ಭಾನುವಾರ, ಏಪ್ರಿಲ್ 27, 2025
HomeSportsCricketGood bye Dinesh Karthik : ಡಿಕೆ ಸಾಹೇಬನ ಕ್ರಿಕೆಟ್ ಬದುಕಿಗೆ ಸೋಲಿನ ವಿದಾಯ, ನಿವೃತ್ತಿ...

Good bye Dinesh Karthik : ಡಿಕೆ ಸಾಹೇಬನ ಕ್ರಿಕೆಟ್ ಬದುಕಿಗೆ ಸೋಲಿನ ವಿದಾಯ, ನಿವೃತ್ತಿ ಘೋಷಿಸಿದ ಆರ್’ಸಿಬಿ ವಾರಿಯರ್ ದಿನೇಶ್‌ ಕಾರ್ತಿಕ್‌

- Advertisement -

Dinesh Karthik Retirement : ಅಹ್ಮದಾಬಾದ್: ಐಪಿಎಲ್ 2024 ಪ್ಲೇ ಆಫ್ (IPL 2024 play off) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bengaluru), ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ 4 ವಿಕೆಟ್’ಗಳ ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದೆ. ಇದರೊಂದಿಗೆ ‘’ಈ ಸಲ ಕಪ್ ನಮ್ದೇ’’ ಎಂಬ ನಿರೀಕ್ಷೆ ಸತತ 17ನೇ ವರ್ಷವೂ ಸುಳ್ಳಾಗಿದೆ.

Dinesh Karthik Retirement from IPL Emotional Guard of honour RCB after RR vs RCB match IPL 2024
Image Credit to Original Source

ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್’ಸಿಬಿ ಆಘಾತಕಾರಿ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಯಲ್ ಚಾಲೆಂಜರ್ಸ್ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ರಾಯಲ್ಸ್ 19 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ 2ನೇ ಕ್ವಾಲಿಫೈಯರ್’ಗೆ ಅರ್ಹತೆ ಪಡೆಯಿತು. ರಾಜಸ್ಥಾನ್ ವಿರುದ್ಧದ ಪಂದ್ಯದ ಮೂಲಕ ಆರ್’ಸಿಬಿಯ ವಿಕೆಟ್ ಕೀಪರ್ ಬ್ಯಾಟರಿ ದಿನೇಶ್ ಕಾರ್ತಿಕ್ ( Dinesh Karthik) ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದಾರೆ.

https://x.com/rcbtweets/status/1793352013092118805?s=46

39 ವರ್ಷದ ಡಿಕೆ ಅವರನ್ನು 2022ರ ಮೆಗ್ ಆಕ್ಷನ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ₹5.5 ಕೋಟಿಗಳ ಖರೀದಿಸಿತ್ತು. 2018ರಲ್ಲಿ ಕೆಕೆಆರ್ ತಂಡದ ನಾಯಕತ್ವ ವಹಿಸಿದ್ದ ದಿನೇಶ್ ಕಾರ್ತಿಕ್ ತಂಡವನ್ನು ಪ್ಲೇ ಆಫ್’ಗೆ ಮುನ್ನಡೆಸಿದ್ದರು. ಐಪಿಎಲ್’ನಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್’ನಲ್ಲಿ ದಿನೇಶ್ ಕಾರ್ತಿಕ್ ಪ್ರತಿನಿಧಿಸಿದ ತಂಡಗಳು:

2008-10: ಡೆಲ್ಲಿ ಡೇರ್ ಡೆವಿಲ್ಸ್
2011: ಕಿಂಗ್ಸ್ ಇಲವೆನ್ ಪಂಜಾಬ್
2012-13: ಮುಂಬೈ ಇಂಡಿಯನ್ಸ್
2014: ಡೆಲ್ಲಿ ಡೇರ್ ಡೆವಿಲ್ಸ್
2015: ರಾಯಲ್ ಚಾಲೆಂಜರ್ಸ್ ಬೆಂಗಳೂರು (₹10.5 ಕೋಟಿ)
2016-17: ಗುಜರಾತ್ ಲಯನ್ಸ್
2018-21: ಕೋಲ್ಕತಾ ನೈಟ್ ರೈಡರ್ಸ್
2022-24: ರಾಯಲ್ ಚಾಲೆಂಜರ್ಸ್ ಬೆಂಗಳೂರು

https://x.com/yugnagpal12/status/1793342234395300322

ಇದನ್ನೂ ಓದಿ : Will King Kohli Win RCB In IPL Play Off ? ಮೋದಿ ಮೈದಾನದಲ್ಲಿ ಆರ್‌ಸಿಬಿಯನ್ನು ಗೆಲ್ಲಿಸುತ್ತಾನಾ ಕಿಂಗ್ ಕೊಹ್ಲಿ?

ಐಪಿಎಲ್’ನಲ್ಲಿ ದಿನೇಶ್ ಕಾರ್ತಿಕ್ ಸಾಧನೆ
ಪಂದ್ಯ: 257
ಎಸೆತ: 3577
ರನ್ : 4842
ನಾಟೌಟ್ : 50
ಬೆಸ್ಟ್ : 97*
ಅರ್ಧಶತಕ : 22
ಸರಾಸರಿ : 26.32
ಸ್ಟ್ರೈಕ್’ರೇಟ್ : 135.36
ಸಿಕ್ಸರ್ : 161
ಬೌಂಡರಿ : 466
ಕ್ಯಾಚ್ : 145
ಸ್ಟಂಪ್ : 37

ಇದನ್ನೂ ಓದಿ : Shreyas Iyer: ಐಪಿಎಲ್ ಫೈನಲ್ ತಲುಪಿದ ಕೆಕೆಆರ್, ಬಿಸಿಸಿಐ ಎಷ್ಟು ತುಳಿದರೂ ಮೇಲೆದ್ದು ನಿಂತ ಮುಂಬೈಕರ್ !

ಐಪಿಎಲ್ 2024ರಲ್ಲಿ ದಿನೇಶ್ ಕಾರ್ತಿಕ್ ಸಾಧನೆ
ಪಂದ್ಯ: 15
ಎಸೆತ: 174
ರನ್ : 326
ನಾಟೌಟ್ : 04
ಬೆಸ್ಟ್ : 83
ಅರ್ಧಶತಕ : 02
ಸರಾಸರಿ : 36.22
ಸ್ಟ್ರೈಕ್’ರೇಟ್ : 187.36
ಸಿಕ್ಸರ್ : 22
ಬೌಂಡರಿ : 27
ಕ್ಯಾಚ್ : 04
ಸ್ಟಂಪ್ : 01

ಇದನ್ನೂ ಓದಿ : CSK ವಿರುದ್ಧ RCB ಗೆಲುವಿಗೆ ಕಾರಣ ಧೋನಿ ಬಾರಿಸಿದ ಆ ಸಿಕ್ಸರ್! ವಿಜಯಮಂತ್ರದ ರಹಸ್ಯ ಬಿಚ್ಚಿಟ್ಟ ದಿನೇಶ್‌ ಕಾರ್ತಿಕ್

Dinesh Karthik Retirement from IPL Emotional Guard of honour RCB after RR vs RCB match IPL 2024

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular