ಭಾನುವಾರ, ಏಪ್ರಿಲ್ 27, 2025
HomeSportsCricketCSK : IPL 2022 ಮುನ್ನ ಚೆನ್ನೈಗೆ ಬಿಗ್‌ ಶಾಕ್;‌ ಇಬ್ಬರು ಪ್ರಮುಖ ಆಟಗಾರರಿಗೆ ಗಾಯ

CSK : IPL 2022 ಮುನ್ನ ಚೆನ್ನೈಗೆ ಬಿಗ್‌ ಶಾಕ್;‌ ಇಬ್ಬರು ಪ್ರಮುಖ ಆಟಗಾರರಿಗೆ ಗಾಯ

- Advertisement -

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (CSK ) ತಂಡ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಕಣಕ್ಕೆ ಇಳಿಯಲು ಸಜ್ಜಾಗುತ್ತಿದೆ. ಈಗಾಗಲೇ ಹಿರಿಯ ಹಾಗೂ ಕಿರಿಯ ಆಟಗಾರರನ್ನು ಹೊಂದಿರುವ ಚೆನ್ನೈ ತಂಡ ಬಲಿಷ್ಠ ತಂಡವಾಗಿ ಕಾಣಿಸುತ್ತಿದೆ. ಆದರೆ ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದ ಇಬ್ಬರು ಆಟಗಾರರು ಗಾಯಗೊಂಡಿರುವುದು ಚೆನ್ನೈ ತಂಡಕ್ಕೆ ಆತಂಕ ಮೂಡಿಸಿದೆ. ಅದ್ರಲ್ಲೂ ಆರಂಭಿಕ ರುತುರಾಜ್‌ ಗಾಯಕ್ವಾಡ್‌ ಹಾಗೂ ದೀಪಕ್‌ ಚಹರ್‌ ಗಾಯಗೊಂಡಿದ್ದು, ದೀಪಕ್‌ ಚಹರ್‌ ಐಪಿಎಲ್‌ನಿಂದಲೇ ಔಟ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

CSK 2 top players ruled out from current series before IPL 2022
ರುತುರಾಜ್‌ ಗಾಯಕ್ವಾಡ್‌image credit ; bcci/ipl

ನಿರಂತರ ಸರಣಿಯಿಂದಾಗಿ ಈಗಾಗಲೇ ಕೆ.ಎಲ್.ರಾಹುಲ್‌, ರುತುರಾಜ್‌ ಗಾಯಕ್ವಾಡ್‌, ಹಾರ್ದಿಕ್‌ ಪಾಂಡ್ಯ, ದೀಪಕ್‌ ಚಹರ್‌ ಹೀಗೆ ಸಾಕಷ್ಟು ಆಟಗಾರರು ಗಾಯಾಳುಗಳ ಪಟ್ಟಿ ಸೇರಿದ್ದಾರೆ. ಇನ್ನು ರೋಹಿತ್‌ ಶರ್ಮಾ ಗಾಯಗೊಂಡು ವಿಶ್ರಾಂತಿ ಪಡೆದ ನಂತರದಲ್ಲಿ ಮತ್ತೆ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಆದರೆ ಈ ನಡುವಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪ್ರಮುಖ ಆಟಗಾರ ದೀಪಕ್‌ ಚಹಾರ್‌ ಹಾಗೂ ರುತುರಾಜ್‌ ಗಾಯಕ್ವಾಡ್‌ ಗಾಯಗೊಂಡಿರುವುದು ಧೋನಿಗೆ ಚಿಂತೆ ಮೂಡಿಸಿದೆ.

 csk-2-top-players-ruled-out-ipl-2022
ದೀಪಕ್‌ ಚಹಾರ್‌image credit :bcci/ipl

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ T20 ಪಂದ್ಯದಲ್ಲಿ, ದೀಪಕ್ ಬಲಗಾಲಿನಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಆದರೆ ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದ ರುತುರಾಜ್‌ ಗಾಯಕ್ವಾಡ್‌ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಬಲಗೈ ಮಣಿಕಟ್ಟಿನ ನೋವಿಗೆ ತುತ್ತಾಗಿದ್ದರು. ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಪರೀಕ್ಷಿಸಿದ ಬಳಿಕ ಅವರಿಗೆ ವಿಶ್ರಾಂತಿಯನ್ನು ಸೂಚಿಸಿತ್ತು.

ಐಪಿಎಲ್‌ ಆರಂಭಕ್ಕೂ ಮುನ್ನವೇ ಈ ಆಟಗಾರರು ಗುಣಮುಖರಾಗುವ ವಿಶ್ವಾದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK )ತಂಡ ಇದೆ. ಆದರೆ ಇದುವರೆಗೂ ಇಬ್ಬರೂ ಫಿಟ್‌ ಆಗಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕೆಲವೇ ದಿನಗಳಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆವೃತ್ತಿ ಆರಂಭಗೊಳ್ಳಲಿದೆ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ (CSK) ಸನ್‌ರೈಸರ್ಸ್ ಹೈದರಾಬಾದ್ (SRH), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಪಂಜಾಬ್ ಕಿಂಗ್ಸ್ (PBKS) ಮತ್ತು ಗುಜರಾತ್ ಟೈಟಾನ್ಸ್‌ನೊಂದಿಗೆ B ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇಂಡಿಯಲ್‌ ಪ್ರೀಮಿಯರ್‌ ಗೆ ಚೆನ್ನೈ ಸೂಪರ್‌ ಕಿಂಗ್‌ (CSK) ತಂಡ ಹೀಗಿದೆ :

CSK ತಂಡ : ಎಂಎಸ್ ಧೋನಿ (ನಾಯಕ , ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಡೆವೊನ್ ಕಾನ್ವೆ, ಸುಭ್ರಾಂಶು ಸೇನಾಪತಿ, ಶ್ರೀಹರಿ ನಿಶಾಂತ್, ಎನ್. ಜಗದೀಶ್, ರವೀಂದ್ರ ಜಡೇಜಾ, ಮೊಯಿನ್ ಅಲಿ, ಡ್ವೇನ್ ಬ್ರಾವೊ, ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ರಾಜ್‌ವರ್ಧನ್ ಎಚ್‌ವೇ , ಭಗತ್ ವರ್ಮಾ, ಕ್ರಿಸ್ ಜೋರ್ಡಾನ್, ದೀಪಕ್ ಚಾಹರ್, ಆಡಮ್ ಮಿಲ್ನೆ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹಿಷ್ ಟೀಕಷ್ಣ, ಸಿಮಾರ್ಜಿತ್ ಸಿಂಗ್, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ.

ಇದನ್ನೂ ಓದಿ : Virat Kohli : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ

ಇದನ್ನೂ ಓದಿ : ಶ್ರೀಲಂಕಾ ವಿರುದ್ದ ಸರಣಿ ಗೆದ್ದ ಭಾರತ : T20 ಇತಿಹಾಸದಲ್ಲಿ ದಾಖಲೆ ಬರೆದ ರೋಹಿತ್‌ ಶರ್ಮಾ

( CSK 2 top players ruled out from current series before IPL 2022 )

RELATED ARTICLES

Most Popular