Lathi charge by police: ಬಜರಂಗದಳ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್‌: 12 ಮಂದಿಗೆ ಗಾಯ

ಬಿಹಾರ: (Lathi charge by police) ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದು, ಘಟನೆಯಲ್ಲಿ ಹನ್ನೆರಡು ಮಂದಿ ಗಾಯಗೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ನಳಂದ ಅಂಬರ್‌ ಚೌಕ್‌ ಬಳಿಯ ಹನುಮಾನ್‌ ದೇವಸ್ಥಾನದಲ್ಲಿ ಭಜರಂಗಬಲಿಯ ಆರತಿಯನ್ನು ನಡೆಸಲಾಗಿದ್ದು, ಈ ವೇಳೆ ಬಿಹಾರ ಪೊಲೀಸರು ಬಜರಂಗದಳ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್‌ ಮಾಡಿದ್ದಾರೆ.

ಪ್ರತಿ ಮಂಗಳವಾರ ಆಂಜನೇಯನಿಗೆ ಆರತಿ ಬೆಳಗಲಾಗುತ್ತದೆ. ಈ ವೇಳೆ ಗದ್ದಲ ಉಂಟಾಗಿದ್ದು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಬಜರಂಗದಳ ಕಾರ್ಯಕರ್ತರು ಪೊಲೀಸರು ಜೊತೆ ವಾಗ್ವಾದಕ್ಕಿಳಿದಿದ್ದು, ವಾದ ವಿವಾದಗಳು ತಾರಕಕ್ಕೇರಿದೆ. ಇದರಿಂದ ಕೋಪಗೊಂಡ ಬಜರಂಗದಳ ಕಾರ್ಯಕರ್ತರಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು. ಇದೇ ಸಮಯದಲ್ಲಿ ಅಂಬರ್‌ ಚೌಕ್‌ ಬಳಿ ಬಜರಂಗದಳದ ಕಾರ್ಯಕರ್ತರು ಬಂದು ಆಡಳಿತದ ವಿರುದ್ದ ಘೋಷಣೆ ಕೂಗಿದರು. ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಠಿ ಮಾಡಿದ್ದರು.

ಈ ಘಟನೆಯು ಆ ಪ್ರದೇಶದಲ್ಲಿ ಭಯವನ್ನು ಉಂಟುಮಾಡಿದ್ದು, ಬಜರಂಗದಳದ ಕಾರ್ಯಕರ್ತರಿಂದ ಗೊಂದಲವುಂಟಾದ ಕಾರಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಪ್ರದೇಶದಲ್ಲಿ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ. ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ ಡಿ ಎಂ ಅಭಿಷೇಕ್‌ ಪಲಾಸಿಯಾ ತಿಳಿಸಿದ್ದಾರೆ.

ಇದನ್ನೂ ಓದಿ : Mumbai crime news: ಪ್ರೇಯಸಿಯನ್ನು ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಶವವನ್ನು ಬಚ್ಚಿಟ್ಟು ಪರಾರಿ

ಇದನ್ನೂ ಓದಿ : Attack on Ram Mandir: ಕೆನಡಾದ ರಾಮಮಂದಿರದ ಮೇಲೆ ದಾಳಿ ನಡೆಸಿದ ಖಲಿಸ್ತಾನ್‌ ಗುಂಪು

ಇದನ್ನೂ ಓದಿ : Koteshwara serial accident: ಕೋಟೇಶ್ವರ: ಬೀಜಾಡಿ ಕ್ರಾಸ್‌ ಬಳಿ ಸರಣಿ ಅಪಘಾತ: ಇಬ್ಬರಿಗೆ ಗಾಯ

Lathi charge by police on Bajrang Dal workers: 12 injured

Comments are closed.