ಬರ್ಮಿಂಗ್ಹ್ಯಾಮ್ : CWG : ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022ನೇ ಸಾಲಿನ ಕಾಮನ್ವೆಲ್ತ್ ಗೇಮ್ಸ್ನಲ್ಲಿ ವಿವಿಧ ದೇಶಗಳ ಪದಕದ ಬೇಟೆ ಮುಂದುವರಿದಿದೆ. ಕಾಮನ್ವೆಲ್ತ್ ಗೇಮ್ಸ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಆಟಗಾರರ ಪೈಕಿ ಇಬ್ಬರು ಅಥ್ಲೀಟ್ಗಳು ಹಾಗೂ ಓರ್ವ ಸಿಬ್ಬಂದಿ ಕ್ರೀಡಾಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಈ ಬೆಳವಣಿಗೆ ಬೆಳಕಿಗೆ ಬಂದ ಬಳಿಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗಿಯಾಗಿರುವ ಆಟಗಾರರಿಗೆ ಪಾಸ್ಪೋರ್ಟ್ಗಳನ್ನು ಸಲ್ಲಿಸುವಂತೆ ಶ್ರೀಲಂಕಾದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಶ್ರೀಲಂಕಾ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಇದೀಗ ಜಗಜ್ಜಾಹಿರವಾಗಿದೆ. ಇಂತಹ ಕಠಿಣ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಶ್ರೀಲಂಕಾ 51 ಅಧಿಕಾರಿಗಳು ಸೇರಿದಂತೆ 161 ಮಂದಿ ಸದಸ್ಯರ ತಂಡವನ್ನು ಬರ್ಮಿಂಗ್ಹ್ಯಾಮ್ಗೆ ಕಳುಹಿಸಿಕೊಟ್ಟಿದೆ.
ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡವು ಅಥ್ಲೀಟ್ಗಳಿಗೆ ಈ ಸ್ಪರ್ಧೆಯಲ್ಲಿ ಭಾಗಿಯಾಗಲು ಧನಸಹಾಯವನ್ನು ಮಾಡಿದೆ. ಈ ಆಟಗಾರರ ಪೈಕಿ ಓರ್ವ ಜುಡೋ ಪಟು, ಓರ್ವ ಕುಸ್ತಿಪಟು ಹಾಗೂ ಜುಡೋ ಮ್ಯಾನೇಜರ್ ನಾಪತ್ತೆಯಾಗಿದ್ದಾರೆ ಎಂದು ಶ್ರೀಲಂಕಾ ತಂಡದ ಗೋಬಿನಾಥ್ ಶಿವರಾಜ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.
ಈ ಘಟನೆಯ ಬಳಿಕ ಕ್ರೀಡಾ ಗ್ರಾಮದಲ್ಲಿರುವ ಎಲ್ಲಾ ನಮ್ಮ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳಿಗೆ ಪಾಸ್ಪೋರ್ಟ್ಗಳನ್ನು ಸಲ್ಲಿಸುವಂತೆ ಕೇಳಿದ್ದೇವೆ. ನಾಪತ್ತೆಯಾದ ಕ್ರೀಡಾಪಟುಗಳು ಹಾಗೂ ಅಧಿಕಾರಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮೂವರು ಬ್ರಿಟನ್ನಿಂದ ದಾಟಿ ಹೋಗಲು ಸಾಧ್ಯವಿಲ್ಲ. ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ದುರದೃಷ್ಟಕರ ಎಂದು ಸಿವಾರ್ಜಾ ಹೇಳಿದ್ದಾರೆ.
ಶ್ರೀಲಂಕಾದ ಜುಡೋ ತಂಡವು ಮೂವರು ಪುರುಷ ಹಾಗೂ ಇಬ್ಬರು ಮಹಿಳಾ ಆಟಗಾರರನ್ನು ಹೊಂದಿದೆ. ವರದಿಗಳ ಪ್ರಕಾರ ಕಾಣೆಯಾದ ಕ್ರೀಡಾಪಟು ಮಹಿಳೆ ಎಂದು ತಿಳಿದು ಬಂದಿದೆ. ಜುಡೋ ಪಂದ್ಯವು ಬರ್ಮಿಂಗ್ಹ್ಯಾಮ್ನಿಂದ 30 ಗಂಟೆ ಪ್ರಯಾಣದ ದೂರದಲ್ಲಿರುವ ಕವಂಟ್ರಿ ಅರೇನಾದಲ್ಲಿ ಆಯೋಜನೆಗೊಂಡಿತ್ತು.
ಇದನ್ನು ಓದಿ : ಅನಂತ ಕುಮಾರ್ ಹೆಗಡೆ ಸಿಎಂ, ಯತ್ನಾಳ್ ಹೋಂ ಮಿನಿಸ್ಟರ್ : ಸದ್ದಿಲ್ಲದೇ ರೂಪುಗೊಳ್ತಿದೆ ಸ್ಟ್ರಾಂಗ್ ಜನಾಭಿಪ್ರಾಯ
CWG: Two Sri Lankan athletes, one official go missing; police investigating