ಬೆಂಗಳೂರು: ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ (World test championship 2021-23) 3ನೇ ಸ್ಥಾನಕ್ಕೆ ಜಿಗಿದಿದೆ.
ಬಾಂಗ್ಲಾದೇಶದ ಛಟ್ಟೋಗ್ರಾಮ್’ನಲ್ಲಿರುವ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಭಾರತ, ಆತಿಥೇಯ ಬಾಂಗ್ಲಾದೇಶ ತಂಡವನ್ನು 188 ರನ್’ಗಳಿಂದ ಭರ್ಜರಿಯಾಗಿ ಬಗ್ಗು ಬಡಿದು 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ 2ನೇ ಟೆಸ್ಟ್ ಪಂದ್ಯ ಗುರುವಾರ (ಡಿಸೆಂಬರ್ 22) ಮೀರ್’ಪುರ್’ನ ಶೇ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಬಾಂಗ್ಲಾದೇಶ ವಿರುದ್ಥದ ಟೆಸ್ಟ್ ಗೆಲುವಿನೊಂದಿಗೆ 2021-23ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತ 87 ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಿದೆ. ಈ ಸಾಲಿನ ವರ್ಲ್ಡ್ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತ ತಂಡ 13 ಟೆಸ್ಟ್ ಪಂದ್ಯಗಳನ್ನಾಡಿದ್ದು, 7 ಗೆಲುವು, 4 ಸೋಲು ಹಾಗೂ ಎರಡು ಡ್ರಾಗಳೊಂದಿಗೆ ಒಟ್ಟು 87 ಅಂಕಗಳನ್ನು ಕಲೆ ಹಾಕಿದೆ.
ಆಸ್ಟ್ರೇಲಿಯಾ ತಂಡ 12 ಪಂದ್ಯಗಳಿಂದ 8 ಗೆಲುವು, ಒಂದು ಸೋಲು ಹಾಗೂ 3 ಡ್ರಾಗಳೊಂದಿಗೆ 108 ಅಂಕ ಗಳಿಸಿ ಅಗ್ರಸ್ಥಾನದಲ್ಲಿದೆ. 72 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ 2ನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ ಭಾರತಕ್ಕಿಂತ ಕಡಿಮೆ ಅಂಕ ಗಳಿಸಿದ್ರೂ ಸರಾಸರಿ ಪಾಯಿಂಟ್ ಲೆಕ್ಕಾಚಾರದಲ್ಲಿ ಭಾರತಕ್ಕಿಣತ ಮುಂದಿದೆ. ಭಾರತ 55.77% ಪಾಯಿಂಟ್ಸ್ ಗಳಿಸಿದ್ರೆ ದಕ್ಷಿಣ ಆಫ್ರಿಕಾ 60% ಪಾಯಿಂಟ್ಸ್ ಗಳಿಸಿದೆ.
🙌🇮🇳 MAKING MOVES! India climbs upto the 3rd spot on the WTC table✅#WTC #INDvBAN #BANvIND #TeamIndia #BharatArmy pic.twitter.com/pQ8Zuhz2qp
— The Bharat Army (@thebharatarmy) December 18, 2022
ಇದನ್ನೂ ಓದಿ : Suresh Raina played Gully cricket : ಹುಟ್ಟೂರಲ್ಲಿ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಸುರೇಶ್ ರೈನಾ
ಇದನ್ನೂ ಓದಿ : India Vs Bangladesh test series : ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್ ಜಯ, ರಾಹುಲ್ ಟೆಸ್ಟ್ ನಾಯಕತ್ವಕ್ಕೆ ಮೊದಲ ಗೆಲುವು
ಇದನ್ನೂ ಓದಿ : India vs Bangladesh test : ಭಾರತದ ಗೆಲುವಿಗೆ 4 ವಿಕೆಟ್ ಬಾಕಿ, ಬಾಂಗ್ಲಾ ಗೆಲುವಿಗೆ ಬೇಕು 241 ರನ್
ಟೆಸ್ಟ್ ಚಾಂಪಿಯನ್’ಷಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ. ಭಾರತ ಇನ್ನು 4 ಟೆಸ್ಟ್ ಪಂದ್ಯಗಳನ್ನು ಗೆದ್ದರೆ ಫೈನಲ್’ಗೆ ಲಗ್ಗೆಯಿಡಲಿದೆ. 2019-21ನೇ ಸಾಲಿನ ವರ್ಲ್ಡ್ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
World Test Championship: India jumped to the 3rd position, need 4 wins to reach the final