ಭಾನುವಾರ, ಏಪ್ರಿಲ್ 27, 2025
HomeSportsCricketDuleep Trophy 2023 : ಇದೇ ತಿಂಗಳು ಬೆಂಗಳೂರಲ್ಲಿ ದುಲೀಪ್ ಟ್ರೋಫಿ ಪಂದ್ಯ, ದಕ್ಷಿಣ ವಲಯ...

Duleep Trophy 2023 : ಇದೇ ತಿಂಗಳು ಬೆಂಗಳೂರಲ್ಲಿ ದುಲೀಪ್ ಟ್ರೋಫಿ ಪಂದ್ಯ, ದಕ್ಷಿಣ ವಲಯ ತಂಡದಲ್ಲಿ ನಾಲ್ವರು ಕನ್ನಡಿಗರು

- Advertisement -

ಬೆಂಗಳೂರು: ದುಲೀಪ್ ಟ್ರೋಫಿ-2023 (Duleep Trophy 2023) ಟೂರ್ನಿಗೆ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ನಾಲ್ವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ವಲಯ ತಂಡವನ್ನು ಆಂಧ್ರದ ಹನುಮ ವಿಹಾರಿ (Hanuma Vihari) ಮುನ್ನಡೆಸಲಿದ್ದು, ಕರ್ನಾಟಕದ ಬಲಗೈ ಓಪನರ್ ಮಯಾಂಕ್ ಅಗರ್ವಾಲ್ ( Mayank Agarwal) ಉಪನಾಯಕನಾಗಿ ನೇಮಕಗೊಂಡಿದ್ದಾರೆ. ರಾಜ್ಯದ ಮತ್ತೊಬ್ಬ ಭರವಸೆಯ ಬ್ಯಾಟ್ಸ್’ಮನ್ ಆರ್. ಸಮರ್ಥ್, ಯುವ ಬಲಗೈ ವೇಗದ ಬೌಲರ್’ಗಳಾದ ವೈಶಾಖ್ ವಿಜಯ್ ಕುಮಾರ್ ಮತ್ತು ವಿದ್ವತ್ ಕಾವೇರಪ್ಪ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಿಂಚಿದ್ದ ಹೈದರಾಬಾದ್’ನ ಎಡಗೈ ದಾಂಡಿಗ ತಿಲಕ್ ವರ್ಮಾ ಮತ್ತು ಗುಜರಾತ್ ಟೈಟನ್ಸ್ ಪರ ಅಬ್ಬರಿಸಿದ್ದ ತಮಿಳುನಾಡಿನ ಸಾಯಿ ಕಿಶೋರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ಆಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೆ.ಎಸ್ ಭರತ್ ಕೂಡ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯ ಇದೇ ತಿಂಗಳ 28 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ಕೆ.ಎಸ್ ಭರತ್ ಅವರಿಗೆ ದುಲೀಪ್ ಟ್ರೋಫಿ ಪಂದ್ಯ ಮಹತ್ವದ್ದಾಗಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಕೆರಿಬಿಯನ್ ನಾಡಿನಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಕೇಂದ್ರ ವಲಯ, ಮತ್ತು ಈಶಾನ್ಯ ವಲಯ ತಂಡಗಳು ಆಡಲಿವೆ.

ಇದನ್ನೂ ಓದಿ : KL Rahul : ಲಂಡನ್‌ನಲ್ಲಿ ಸರ್ಜರಿ ಮುಗಿಸಿ ಮನೆಗೆ ಮರಳಿದ ಕನ್ನಡಿಗ ಕೆ.ಎಲ್ ರಾಹುಲ್

ಇದನ್ನೂ ಓದಿ : Rishabh Pant injury update : ಹೇಗಾಗಿದೆ ನೋಡಿ ರಿಷಭ್ ಪಂತ್ ಪರಿಸ್ಥಿತಿ..! ಮೆಟ್ಟಿಲು ಹತ್ತಲು ಕಷ್ಟ ಪಡುತ್ತಿದ್ದಾರೆ ವಿಕೆಟ್ ಕೀಪರ್

ದುಲೀಪ್ ಟ್ರೋಫಿ-2023 ಟೂರ್ನಿಗೆ ದಕ್ಷಿಣ ವಲಯ ತಂಡದ ಹೀಗಿದೆ:

  1. ಹನುಮ ವಿಹಾರಿ (ನಾಯಕ)
  2. ಮಯಾಂಕ್ ಅಗರ್ವಾಲ್ (ಉಪನಾಯಕ)
  3. ರವಿಕುಮಾರ್ ಸಮರ್ಥ್
  4. ತಿಲಕ್ ವರ್ಮಾ
  5. ಸಾಯಿ ಸುದರ್ಶನ್
  6. ರಿಕಿ ಭುಯಿ
  7. ಕೆ.ಎಸ್ ಭರತ್ (ವಿಕೆಟ್ ಕೀಪರ್)
  8. ವಾಷಿಂಗ್ಟನ್ ಸುಂದರ್
  9. ಸಚಿನ್ ಬೇಬಿ
  10. ಪ್ರದೋಶ್ ರಂಜನ್ ಪಾಲ್
  11. ಸಾಯಿ ಕಿಶೋರ್
  12. ವಿದ್ವತ್ ಕಾವೇರಪ್ಪ
  13. ವೈಶಾಖ್ ವಿಜಯ್ ಕುಮಾರ್
  14. ಕೆ.ವಿ ಸಸಿಕಾಂತ್
  15.  ದರ್ಶನ್ ಮಿಸಾಲ್

Duleep Trophy 2023 Mayank Agarwal Vyshak Vijayakumar R Samarth and four Kannadigas in South Zone team

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular