ಬೆಂಗಳೂರು: ಕನ್ನಡದ ಹೆಮ್ಮೆಯ ನಟ ಕಿಚ್ಚ ಸುದೀಪ್ ಅವರಿಗೆ 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ವಿಶೇಷ ಉಡುಗೊರೆಯೊಂದನ್ನು (Kapil Dev Gift Sudeep)ನೀಡಿದ್ದಾರೆ. ದಿಗ್ಗಜ ಕಪಿಲ್ ದೇವ್ ನೀಡಿದ ಉಡುಗೊರೆಯನ್ನು ನೋಡಿ ಸುದೀಪ್ ಸಂಭ್ರಮಕ್ಕೆ ಪಾರವೇ ಇಲ್ಲ. ಆ ಸಂತಸವನ್ನು ಕಿಚ್ಚ ಸುದೀಪ್ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ.
ಅಂದ ಹಾಗೆ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಕೊಟ್ಟಿರುವ ಉಡುಗೊರೆ ಏನ್ ಗೊತ್ತಾ.? 1983ರ ವಿಶ್ವಕಪ್ ವಿಜೇತ ಭಾರತ ತಂಡದ ಎಲ್ಲಾ ಆಟಗಾರರ ಹಸ್ತಾಕ್ಷರಗಳನ್ನೊಳಗೊಂಡ ಬ್ಯಾಟ್.
1983ರ ವಿಶ್ವಕಪ್ ವಿಕ್ರಮದ ಕುರಿತಾದ ‘83’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಆ ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ವಿತರಣೆ ಮಾಡಿದ್ದರು. ಆ ಸಂದರ್ಭದಲ್ಲಿ ನಡೆಗೃದ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮದಲ್ಲಿ ಕಪಿಲ್ ದೇವ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು.
ಕಪಿಲ್ ದೇವ್ ತಂಡದ ವಿಶ್ವಕಪ್ ವಿಕ್ರಮಕ್ಕೆ ಶನಿವಾರ 39 ವರ್ಷ ತುಂಬಿತ್ತು. 1983ರ ಜೂನ್ 25ರಂದು ಕ್ರಿಕೆಟ್ ಕಾಶಿ ಇಂಗ್ಲೆಂಡ್’ನ ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು 43 ರನ್’ಗಳಿಂದ ಸೋಲಿಸಿ ಮೊದಲ ಬಾರಿ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು.
ಹೆಚ್ಚಿನ ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : Murali Vijay : ಡಿಕೆ ಕಂಬ್ಯಾಕ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದ ಮುರಳಿ ವಿಜಯ್ ಮಾಡಿದ್ದೇನು ಗೊತ್ತಾ?
ಇದನ್ನೂ ಓದಿ : King Is Back : ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ
ಇದನ್ನೂ ಓದಿ : IND vs IRE : ಇಂದು ಐರ್ಲೆಂಡ್ ವಿರುದ್ದ ಮೊದಲ ಟಿ20 ಪಂದ್ಯ : ಹೇಗಿದೆ India Playing XI
ಇದನ್ನೂ ಓದಿ : Rohit Sharma Tests Covid Positive : ಟೀಂ ಇಂಡಿಯಾಕ್ಕೆ ಆಘಾತ, ರೋಹಿತ್ ಶರ್ಮಾ ಗೆ ಕೋವಿಡ್ ಪಾಸಿಟಿವ್
World Cup Winner Kapil Dev Gift Sudeep Clean Bowled