ಪ್ರಾದೇಶಿಕ ಪಕ್ಷಗಳೆದುರು ಮುಗ್ಗರಿಸಿದ ಬಿಜೆಪಿ, ಬಿಜೆಪಿ ಎದುರು ಎಡವಿದ ಕಾಂಗ್ರೆಸ್ : ಆಂತರಿಕ ಕಚ್ಚಾಟದಿಂದ ಬೆತ್ತಲಾದ ಕೈ ಪಡೆ

ನವದೆಹಲಿ: ಪ್ರಾದೇಶಿಕ ಪಕ್ಷಗಳೆದುರು ಬಿಜೆಪಿ ಆಟ ನಡೆಯುವುದಿಲ್ಲ ಅನ್ನುವುದನ್ನು ಪಂಚರಾಜ್ಯಗಳ ಚುನಾವಣೆ ತೋರಿಸಿಕೊಟ್ಟಿದೆ. ಮಮತಾ ಬ್ಯಾನರ್ಜಿ ಯು ಟಿಎಂಸಿ ವಿರುದ್ಧ ಎಷ್ಟೇ ಸೆಣಸಿದರು ವಿಜಯ ದಕ್ಕಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇನ್ನು ತಮಿಳು ನಾಡಿನಲ್ಲಿ ಡಿಎಂಕೆ ಎದುರು ಬಿಜೆಪಿ ಸೋಲು ಕಂಡಿದ್ರೆ, ಕೇರಳದಲ್ಲಿ ಕಮ್ಯುನಿಸ್ಟರ ಆಟವೇ ಮೇಲುಗೈ ಆಗಿದೆ.ಆದರೆ ಬಿಜೆಪಿ ಕಾಂಗ್ರೆಸ್ ಮುಂದೆ ತನ್ನ ಎಂದಿನ ಆಟ ಮುಂದುವರಿಸಿದೆ. ಪ್ರತಿ‌ ಬಾರಿಯೂ ಕಾಂಗ್ರೆಸ್ ವಿರುದ್ದ ಉತ್ತಮ ಸಾಧನೆಯನ್ನು ಬಿಜೆಪಿ ಸಾಧನೆಯನ್ನು ‌ಮುಂದುವರಿಸಿದೆ.

ರಾಜ್ಯ, ದೇಶದಲ್ಲಿ ಮುಗ್ಗರಿಸಿದ ಕಾಂಗ್ರೆಸ್ ಗೆ ಅನರ್ಹ ಪಕ್ಷದ ಪದಾಧಿಕಾರಿಗಳೆ ಹೊರೆ ಎಂಬ ಆರೋಪ ಮತ್ತೆ ಮತ್ತೆ ಸಾಬೀತಾಗು ತ್ತಿದೆ. ದೇಶಾದ್ಯಂತ ಪಂಚರಾಜ್ಯಗಳ ಚುನಾವಣೆ ಹಾಗೂ ಕರ್ನಾಟಕ ರಾಜ್ಯದ ಉಪಚುನಾವಣೆ ಯ ಫಲಿತಾಂಶ ಹೊರಬಿದ್ದಿದೆ. ದೇಶಾದ್ಯಂ ತ ಬಿಜೆಪಿಯ ಆಟ ಪ್ರಾದೇಶಿಕ ಪಕ್ಷಗಳ ಎದುರು ನಡಿಯಲು ಸಾಧ್ಯ ವಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಕಾಂಗ್ರೆಸ್ ಎದುರು ಬಿಜೆಪಿ ಮೇಲುಗೈ ಪಡೆಯುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ವೈಫಲ್ಯ ನಿರೀಕ್ಷಿತವಾಗಿಯೇ ಬಂದಿದೆ. ಕಾಂಗ್ರೆಸ್ ಒಳಗಡೆ ಇರುವ ಅನರ್ಹ ಪದಾಧಿಕಾರಿಗಳೇ ಇಂದು ಕಾಂಗ್ರೆಸ್ಸನ್ನು ಈ ಸ್ಥಿತಿಗೆ ದೂಡಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಕೇವಲ ಪರಿಚಯ ಹಾಗೂ ನಾಯಕರುಗಳ ಹಿಂಬಾಲಕರಿಗೆ ಪಟ್ಟ ಕಟ್ಟುವ ಚಾಳಿಯನ್ನು ಕಾಂಗ್ರೆಸ್ ಇನ್ನೂ ಬಿಟ್ಟಿಲ್ಲ. ಕಾಂಗ್ರೆಸ್ ನಲ್ಲಿ ಅರ್ಹರಿಗೆ ಸ್ಥಾನಮಾನಗಳು ಲಭಿಸುವುದು ತೀರ ಕಡಿಮೆ. ನಾಯಕರು ಗಳ ಹಿಂಬಾಲಕರು ಆದರೆ ಮಾತ್ರ ರಾಜಕೀಯ ಸ್ಥಾನಮಾನಗಳು ಹಾಗೂ ಪಕ್ಷದ ಪದಾಧಿಕಾರಿಗಳ ಹುದ್ದೆಗಳು ಲಭಿಸುತ್ತವೆ. ಇವರಿಂದ ಯಾವ ಚುನಾವಣೆ ಎದುರಿಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ ಪಕ್ಷದ ಹಿರಿಯ ನಾಯಕರೊಬ್ಬರು. ಅರ್ಹರನ್ನು ಹುಡುಕಿ ಪಕ್ಷದ ಸ್ಥಾನಮಾನ ವನ್ನು ಕಲ್ಪಿಸುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.

ಒಟ್ಟಿನಲ್ಲಿ ಬಿಜೆಪಿ ಎದುರು ಕಾಂಗ್ರೆಸ್ ಹೋರಾಟ ಮಾಡಲಾಗದೆ ಪ್ರತಿ ಚುನಾವಣೆಯನ್ನು ಕಳೆದುಕೊಳ್ಳುತ್ತಿದೆ. ಆದರೆ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಎದುರು ಮೇಲುಗೈ ಪಡೆಯುತ್ತಿದೆ. ಪ್ರಾದೇಶಿಕ ಪಕ್ಷಗಳನ್ನು ನೋಡಿಯಾದರೂ ಕಾಂಗ್ರೆಸ್ ಕಲಿತುಕೊಳ್ಳಲಿ ಎಂಬುದು ಕಾರ್ಯಕರ್ತರೊಬ್ಬರ ಅನಿಸಿಕೆ.

ಇನ್ನು ಕರಾವಳಿಯ ಮಂಗಳೂರಿನಲ್ಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಗೆಲ್ಲಿಸಲು ಸಾಧ್ಯವಾಗಿದ ಇಬ್ಬರು ನಾಯಕರು ಗಳನ್ನು, ಕಾಂಗ್ರೆಸ್ ಕೇರಳದ ಚುನಾವಣೆ ಉಸ್ತುವಾರಿಯನ್ನಾಗಿ ಮಾಡಿತ್ತು. ಈ ಬಗ್ಗೆ ನ್ಯೂಸ್ ನೆಕ್ಸ್ಟ್ ವರದಿಯನ್ನು ಪ್ರಕಟಿಸಿತ್ತು. ಮಹಾನಗರ ಪಾಲಿಕೆಯನ್ನು ಗೆಲ್ಲಿಸಲಾಗದ ಇವರು ಹೋಗಿ ಕೇರಳ ದಲ್ಲಿ ಏನುಮಾಡಲು ಸಾಧ್ಯ ಎಂಬುದನ್ನು ಕರಾವಳಿ ಪಕ್ಷದ ಕಾರ್ಯಕರ್ತರೇ ಪ್ರಶ್ನಿಸಿದ್ದರು.

ಈ ರೀತಿಯ ಪದಾಧಿಕಾರಿಗಳ ಆಯ್ಕೆಯನ್ನು ಕಾಂಗ್ರೆಸ್ ಮಾಡುತ್ತಲೇ  ಬಂದ ಕಾರಣದಿಂದ ಕಾಂಗ್ರೆಸ್ ಸತತವಾಗಿ ಮುಗ್ಗರಿಸುತ್ತಲೇ ಬಂದಿದೆ. ಗಿಮಿಕ್, ಪ್ರಚಾರ, ನಾಯಕರ ಓಲೈಕೆ ಮಾಡಿದರೆ ಕಾಂಗ್ರೆಸ್ ನಲ್ಲಿ ಸುಲಭದಲ್ಲಿ ಅತ್ಯುನ್ನತ ಸ್ಥಾನ ಗಿಟ್ಟಿಸಬಹುದು ಆದರೆ ಅದು ಚುನಾವಣೆಯನ್ನು ಗೆಲ್ಲಿಸಲು ಸಹಾಯ ಮಾಡುವುದಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

Comments are closed.