Dravid World Cup: ನಾಯಕನಾಗಿ ವಿಶ್ವಕಪ್ ಗೆಲ್ಲಲಾಗಲಿಲ್ಲ, ಕೋಚ್ ಆಗಿ ಗೆಲ್ತಾರಾ ಕನ್ನಡಿಗ ರಾಹುಲ್ ದ್ರಾವಿಡ್

ICC T20 World Cup 2024 : ಬೆಂಗಳೂರು: ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid) ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಅಟಗಾರರಲ್ಲಿ ಒಬ್ಬರು. ಆದರೆ ದ್ರಾವಿಡ್ ಅವರ ಕ್ರಿಕೆಟ್ ಬದುಕಲ್ಲಿ ಒಂದು ಕೊರಗಿದೆ. ಅದು ಒಮ್ಮೆಯೂ ವಿಶ್ವಕಪ್ ಗೆಲ್ಲಲಾಗಲಿಲ್ಲವಲ್ಲಾ ಎಂಬ ಕೊರಗು. ಆಟಗಾರನಾಗಿ, ಭಾರತ ತಂಡದ ನಾಯಕನಾಗಿ ವಿಶ್ವಕಪ್ ಗೆಲ್ಲಲು ವಿಫಲರಾಗಿರುವ ದ್ರಾವಿಡ್ ಅವರಿಗೆ ಕೋಚ್ ಆಗಿ ವಿಶ್ವಕಪ್ ಟ್ರೋಫಿ ಒಲಿಯಲಿದೆಯೇ?

Dravid World Cup 2024 Could not win the World Cup as a captain, but Rahul Dravid won as a coach
Image Credit : Crictoday

ರಾಹುಲ್ ದ್ರಾವಿಡ್ ಒಟ್ಟು 3 ವಿಶ್ವಕಪ್’ಗಳಲ್ಲಿ ಆಡಿದ್ದಾರೆ. 1999, 2004 ಹಾಗೂ 2007ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ದ್ರಾವಿಡ್ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2004ರಲ್ಲಿ ತಂಡದ ಉಪ ನಾಯಕ ರಾಗಿದ್ದ ದ್ರಾವಿಡ್, 2007ರ ವಿಶ್ವಕಪ್’ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆದರೆ ಮೂರು ಬಾರಿಯೂ ವಿಶ್ವಕಪ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. 1999ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್’ನಲ್ಲಿ ದ್ರಾವಿಡ್ ಟೂರ್ನಿಯಲ್ಲೇ ಅತೀ ಹೆಚ್ಚು 461 ರನ್ ಕಲೆ ಹಾಕಿದ್ದರು. ಆದರೆ ಭಾರತ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು.

ಇದನ್ನೂ ಓದಿ : India Vs England : 10 ವರ್ಷಗಳ ನಂತರ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ

2004ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. 2007ರಲ್ಲಿ ವೆಸ್ಟ್ ಇಂಡೀಸ್’ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ದ್ರಾವಿಡ್ ಅವರ ನಾಯಕತ್ವದಲ್ಲೇ ಆಡಿ, ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರ ಬಿದ್ದು ಅವಮಾನ ಎದುರಿಸಿತ್ತು. 2011ರಲ್ಲಿ ಭಾರತ ಐಸಿಸಿ ಏಕದಿನ ವಿಶ್ವಕಪ್ ಗೆದ್ದಾಗ ದ್ರಾವಿಡ್ ಆ ತಂಡದಲ್ಲಿರಲಿಲ್ಲ. ಹೀಗೆ ಆಡಿದ ಮೂರೂ ವಿಶ್ವಕಪ್’ಗಳಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಒಮ್ಮೆಯೂ ವಿಶ್ವಕಪ್ ಒಲಿದಿಲ್ಲ.

Dravid World Cup 2024 Could not win the World Cup as a captain, but Rahul Dravid won as a coach
Image Credit to Original Source

ಕೋಚ್ ಆಗಿ ದ್ರಾವಿಡ್ ಈಗಾಗಲೇ ಅಂಡರ್-19 ವಿಶ್ವಕಪ್ ಗೆದ್ದಿದ್ದಾರೆ. 2018ರಲ್ಲಿ ದ್ರಾವಿಡ್ ಅವರ ಗರಡಿಯಲ್ಲಿ ಭಾರತ ಅಂಡರ್-19 ವಿಶ್ವಕಪ್’ನಲ್ಲಿ ಚಾಂಪಿಯನ್ ಆಗಿತ್ತು. 2021ರ ನವೆಂಬರ್ ತಿಂಗಳಲ್ಲಿ ರಾಹುಲ್ ದ್ರಾವಿಡ್ ಭಾರತ ಸೀನಿಯರ್ ತಂಡದ ಕೋಚ್ ಆಗಿದ್ದರು. ದ್ರಾವಿಡ್ ಕೋಚ್ ಆದ ನಂತರ ಭಾರತ ಒಟ್ಟು ಮೂರು ಐಸಿಸಿ ಟೂರ್ನಿಗಳನ್ನಾಡಿದೆ. ಮೂರರಲ್ಲೂ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. 2022ರ ಐಸಿಸಿ ಏಕದಿನ ವಿಶ್ವಕಪ್’ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್’ನಲ್ಲಿ ಸೋಲು ಕಂಡಿದ್ದ ಭಾರತ, 2023ರ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.

ಇದನ್ನೂ ಓದಿ : Women’s Test: ಹರಿಣ ಬೇಟೆಗೆ ರೆಡಿಯಾದ ಭಾರತದ ವನಿತೆಯರು, ಮಿಂಚುತ್ತಾಳಾ ಮೈಸೂರು ಹುಡುಗಿ ?

ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್’ನಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ದ್ರಾವಿಡ್ ಅವರ ಗರಡಿಯಲ್ಲಿ ಫೈನಲ್ ತಲುಪಿದ್ದು, ಭಾರತ ಸೀನಿಯರ್ ತಂಡದೊಂದಿಗೆ ದ್ರಾವಿಡ್ ವಿಶ್ವಕಪ್ ಗೆಲ್ಲಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

Dravid World Cup: Could not win the World Cup as a captain, but Rahul Dravid won as a coach ?

Comments are closed.