Mahendra Singh Dhoni celebrated his 15th wedding anniversary ಬೆಂಗಳೂರು: ಭಾರತಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದು ಕೊಟ್ಟ ಲೆಜೆಂಡರಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಧೋನಿ ದಂಪತಿಗೆ ಇಂದು 15ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಗೃಹಸ್ಥಾಶ್ರಮಕ್ಕೆ ಕಾಲಿಟ್ಟು 15 ವರ್ಷ ತುಂಬಿದ ಹಿನ್ನೆಲೆಯಲ್ಲಿ ಧೋನಿ ಮತ್ತು ಸಾಕ್ಷಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ. (MS Dhoni & Sakshi celebrating their 15th wedding anniversary) ತಮ್ಮ ನೆಚ್ಚಿನ ನಾಯಿಯನ್ನು ಪಕ್ಕದಲ್ಲಿರಿಸಿಕೊಂಡು ಧೋನಿ ದಂಪತಿ ಕೇಕ್ ಕತ್ತರಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಂ.ಎಸ್ ಧೋನಿ ಮತ್ತು ಸಾಕ್ಷಿ ಧೋನಿ ದಂಪತಿಗೆ 9 ವರ್ಷದ ಮಗಳಿದ್ದಾಳೆ. ಆಕೆಯ ಹೆಸರು ಜೀವಾ ಧೋನಿ. ಎಂ.ಎಸ್ ಧೋನಿ, ಸಾಕ್ಷಿ ಸಿಂಗ್ ರಾವತ್ ಅವರನ್ನು 2010ರ ಜುಲೈ 4ರಂದು ಸರಳವಾಗಿ ವಿವಾಹವಾಗಿದ್ದರು. ತೀರಾ ಖಾಸಗಿಯಾಗಿ ನಡೆದಿದ್ದ ಧೋನಿ ಮದುವೆಗೆ ಕೆಲವೇ ಕೆಲ ಕ್ರಿಕೆಟಿಗರನ್ನಷ್ಟೇ ಆಹ್ವಾನಿಸಲಾಗಿತ್ತು.
ಇದನ್ನೂ ಓದಿ : ವಿರಾಟ್ ಕೊಹ್ಲಿ ಮೇಲೆ ಈ ಮುಂಬೈಕರ್‌ಗಳಿಗೇಕೆ ಈ ಪರಿ ಉರಿ?
https://x.com/MSDhoni77818/status/1808558410943578441
ಐಪಿಎಲ್’ನಲ್ಲಿ ಮೊದಲ ಬಾರಿ ಚಾಂಪಿಯನ್ ಆದ ನಂತರ ಸಾಕ್ಷಿ ಅವರನ್ನು ಮದುವೆಯಾಗಿದ್ದ ಧೋನಿ, ನಂತರ ಕ್ರಿಕೆಟ್ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದರು. ಪತ್ನಿ ತಂದ ಅದೃಷ್ಟವೋ ಏನೋ.. ಮದುವೆಯ ನಂತರ ಧೋನಿ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿದ್ದರು. ಬಳಿಕ 2013ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಮದುವೆಯ ನಂತರ ಧೋನಿ ನಾಲ್ಕು ಬಾರಿ ಐಪಿಎಲ್’ನಲ್ಲೂ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

https://www.instagram.com/p/C8_eCXJIznJ/?hl=en
ಇದನ್ನೂ ಓದಿ : ರಾಹುಲ್ ದ್ರಾವಿಡ್ ಅದೃಷ್ಟವನ್ನೇ ಬದಲಿಸಿತು ರೋಹಿತ್ ಮಾಡಿದ ಅದೊಂದು ಫೋನ್ ಕಾಲ್
ಇನ್ನು ಮೂರು ದಿನಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟುಹಬ್ಬ. ಜುಲೈ 7ಕ್ಕೆ ಧೋನಿ 43 ವರ್ಷ ಪೂರ್ತಿಗೊಳಿಸಿ 44ನೇ ವರ್ಷಕ್ಕೆ ಕಾಲಿಡಲಿದ್ದಾರೆ. 2024ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಬ್ಬರಿಸಿದ್ದ ಧೋನಿ, ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ. ಈವರೆಗೆ ಧೋನಿ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಎಂ.ಎಸ್ ಧೋನಿ, ಐಪಿಎಲ್ ಮುಗಿದ ಬೆನ್ನಲ್ಲೇ ಲಂಡನ್’ಗೆ ತೆರಳಿ ಲಘು ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಇದನ್ನೂ ಓದಿ : Virat Kohli: ವೀಡಿಯೊ ಕಾಲ್ ಮೂಲಕ ಪತ್ನಿ ಅನುಷ್ಕಾ ಶರ್ಮಾಗೆ ಚಂಡಮಾರುತ ಲೈವ್ ದೃಶ್ಯ ತೋರಿಸಿದ ವಿರಾಟ್ ಕೊಹ್ಲಿ
https://x.com/CricCrazyJohns/status/1808709307502055543
Dhoni wedding anniversary : Mahendra Singh Dhoni celebrated his 15th wedding anniversary with his wife Sakshi in a simple way