವಾರಿಯರ್ಸ್ ಮುಂದಿನ ಮೂರೂ ಪಂದ್ಯಗಳನ್ನು ಸೋಲಬೇಕು.
- ಗುಜರಾತ್ ಜೈಂಟ್ಸ್ ತಂಡ ತನ್ನ ಮುಂದಿನ ಮೂರೂ ಪಂದ್ಯಗಳನ್ನು ಸೋಲಬೇಕು.
- ಆಗ ರಾಯಲ್ ಚಾಲೆಂಜರ್ಸ್ 6 ಅಂಕ, ಯು.ಪಿ ವಾರಿಯರ್ಸ್ 4 ಅಂಕ ಹಾಗೂ ಗುಜರಾತ್ ಜೈಂಟ್ಸ್ 2 ಅಂಕ ಗಳಿಸಿದಂತಾಗಲಿದೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು 3ನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಲಿದೆ.
ಇದನ್ನೂ ಓದಿ : Women’s Premier League : ಆರ್‌ಸಿಬಿಗೆ ಇಂದು ಮಾಡು ಇಲ್ಲ ಮಡಿ ಮಂದ್ಯ, ಮಂಧನ ಪಡೆಗೆ ಇನ್ನೂ ಇದೆ ಪ್ಲೇ ಆಫ್ ಚಾನ್ಸ್
WPL ಟೂರ್ನಿ: RCB ತಂಡದ ಮುಂದಿನ ಪಂದ್ಯಗಳು
ಮಾರ್ಚ್ 18: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 21: Vs ಮುಂಬೈ ಇಂಡಿಯನ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 3.30 pm)
Virat Kohli RCB : Virat special class for RCB players, King Kohli brings first victory to Royal Challengers