Naga Chaitanya: ಸಮಂತಾ ನಂತರ ನಾಗಚೈತನ್ಯ ರೆಡಿಯಾದರು ಎರಡನೇ ಮದುವೆಗೆ ? ಇದು 4ನೇ ಹುಡುಗಿ ಸಹವಾಸ!

ತೆಲುಗಿನ ನಟ ನಾಗಚೈತನ್ಯ (Naga Chaitanya) ಮತ್ತು ಸಮಂತಾ ಅವರ ವಿಚ್ಚೇದನ ಪ್ರಕರಣ ಕಳೆದ ವರ್ಷ ಇಡೀ ಸಿನಿಮಾ ಉದ್ಯಮವನ್ನು ನಡುಗಿಸಿತು. ಗಂಡ-ಹೆಂಡತಿ ಅಂದರೆ ಹೀಗಿರಬೇಕು ಅಂತ ಎಲ್ಲರೂ ಮಾದರಿಯಾಗಿ ತೆಗೆದುಕೊಳ್ಳುತ್ತಿದ್ದ ಈ ದಂಪತಿ ಇದ್ದಕ್ಕಿದ್ದಂತೆ ದೂರವಾಗಿದ್ದು ಏಕೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗೇ ಉಳಿಯಿತು. ಈ ಬಗ್ಗೆ ಅಕ್ಕಿನೇನಿ ಕುಟುಂಬವಾಗಲಿ, ಸಮಂತ ಅವರಾಗಲಿ ಯಾವುದೇ ಸಮಜಾಯಿಷಿ ಕೂಡ ನೀಡಲಿಲ್ಲ. ‘ನಾವಿಬ್ಬರೂ ಬೇರೆ ಆಗಿದ್ದರೂ ಸ್ನೇಹಿತರು’ ಎಂದು ಘೋಷಿಸಿದರು.

ಈ ಮಧ್ಯೆ ಸಮಂತಾ, ‘ನಮ್ಮಿಬ್ಬರ ರೋಮ್ಯಾನ್ಸ್ ಗೆ ದಿಂಬು ಅಡ್ಡ ಬರುತ್ತಿತ್ತು’ ಅಂತೆಲ್ಲ ಹೇಳಿಕೆ ನೀಡಿದ್ದು ಗಮನಿಸಿದರೆ ಇವರಿಬ್ಬರ ನಡುವೆ ಸೀರಿಯಸ್ಸಾಗಿ ಏನೂ ನಡೆದಿಲ್ಲ. ಕ್ಷುಲ್ಲಕ ಕಾರಣಕ್ಕೆ ದೂರವಾಗಿರಬಹುದು. ಮತ್ತೆ ಒಂದಾಗಬಹುದು ಅಂತೆಲ್ಲ ಸಿನಿಮಾ ಮಂದಿ ಅಂದು ಕೊಂಡಿದ್ದರು. ಈಗ ಸಮಂತಾ ಮತ್ತು ನಾಗಚೈತನ್ಯ ಸಂಬಂಧ ಮತ್ತೆ ಒಂದಾಗುವ ಯಾವ ಅವಕಾಶವೂ ಇಲ್ಲ. ಏಕೆಂದರೆ, ನಾಗಚೈತನ್ಯ ಸಮಂತಾರನ್ನು ಮರೆತು ಎರಡನೇ ಮದುವೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ನಿಂದ ಹೊರಬಿದ್ದಿದೆ.

ಹೌದು, ನಾಗಚೈತನ್ಯ ಈ ಬಾರಿ ಸಿನಿಮಾ ನಟಿಯೇ ಬೇಡ ಎಂದು ಸಿನಿಮೇತರ ಹುಡುಗಿಯನ್ನು ಹುಡುಕಿಕೊಂಡಿದ್ದಾರಂತೆ. ಆಕೆ ಯಾರು ಏನು ಎನ್ನುವುದು ಇನ್ನೂ ಬಹಿರಂಗಗೊಳಿಸಿಲ್ಲ. ಈಗಾಗಲೇ ಮದುವೆಯ ವಿಚಾರವಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನುತ್ತಿದೆ ಟಾಲಿವುಡ್ ಮೂಲಗಳು.

ಇದನ್ನೂ ಓದಿ : RRR Film: ಚೀನಾ, ಜಪಾನ್ ನಲ್ಲೂ ಆರ್ ಆರ್ ಆರ್ ಮೇನಿಯಾ! ಈ ವರ್ಷದ ಕೊನೆಯಲ್ಲಿ ತೆರೆಕಾಣಲಿದೆ ಸಿನಿಮಾ

ನಾಗಚೈತನ್ಯ ಸಮಂತಾರನ್ನು ಮದುವೆಯಾಗುವ ಮೊದಲು ಶ್ರುತಿ ಹಾಸನ್ ಜೊತೆ ಲವ್ವಿಡವ್ವಿಯಾಡುತ್ತಿದ್ದರು. ಅವರನ್ನೇ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರಾದರೂ, ಕೊನೆಗೆ ಬ್ರೇಕಪ್ ಆಯಿತು. ಆ ನಂತರ ಸಮಂತಾರನ್ನು ಪ್ರೀತಿಸಿ ಮದುವೆಯಾದರು. ಆರಂಭದಲ್ಲಿ ಆಕೆ ಅಕ್ಕಿನೇನಿ ಕುಟುಂಬದ ಪ್ರೀತಿಯ ಸೊಸೆಯಾಗಿದ್ದರು. ಅದರಲ್ಲೂ ಮಾವ ನಾಗಾರ್ಜುನರ ನೆಚ್ಚಿನ ಸೊಸೆಯಾಗಿ ಎಲ್ಲರಿಂದಲೂ ಹಾಡಿಹೊಗಳಿಸಿಕೊಂಡಿದ್ದರು. ಎಲ್ಲವೂ ಸರಿಯಾಗಿದೆ ಅಂದುಕೊಳ್ಳುವ ಹೊತ್ತಿಗೆ ಇಬ್ಬರು ಬೇರೆ ಬೇರೆಯಾದರು.

ಇಂತಿಪ್ಪ, ನಾಗಚೈತನ್ಯ ಮದುವೆ ಸುದ್ದಿಯನ್ನು ಅಕ್ಕಿನೇನಿ ಕುಟುಂಬದವರು ಖಚಿತಪಡಿಸಿಲ್ಲ.ಆದರೆ, ನಾಗಚೈತನ್ಯರನ್ನು ದಿಬ್ಬಣಕ್ಕೆ ಏರಿಸಲು ಮನೆಯವರು ಸರ್ವಸಿದ್ಧತೆಯಲ್ಲಿದ್ದಾರೆ ಅನ್ನೋ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಇತ್ತ ಎರಡನೆ ಮದುವೆ ಮಾತಾದರೆ, ಅತ್ತ ನಾಗಚೈತನ್ಯ ನಟಿ ದಿವ್ಯಾಂಶ ಕೌಸಿಕ್ ಜೊತೆ ಗುಪ್ತ ಸಂಬಂಧ ಹೊಂದಿದ್ದಾರೆ ಎನ್ನುವ ಮಾತೂ ಇದೆ. ಆದರೆ, ಯಾವ ಕಾರಣಕ್ಕೂ ದಿವ್ಯಾಂಶಳನ್ನು ಮದುವೆಯಾಗುವ ಆಸಕ್ತಿ ನಾಗಚೈನ್ಯರಿಗಿಲ್ಲ. ಅವರ ಕುಟುಂಬವರ್ಗದವರೂ ಒಪ್ಪಿಕೊಳ್ಳುವುದಿಲ್ಲ ಎನ್ನುವ ಸುದ್ದಿಯೂ ಓಡಾಡುತ್ತಿದೆ.

ಹಾಗೆ ನೋಡಿದರೆ, ನಟ ನಾಗಚೈತನ್ಯ ಈಗ ಮದುವೆಯಾದರೆ ಈಕೆ ನಾಲ್ಕನೇ ಹುಡುಗಿಯ ಸಹವಾಸವಾಗುತ್ತದೆ. ಇದರಲ್ಲಿ ಮೊದಲು-ನಾಲ್ಕನೆಯದು ಅಧಿಕೃತ ಮತ್ತು ಮತ್ತೆರಡು ಅನಧಿಕೃತ.

ಇದನ್ನೂ ಓದಿ : Puneeth: ಮತ್ತೆ ಅಪ್ಪು ಬಂದ್ರು ಅಪ್ಪು: ಜೇಮ್ಸ್ ಏಪ್ರಿಲ್ 22 ರಿಂದ ಥಿಯೇಟರಿಗೆ! ಕಾರಣ ಏನು ಗೊತ್ತಾ?

(Naga Chaitanya Telugu actor is planning for second marriage)

Comments are closed.