ಮಂಗಳವಾರ, ಏಪ್ರಿಲ್ 29, 2025
HomeSportsCricketVirat Kohli steps down Test captain : ಭಾರತ ಟೆಸ್ಟ್‌ ತಂಡದ ನಾಯಕತ್ವದಿಂದ...

Virat Kohli steps down Test captain : ಭಾರತ ಟೆಸ್ಟ್‌ ತಂಡದ ನಾಯಕತ್ವದಿಂದ ಕೆಳಗಿಳಿದ ವಿರಾಟ್‌ ಕೊಹ್ಲಿ

- Advertisement -

ಮುಂಬೈ : ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಸೋಲಿನ ರುಚಿ ಕಂಡಿದೆ. ಮೊದಲ ಪಂದ್ಯದಲ್ಲಿ ಗೆಲುವು ಕಂಡಿದ್ದ ಭಾರತ ಸತತವಾಗಿ ಎರಡು ಸೋಲುಗಳಿಂದ ಕಂಗೆಟ್ಟಿದೆ. ಟೀಂ ಇಂಡಿಯಾದ ಪ್ರದರ್ಶನ ಸಾಕಷ್ಟು ಟೀಕೆಗೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ನಾಯಕತ್ವದಿಂದ (Virat Kohli steps down Test captain) ಕೆಳಗಿಳಿದಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟಿ20 ವಿಶ್ವಕಪ್‌ಗೂ ಮುನ್ನ ವಿರಾಟ್‌ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ನಂತರದಲ್ಲಿ ಬಿಸಿಸಿಐ ಅವರನ್ನು ಏಕದಿನ ನಾಯಕತ್ವದಿಂದಲೂ ಕೆಳಗಿಳಿಸಿತ್ತು. ಏಕದಿನ ಸರಣಿಗೆ ರೋಹಿತ್‌ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಗಾಯದ ಸಮಸ್ಯೆಯಿಂದ ರೋಹಿತ್‌ ಶರ್ಮಾ ತಂಡದಿಂದ ಹೊರಗುಳಿಯುತ್ತಿದ್ದಂತೆಯೇ ಕನ್ನಡಿಗ ಕೆ.ಎಲ್.ರಾಹುಲ್‌ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ಏಕದಿನ ಹಾಗೂ ಟಿ೨೦ ಸರಣಿಗೆ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಯ್ಲಿ ತಂಡವನ್ನು ಮುನ್ನಡೆಸಿದ್ದು, ಗೆಲುವನ್ನು ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ವಿರಾಟ್‌ ಕೊಯ್ಲಿ ಆಡಿರಲಿಲ್ಲ. ಹೀಗಾಗಿ ರಾಹುಲ್‌ ನಾಯಕರಾಗಿ ತಂಡವನ್ನು ಮುನ್ನೆಡಿಸಿದ್ದರೂ ಕೂಡ ಟೀಂ ಇಂಡಿಯಾ ಸೋಲನ್ನು ಕಂಡಿತ್ತು. ಆದರೆ ಅಂತಿಮ ಪಂದ್ಯದಲ್ಲಿ ವಿರಾಟ್‌ ಕೊಯ್ಲಿ ಮತ್ತೆ ನಾಯಕನಾಗಿ ತಂಡವನ್ನು ಕೂಡಿಕೊಂಡಿದ್ದರು. ಆಟಗಾರರ ಕಳಪೆ ಆಟದಿಂದಾಗಿ ಭಾರತ ಟೆಸ್ಟ್‌ ಸರಣಿಯನ್ನು ಕೈಚೆಲ್ಲಿತ್ತು.

ಇದರ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಟೆಸ್ಟ್‌ ತಂಡಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ಮೂಲಕ ವಿರಾಟ್‌ ಕೊಹ್ಲಿ ಭಾರತದ ಟೆಸ್ಟ್ ನಾಯಕನಾಗಿ ಅವರ 7 ವರ್ಷಗಳ ಪ್ರಯಾಣವು ಅಂತ್ಯಗೊಂಡಿದೆ. ವಿರಾಟ್ ಕೊಹ್ಲಿ 2014 ಮತ್ತು 2022 ರ ನಡುವೆ 68 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದರು. ಅಲ್ಲದೇ ಅವರು 40 ಪಂದ್ಯಗಳನ್ನು ಗೆದ್ದಿದ್ದಾರೆ. ನಾಯಕನಾಗಿ ವಿರಾಟ್‌ ಕೊಹ್ಲಿ 58.82 ರಷ್ಟು ಗೆಲುವಿನ ಮೂಲಕ ಭಾರತದ ತಂಡದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದರು.

ಕೊಹ್ಲಿ 2014 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್‌ ಸರಣಿಗೆ ಭಾರತದ ಟೆಸ್ಟ್ ನಾಯಕರಾಗಿ ಎಂಎಸ್ ಧೋನಿ ಅವರಿಂದ ಅಧಿಕಾರ ವಹಿಸಿಕೊಂಡರು. ಅಲ್ಲಿಂದ ವಿರಾಟ್‌ ಕೊಹ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಭಾರತ ಟೆಸ್ಟ್‌ ತಂಡವನ್ನು ಸುದೀರ್ಘ ಅವಧಿಯವರೆಗೆ ಮುನ್ನೆಡೆಸಿದ್ದ ನಾಯಕ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಕೊಹ್ಲಿ 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಗಳಿಸುವ ಮೂಲಕ ಭಾರತವನ್ನು ಮುನ್ನಡೆಸಿದರು. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಲ್ಲಿಯೂ ಭಾರತ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಖ್ಯಾತಿಯೂ ವಿರಾಟ್‌ ಕೊಹ್ಲಿ ಅವರಿಗೆ ಸಲ್ಲುತ್ತದೆ.

ಟೆಸ್ಟ್‌ ತಂಡಕ್ಕೆ ರಾಜೀನಾಮೆ ಕುರಿತು ವಿರಾಟ್‌ ಕೊಹ್ಲಿ ಹೇಳಿದ್ದೇನು ?

ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಇದು 7 ವರ್ಷಗಳ ಕಠಿಣ ಪರಿಶ್ರಮ, ಶ್ರಮ ಮತ್ತು ನಿರಂತರ ಪರಿಶ್ರಮದಿಂದ ಪ್ರತಿ ದಿನವಾಗಿದೆ. ನಾನು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸವನ್ನು ಮಾಡಿದ್ದೇನೆ ಮತ್ತು ಅಲ್ಲಿ ಏನನ್ನೂ ಬಿಡಲಿಲ್ಲ. ಎಲ್ಲವೂ ಒಂದು ಹಂತದಲ್ಲಿ ಸ್ಥಗಿತಗೊಳ್ಳಬೇಕು. ನಾನು ಭಾರತದ ಟೆಸ್ಟ್ ನಾಯಕನಾಗಿದ್ದೇನೆ. ಈಗ. ಪ್ರಯಾಣದ ಉದ್ದಕ್ಕೂ ಹಲವು ಏರಿಳಿತಗಳು ಮತ್ತು ಕೆಲವು ಕುಸಿತಗಳು ಕಂಡುಬಂದಿವೆ, ಆದರೆ ಎಂದಿಗೂ ಪ್ರಯತ್ನದ ಕೊರತೆ ಅಥವಾ ನಂಬಿಕೆಯ ಕೊರತೆ ಕಂಡುಬಂದಿಲ್ಲ” ಎಂದು ವಿರಾಟ್ ಕೊಹ್ಲಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ನಾನು ಮಾಡುವ ಪ್ರತಿಯೊಂದರಲ್ಲೂ ನನ್ನ 120 ಪ್ರತಿಶತವನ್ನು ನೀಡಲು ನಾನು ಯಾವಾಗಲೂ ನಂಬಿದ್ದೇನೆ ಮತ್ತು ನಾನು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅದು ಸರಿಯಾದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನನ್ನ ಹೃದಯದಲ್ಲಿ ನನಗೆ ಸಂಪೂರ್ಣ ಸ್ಪಷ್ಟತೆ ಇದೆ ಮತ್ತು ನನ್ನ ತಂಡಕ್ಕೆ ನಾನು ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ.”

ಎಂಎಸ್ ಧೋನಿಗೆ ದೊಡ್ಡ ಧನ್ಯವಾದ ಎಂದ ಕೊಹ್ಲಿ : ವಿರಾಟ್ ಕೊಹ್ಲಿ ಶನಿವಾರದಂದು ಹೃತ್ಪೂರ್ವಕ ಪೋಸ್ಟ್‌ನಲ್ಲಿ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಅವರ ಮಾಜಿ ಧೋನಿಗೆ ಧನ್ಯವಾದ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಿರಂತರವಾಗಿ ನಮ್ಮನ್ನು ಮೇಲಕ್ಕೆ ಕೊಂಡೊಯ್ಯಲು ಈ ವಾಹನದ ಹಿಂದೆ ಎಂಜಿನ್ ಆಗಿದ್ದ ರವಿ ಭಾಯ್ ಮತ್ತು ಬೆಂಬಲ ಗುಂಪಿಗೆ, ಈ ದೃಷ್ಟಿಯನ್ನು ಜೀವಂತಗೊಳಿಸುವಲ್ಲಿ ನೀವೆಲ್ಲರೂ ದೊಡ್ಡ ಪಾತ್ರವನ್ನು ವಹಿಸಿದ್ದೀರಿ. ಕೊನೆಯದಾಗಿ, ನಂಬಿದ ಎಂಎಸ್ ಧೋನಿಗೆ ದೊಡ್ಡ ಧನ್ಯವಾದಗಳು. ನಾನು ನಾಯಕನಾಗಿ ಮತ್ತು ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯುವ ಸಮರ್ಥ ವ್ಯಕ್ತಿ ಎಂದು ನಾನು ಕಂಡುಕೊಂಡೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Hardik Pandya as captain : ಅಹಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕ

ಇದನ್ನೂ ಓದಿ : KL Rahul Lucknow, ಪಾಂಡ್ಯ ಅಹಮದಾಬಾದ್, IPL 2022ಯಲ್ಲಿ ಈ ತಂಡವನ್ನು ಮುನ್ನಡೆಸುತ್ತಾರೆ ಶ್ರೇಯಸ್ ಅಯ್ಯರ್

( Virat Kohli steps down as India’s Test captain)

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular