ಸೋಮವಾರ, ಏಪ್ರಿಲ್ 28, 2025
HomeSportsCristiano Ronaldo: ಕ್ರಿಸ್ಟಿಯಾನೋ ರೊನಾಲ್ಡೋ ನವಜಾತ ಗಂಡು ಮಗು ನಿಧನ

Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೋ ನವಜಾತ ಗಂಡು ಮಗು ನಿಧನ

- Advertisement -

Cristiano Ronaldo: ಫುಟ್​ಬಾಲ್​ ಲೋಕದ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಕಳೆದ ವರ್ಷ ಅಕ್ಟೋಬರ್​ ತಿಂಗಳಿನಲ್ಲಿ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ನೀಡಿದ್ದರು. ತಮ್ಮ ಗೆಳತಿ ಜಾರ್ಜಿಯಾ ರೋಡ್ರಿಗಸ್​ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಈಗಾಗಲೇ ನಾಲ್ಕು ಮಕ್ಕಳನ್ನು ಹೊಂದಿದ್ದ ಕ್ರಿಸ್ಟಿಯಾನೋ ತಮ್ಮ ಕುಟುಂಬಕ್ಕೆ ಇನ್ನಿಬ್ಬರ ಆಗಮನವಾಗುತ್ತಿದೆ ಎಂದು ಹೇಳಿದ್ದರು.
ಆದರೆ ಇದೀಗ ಕ್ರಿಸ್ಟಿಯಾನೋ ದುಃಖಕರ ವಿಚಾರವೊಂದನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಗೆಳತಿ ಜಾರ್ಜಿಯಾ ರೋಡ್ರಿಗಸ್​​ಗೆ ಹೆರಿಗೆಯಾಗಿದ್ದು ಅವಳಿ ಮಕ್ಕಳಲ್ಲಿ ಗಂಡು ಮಗು ಸಾವನ್ನಪ್ಪಿದ್ದು ಹೆಣ್ಣು ಮಗು ಮಾತ್ರ ಬದುಕುಳಿದಿದೆ ಎಂಬ ಮಾಹಿತಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಗತ್ತಿನ ಯಾವ ಪೋಷಕರಿಗೂ ಎದುರಿಸಲು ಸಾಧ್ಯವಾಗದ ಅತಿ ದೊಡ್ಡ ನೋವಿದು ಎಂದು ಕ್ರಿಸ್ಟಿಯಾನೋ ಬರೆದುಕೊಂಡಿದ್ದಾರೆ.


ನಮ್ಮ ಗಂಡು ಮಗು ತೀರಿಕೊಂಡಿದೆ ಎಂಬ ಅತ್ಯಂತ ದುಃಖಕರ ವಿಚಾರವನ್ನು ನಾವು ಹಂಚಿಕೊಳ್ಳಬೇಕಾಗಿದೆ. ಯಾವುದೇ ಪೋಷಕರು ಅನುಭವಿಸಬಹುದಾದ ಅತ್ಯಂತ ದೊಡ್ಡ ನೋವು ಇದಾಗಿದೆ. ಹೆಣ್ಣು ಮಗು ಜನಿಸಿದ ಎಂಬ ವಿಚಾರವೊಂದೇ ನಮಗೆ ಈ ಕ್ಷಣದಲ್ಲಿಯೂ ಬದುಕಬೇಕೆಂಬ ಶಕ್ತಿ, ಭರವಸೆ ಹಾಗೂ ಸಂತೋಷವನ್ನು ನೀಡುತ್ತಿದೆ. ವೈದ್ಯರು ಹಾಗೂ ದಾದಿಯರು ನೀಡಿದ ಎಲ್ಲಾ ರೀತಿಯ ತಜ್ಞ ಆರೈಕೆ ಹಾಗೂ ಬೆಂಬಲಕ್ಕಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ. ಈ ನಷ್ಟದಿಂದ ನಾವು ಕುಗ್ಗಿದ್ದೇವೆ ಹೀಗಾಗಿ ಈ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಗೌಪ್ಯತೆಗೆ ಬೆಲೆ ನೀಡುವಂತೆ ಕೇಳಿಕೊಳ್ಳುತ್ತೇವೆ. ನಮ್ಮ ಗಂಡು ಮಗುವೇ, ನೀನು ನಮ್ಮ ಪಾಲಿನ ದೇವತೆ. ನಿನ್ನನ್ನು ನಾವು ಎಂದಿಗೂ ಪ್ರೀತಿಸುತ್ತೇವೆ ಎಂದು ಸೋಶಿಯಲ್​ ಮೀಡಿಯಾಗಳಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಪೋಸ್ಟ್​ ಮಾಡಿದ್ದಾರೆ.

ಇದನ್ನು ಓದಿ : Ghebreyesus On 3-day Visit To Gujarat : ಮೂರು ದಿನಗಳ ಗುಜರಾತ್​ ಪ್ರವಾಸದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

Cristiano Ronaldo’s Newborn Boy Dies, Says “We Will Always Love You”

RELATED ARTICLES

Most Popular