ಐಪಿಎಲ್ ಪಂದ್ಯಾವಳಿಯಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ತೀರಾ ಹಿಂದುಳಿದಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಖ್ಯಾತ ಆಟಗಾರ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕಳೆಗಳಿಸಿದ ಬೆನ್ನಲ್ಲೇ ಮತ್ತೊಂದು ಶಾಕ್ ಕೊಟ್ಟಿದೆ.

ಸತತ ಸೋಲಿನಿಂದ ಕಂಗೆಟ್ಟಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊಸ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಂಸನ್ ಗೆ ನಾಯಕತ್ವದ ಹೊಣೆಯನ್ನು ನೀಡಿದೆ. ಎಸ್ ಆರ್ ಎಚ್ ತಂಡ ನಾಯಕನ ಪಟ್ಟದಿಂದ ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಿತ್ತು. ಇದೀಗ ಇಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಅವರನ್ನೇ ತಂಡದಿಂದಲೇ ಹೊರಗಿಟ್ಟು ಶಾಕ್ ಕೊಡ್ಟಿದೆ.

2016ರಲ್ಲಿ ಸನ್ ರೈಸಸ್ ಹೈದ್ರಾಬಾದ್ ತಂಡದ ನಾಯಕತ್ವ ವಹಿಸಿ ಕೊಂಡಿದ್ದ ವಾರ್ನರ್ 2015, 2016, 2017 ಮತ್ತು 2020 ಐಪಿಎಲ್ ಸೀಸನ್‍ಗಳಲ್ಲಿ ಅದ್ಬುತ ಫಾರ್ಮ್ ನಿಂದಾಗಿ ತಂಡವನ್ನು ಪ್ಲೇ ಆಪ್ ಹಂತಕ್ಕೆ ಏರಿಸಿದ್ದರು. ಅಷ್ಟೇ ಅಲ್ಲದೇ ವಾರ್ನರ್ ನಾಯಕತ್ವದಲ್ಲಿ 2016ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತ್ತು. ಐಪಿಎಲ್ ಸೀಸನ್ ನಲ್ಲಿ ಅತೀ ಹೆಚ್ಚು ರನ್ ಗಳಿಸುವ ಮೂಲಕ ಮೂರು ಬಾರಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಐಪಿಎಲ್ ನಲ್ಲಿ ವಾರ್ನರ್ 148 ಪಂದ್ಯಗಳ ಪೈಕಿ ಬರೋಬ್ಬರಿ 50 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಅನ್ನೋ ಖ್ಯಾತಿಗೂ ಪಾತ್ರರಾಗಿ ದ್ದಾರೆ.

ಇದೀಗ ಸನ್ ರೈಸಸ್ ತಂಡ ನಾಯಕತ್ವದ ಜೊತೆ ಜೊತೆಗೆ ಆಡುವ ಬಳಗದಿಂದಲೂ ವಾರ್ನರ್ ಅವರನ್ನು ಹೊರಗಿಟ್ಟಿರುವುದು ಕ್ರಿಕೆಟ್ ಪ್ರಿಯರಿಗೆ ಶಾಕ್ ಕೊಟ್ಟಿದೆ. ಅಲ್ಲದೇ ಅಭಿಮಾನಿಗಳು ಫ್ರಾಂಚೈಸಿ ವಿರುದ್ದ ಕಿಡಿಕಾರುತ್ತಿದ್ದಾರೆ.
