Shreyas Iyer: ಐಪಿಎಲ್ ಫೈನಲ್ ತಲುಪಿದ ಕೆಕೆಆರ್, ಬಿಸಿಸಿಐ ಎಷ್ಟು ತುಳಿದರೂ ಮೇಲೆದ್ದು ನಿಂತ ಮುಂಬೈಕರ್ !

IPL 2024 KKR Captain Shreyas iyer  : ಅಹ್ಮದಾಬಾದ್: ಶ್ರೇಯಸ್ ಅಯ್ಯರ್ (Shreyas iyer ) ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡ ಐಪಿಎಲ್-2024 ಟೂರ್ನಿಯಲ್ಲಿ (IPL 2024) ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ.

IPL 2024 KKR Captain Shreyas iyer  : ಅಹ್ಮದಾಬಾದ್: ಶ್ರೇಯಸ್ ಅಯ್ಯರ್ (Shreyas iyer ) ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡ ಐಪಿಎಲ್-2024 ಟೂರ್ನಿಯಲ್ಲಿ (IPL 2024) ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಿಂಗ್ ಖಾನ್ ಶಾರುಖ್ ಮಾಲೀಕ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವನ್ನು 8 ವಿಕೆಟ್’ಗಳಿಂದ ಭರ್ಜರಿಯಾಗಿ ಮಣಿಸಿ 3ನೇ ಬಾರಿ ಫೈನಲ್’ಗೆ ಲಗ್ಗೆ ಇಟ್ಟಿತು.

IPL 2024 KKR Captain Shreyas iyer Special Story
Image Credit to Original Source

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ, 19.3 ಓವರ್’ಗಳಲ್ಲಿ ಕೇವಲ 159 ರನ್ನಿಗೆ ಆಲೌಟಾಯಿತು. ನಂತರ ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 13.4 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಭರ್ಜರಿ ಜಯ ದಾಖಲಿಸಿತು. ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್’ಗಳನ್ನೊಳಗೊಂಡ ಅಜೇಯ 58 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 28 ಎಸೆತಗಳಲ್ಲಿ 5 5 ಬೌಂಡರಿ ಹಾಗೂ 4 ಸಿಕ್ಸರ್’ಗಳ ಸಹಿತ ಅಜೇಯ 51 ರನ್ ಸಿಡಿಸಿದರು. ಈ ಜೋಡಿ ಮುರಿಯದ 3ನೇ ವಿಕೆಟ್’ಗೆ 97 ರನ್ ಸೇರಿಸಿ ಕೆಕೆಆರ್’ಗೆ ಸುಲಭ ಗೆಲುವು ತಂದು ಕೊಟ್ಟಿತು.

ಇದನ್ನೂ ಓದಿ : RCB Vs RR IPL 2024 Play Off: ಐಪಿಎಲ್ ಎಲಿನೇಟರ್ ಪಂದ್ಯ: ಆರ್’ಸಿಬಿಗೆ ರಾಯಲ್ಸ್ ಎದುರಾಳಿ, ಫೈನಲ್’ಗೆ ಮೂರೇ ಮೆಟ್ಟಿಲು !

ಕೆಕೆಆರ್ ತಂಡ ಈ ಬಾರಿ ಫೈನಲ್ ತಲುಪುವಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮಹತ್ವದ ಪಾತ್ರ ವಹಿಸಿದ್ದಾರೆ. ಕಳೆದ ಬಾರಿ ಗಾಯದ ಕಾರಣ ಐಪಿಎಲ್’ನಿಂದ ಹೊರಗುಳಿದಿದ್ದ ಅಯ್ಯರ್, ಈ ಬಾರಿ ನಾಯಕನಾಗಿ ತಂಡಕ್ಕೆ ವಾಪಸ್ಸಾಗಿದ್ದರು. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ಅಷ್ಟೇ ಅಲ್ಲ, ಬಿಸಿಸಿಐ ವಾರ್ಷಿಕ ಒಪ್ಪಂದದಿಂದಲೂ ಅಯ್ಯರ್ ಅವರನ್ನು ಹೊರ ಹಾಕಲಾಗಿತ್ತು.

IPL 2024 KKR Captain Shreyas iyer Special Story
Image Credit to Original Source

ಇದೀಗ ತಮ್ಮ ಆಟದ ಮೂಲಕವೇ ಬಿಸಿಸಿಐಗೆ ಶ್ರೇಯಸ್ ಅಯ್ಯರ್ ಉತ್ತರ ಕೊಟ್ಟಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್, ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಫೈನಲ್’ಗೆ ಮುನ್ನಡೆಸಿದ ಸಾಧನೆ ಮಾಡಿದ್ದಾರೆ. ಐಪಿಎಲ್ ಫೈನಲ್ ಪಂದ್ಯ ಮೇ 26ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ : Will King Kohli Win RCB In IPL Play Off ? ಮೋದಿ ಮೈದಾನದಲ್ಲಿ ಆರ್‌ಸಿಬಿಯನ್ನು ಗೆಲ್ಲಿಸುತ್ತಾನಾ ಕಿಂಗ್ ಕೊಹ್ಲಿ?

ಇಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ (IPL Eliminator) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ (RCB Vs RR) ಶುಕ್ರವಾರ ಚೆನ್ನೈನಲ್ಲಿ ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ವಿಜೇತರು ಫೈನಲ್’ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ : Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!

IPL 2024 KKR Captain Shreyas iyer Special Story

Comments are closed.