ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (Womens Premier League) ಟೂರ್ನಿಯಲ್ಲಿ ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿ ಕನ್ನಡಿಗ ಆರ್.ಎಕ್ಸ್ ಮುರಳಿ (RX Murali batting coach) ನೇಮಕಗೊಂಡಿದ್ದಾರೆ. ಭಾರತ ತಂಡದ ಟೆಸ್ಟ್ ಓಪನರ್ ಮಯಾಂಕ್ ಅಗರ್ವಾಲ್ ಅವರ ಬ್ಯಾಟಿಂಗ್ ಕೋಚ್ ಆಗಿರುವ ಆರ್.ಎಕ್ಸ್ ಮುರಳಿ ಬ್ಯಾಟಿಂಗ್ ಕೌಶಲ್ಯಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. 2021ರ ಐಪಿಎಲ್ ಟೂರ್ನಿಗೂ ಮುನ್ನ RCB ಸ್ಟಾರ್ ದಿನೇಶ್ ಕಾರ್ತಿಕ್ ಮುರಳಿ ಅವರ ಬಳಿಯೇ ಬಿಗ್ ಹಿಟ್ಟಿಂಗ್ ಅಭ್ಯಾಸ ನಡೆಸಿದ್ದರು. ನಂತರ RCB ಪರ ಅಬ್ಬರಿಸಿದ್ದ ಡಿಕೆ, ಟೀಮ್ ಇಂಡಿಯಾಗೂ ಕಂಬ್ಯಾಕ್ ಮಾಡಿದ್ದರು.
ದೇಶೀಯ ಕ್ರಿಕೆಟ್’ನಲ್ಲಿ ಉತ್ತಮ ರೆಪ್ಯುಟೇಷನ್ ಹೊಂದಿರುವ ಆರ್.ಎಕ್ಸ್ ಮುರಳಿಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಣೆ ಹಾಕಿದ್ದು, ತನ್ನ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಜವಾಬ್ದಾರಿ ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಆಗಿ ನ್ಯೂಜಿಲೆಂಡ್ ಮಹಿಳಾ ತಂಡದ ಕೋಚ್ ಬೆನ್ ಸಾಯರ್ ಅವರನ್ನು ನೇಮಕ ಮಾಡಲಾಗಿದೆ. ಬೆನ್ ಸಾಯರ್ 2015ರಿಂದ 2021ರವರೆಗೆ ಸಿಡ್ನಿ ಸಿಕ್ಸರ್ಸ್ ತಂಡದ ಕೋಚ್ ಆಗಿದ್ದರು.
RX Murali batting coach : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹಾಯಕ ಸಿಬ್ಬಂದಿ :
ಹೆಡ್ ಕೋಚ್: ಬೆನ್ ಸಾಯರ್
ಸಹಾಯಕ ಕೋಚ್ & ಹೆಡ್ ಸ್ಕೌಟರ್: ಮಲೋಲನ್ ರಂಗರಾಜನ್
ಸ್ಕೌಟ್ & ಫೀಲ್ಡಿಂಗ್ ಕೋಚ್: ವನಿತಾ ವಿ.ಆರ್
ಬ್ಯಾಟಿಂಗ್ ಕೋಚ್: ಆರ್.ಎಕ್ಸ್ ಮುರಳಿ
ಟೀಮ್ ಮ್ಯಾನೇಜರ್ & ಟೀಮ್ ಡಾಕ್ಟರ್: ಡಾ.ಹರಿಣಿ
ಹೆಡ್ ಅಥ್ಲೆಟಿಕ್ ಥೆರಪಿಸ್ಟ್: ನವನೀತಾ ಗೌತಮ್
ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಪ್ಯುಝೆಫಾ ತಲಿಬ್
ಹೆಡ್ ಫಿಸಿಯೊ: ಸವ್ಯಸಾಚಿ ಸಾಹೂ
ಇದನ್ನೂ ಓದಿ : Sania Mirza : RCB ಮೆಂಟರ್ ಆಗಿ ಸಾನಿಯಾ ಮಿರ್ಜಾ ನೇಮಕ
ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League) ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ:
ಸ್ಮೃತಿ ಮಂಧನ, ಎಲೀಸ್ ಪೆರಿ, ಸೋಫಿ ಡಿವೈನ್, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸಟ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನ್ನಿಕಾ ಅಹುಜಾ, ಆಶಾ ಶೋಭನಾ, ಹೆದರ್ ನೈಟ್, ಡೇನ್ ವಾನ್ ನೀಕರ್ಕ್, ಪ್ರೀತಿ ಬೋಸ್, ಪೂನಮ್ ಖೆಮ್ನರ್, ಕೋಮಲ್ ಜನ್ಜಾದ್, ಮೆಗಾನ್ ಶುಟ್, ಸಹನಾ ಪವಾರ್.
ಇದನ್ನೂ ಓದಿ : CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಫೆ. 18ರಿಂದ ಆರಂಭ : ಹೊಸ ಮಾದರಿಯಲ್ಲಿ ಪಂದ್ಯಾವಳಿ
Womens Premier League : Kannadiga RX Murali batting coach for Royal Challengers Bangalore women’s team