ಬೆಂಗಳೂರು: (Virat Kohli wishes) ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮಾ ಮಧ್ಯೆ ಇದ್ದ ಶೀತಲ ಸಮರವೆಲ್ಲಾ ಕರಗಿ ಈಗ ಇಬ್ಬರೂ ಒಂದಾಗಿದ್ದಾರೆ. ಭಾರತಕ್ಕೆ ಟಿ20 ವಿಶ್ವಕಪ್ (T20 World Cup 2022) ಗೆಲ್ಲಿಸುವ ಶಪಥ ಮಾಡಿ ಆಸ್ಟ್ರೇಲಿಯಾಗೆ ಕಾಲಿಟ್ಟಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಎಲ್ಲವೂ ಸರಿಯಿರಲಿಲ್ಲ. ಕೊಹ್ಲಿ ನಾಯಕರಾಗಿದ್ದಾಗ ಕ್ಯಾಪ್ಟನ್ ಪಟ್ಟದ ಮೇಲೆ ರೋಹಿತ್ (Rohit Sharma) ಕಣ್ಣುಹಾಕಿದ್ದು, ಇಬ್ಬರು ಆಟಗಾರರ ಮಧ್ಯೆ ವೈಮನಸ್ಸಿಗೆ ಕಾರಣವಾಗಿತ್ತು. 2020ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಇದು ಬಹಿರಂಗವಾಗಿ ಸ್ಫೋಟಗೊಂಡಿತ್ತು. ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ಹೇಳುವ ಮೂಲಕ ತಮ್ಮ ನಡುವೆ ವೈಮನಸ್ಸಿರುವುದು ನಿಜ ಎಂಬುದನ್ನು ವಿರಾಟ್ ಕೊಹ್ಲಿ ಪರೋಕ್ಷವಾಗಿ ಒಪ್ಪಿಕೊಂಡಿದ್ದರು.
ಆದರೆ ಇಬ್ಬರ ಮಧ್ಯೆ ಇದೀಗ ಯಾವ ಮನಸ್ತಾಪವೂ ಇಲ್ಲ, ಇಬ್ಬರೂ ವೈಮನಸ್ಸು ಮರೆತು ಒಂದಾಗಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್’ದೇ ಸಹೋದರನಿಗೆ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯವನ್ನೂ ಹೇಳಿದ್ದಾರೆ. ರೋಹಿತ್ ಪತ್ನಿ ರಿತಿಕಾ ಸಜ್’ದೇ ಅವರ ಸಹೋದರನ ಹೆಸರು ಬಂಟಿ ಸಜ್’ದೇ. ಇವರು ಕಾರ್ನರ್ ಸ್ಟೋನ್ ಎಂಬ ಕ್ರಿಕೆಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ರೋಹಿತ್ ಶರ್ಮಾ ಪತ್ನಿಯ ಸಹೋದರನ ಸಂಸ್ಥೆ ಕಾರ್ನರ್ ಸ್ಟೋನ್ ಜೊತೆ ಒಪ್ಪಂದ ಹೊಂದಿದ್ದಾರೆ. ಕೊಹ್ಲಿ ಅವರಿಗೆ ಸಂಬಂಧಿಸಿದ ಕ್ರಿಕೆಟ್ ಹೊರತಾದ ಚಟುವಟಿಕೆಗಳು, ಬ್ರ್ಯಾಂಡ್, ಜಾಹೀರಾತು, ಕರ್ಮಷಿಯಲ್, ಪ್ರಮೋಷನ್ ಎಲ್ಲವನ್ನೂ ಕಾರ್ನರ್ ಸ್ಟೋನ್ ಸಂಸ್ಥೆ ನೋಡಿಕೊಳ್ಳುತ್ತಿದೆ.
Happy birthday Hulk. God bless you. 😎 @buntysajdeh pic.twitter.com/tQaDn9sVD8
— Virat Kohli (@imVkohli) October 6, 2022
ಕಾರ್ನರ್ ಸ್ಟೋನ್ ಸಂಸ್ಥೆಯೊಂದಿಗೆ ಭಾರತದ ಟಾಪ್ ಕ್ರಿಕೆಟಿಗರು ಕಾಂಟ್ರಾಕ್ಟ್ ಹೊಂದಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಹಾಲಿ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್ ರಾಹುಲ್ ಸಹಿತ ಭಾರತದ ಅಗ್ರಮಾನ್ಯ ಆಟಗಾರರೆಲ್ಲಾ ಕಾರ್ನರ್ ಸ್ಟೋನ್ ಸಂಸ್ಥೆ ಜೊತೆ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್’ದೇ ಕೂಡ ಕಾರ್ನರ್ ಸ್ಟೋನ್ ಸಂಸ್ಥೆಯ ಮ್ಯಾನೇಜ್ಮೆಂಟ್’ನಲ್ಲಿದ್ದರು. ಅಷ್ಟೇ ಅಲ್ಲ, ಕೆಲ ಕಾಲ ವಿರಾಟ್ ಕೊಹ್ಲಿ ಅವರಿಗೂ ಮ್ಯಾನೇಜರ್ ಆಗಿದ್ದರು.
ಇದನ್ನೂ ಓದಿ : Pro Kabaddi 2022 : ಇಂದಿನಿಂದ ಪ್ರೊ ಕಬಡ್ಡಿಆರಂಭ : ಯಾವ ಆಟಗಾರರು ಯಾವ ತಂಡದಲ್ಲಿದ್ದಾರೆ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Virat Kohli wishes Rohit Sharma wife Ritika Sajdeh brother Kunal Sajdeh birthday