ಮಂಗಳವಾರ, ಏಪ್ರಿಲ್ 29, 2025
HomeSportsCricketDuleep Trophy final BCCI : ಬಿಸಿಸಿಐಗೆ ಮತ್ತೊಂದು ಮುಜುಗರ, ದೇಶೀಯ ಟೂರ್ನಿಗಳಿಗೆ ಬ್ರಾಡ್’ಕಾಸ್ಟರ್ಸ್ ಇಲ್ಲ,...

Duleep Trophy final BCCI : ಬಿಸಿಸಿಐಗೆ ಮತ್ತೊಂದು ಮುಜುಗರ, ದೇಶೀಯ ಟೂರ್ನಿಗಳಿಗೆ ಬ್ರಾಡ್’ಕಾಸ್ಟರ್ಸ್ ಇಲ್ಲ, ತಾನೇ ಲೈವ್ ಸ್ಟ್ರೀಮ್ ಮಾಡಲು ಮುಂದಾದ ಕ್ರಿಕೆಟ್ ಬಾಸ್

- Advertisement -

ಬೆಂಗಳೂರು: Duleep Trophy final BCCI : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಅಂದ್ರೆ ಬಿಸಿಸಿಐ (BCCI) ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಆದರೇನಂತೆ ಬಿಸಿಸಿಐ ಆಯೋಜಿಸುವ ದೇಶೀಯ ಕ್ರಿಕೆಟ್ ಟೂರ್ನಿಗಳಿಗೆ ಲೈವ್ ಬ್ರಾಡ್’ಕಾಸ್ಟರ್’ಗಳೇ ಇಲ್ಲ.

ಈ ಹಿಂದೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಸೇರಿದಂತೆ ದೇಶೀಯ ಕ್ರಿಕೆಟ್’ನ ಬಹುತೇಕ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನೇರಪ್ರಸಾರ ಮಾಡುತ್ತಿತ್ತು. ಆದರೆ ಈ ಬಾರಿ ದೇಶೀಯ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನೇರ ಪ್ರಸಾರ ಮಾಡುತ್ತಿಲ್ಲ. ಕೇವಲ ಅಂತರಾಷ್ಟ್ರೀಯ ಪಂದ್ಯಗಳಷ್ಟೇ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್’ನಲ್ಲಿ ನೇರ ಪ್ರಸಾರಗೊಳ್ಳುತ್ತಿದೆ.

ನಿರೀಕ್ಷಿತ ಆದಾಯವಿಲ್ಲದ ಕಾರಣ ಬಿಸಿಸಿಐ ಆಯೋಜಿಸುವ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ನೇರ ಪ್ರಸಾರ ಮಾಡಲು ಯಾವುದೇ ಬ್ರಾಡ್ ಕಾಸ್ಟಿಂಗ್ ಸಂಸ್ಥೆಗಳು ಮುಂದೆ ಬರುತ್ತಿಲ್ಲ. ಹೀಗಾಗಿ ಈಗ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳಿಗೆ ನೇರಪ್ರಸಾರದ ಅವಕಾಶ ಸಿಕ್ಕಿರಲಿಲ್ಲ. ಈ ಕಾರಣದಿಂದ ಬುಧವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳ ನಡುವಿನ ದುಲೀಪ್ ಟ್ರೋಫಿ ಫೈನಲ್ (Duleep Trophy final 2023) ಪಂದ್ಯವನ್ನು ತಾನೇ ಲೈವ್ ಸ್ಟ್ರೀಮ್ ಮಾಡಲು ಬಿಸಿಸಿಐ ಮುಂದಾಗಿದೆ.

ಇದನ್ನೂ ಓದಿ : India Vs West Indies 1st test : ನಾಳೆಯಿಂದ ಇಂಡಿಯಾ Vs ವಿಂಡೀಸ್ ಪ್ರಥಮ ಟೆಸ್ಟ್, WTC ಸೈಕಲ್’ನಲ್ಲಿ ಭಾರತಕ್ಕೆ ಮೊದಲ ಚಾಲೆಂಜ್

ಇದನ್ನೂ ಓದಿ : IPL 2024 LSG Coach : ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೋಚ್ ಆ್ಯಂಡಿ ಫ್ಲವರ್’ಗೆ ಗೇಟ್ ಪಾಸ್ ‌

ದುಲೀಪ್ ಟ್ರೋಫಿ ಫೈನಲ್ ಹಾಗೂ ಮುಂದಿನ ದೇವಧರ್ ಟ್ರೋಫಿ ಏಕದಿನ ಟೂರ್ನಿಯ ಪಂದ್ಯಗಳು ಬಿಸಿಸಿಐ.ಟಿವಿ (Bcci.tv) ವೆಬ್’ಸೈಟ್’ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿವೆ. ದೇವಧರ್ ಟ್ರೋಫಿ ಟೂರ್ನಿ ಜುಲೈ 24ರಿಂದ ಆಗಸ್ಟ್ 3ರವರೆಗೆ ನಡೆಯಲಿದೆ. ಈ ಹಿಂದೆ ದೇಶೀಯ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಡಿಸ್ವಿ ಸ್ಟಾರ್ ಸಂಸ್ಥೆ ಲೈವ್ ಸ್ಟ್ರೀಮ್ ಮಾಡುತ್ತಿತ್ತು. ಆದರೆ ಡಿಸ್ನಿ ಸ್ಟಾರ್ ಜೊತೆಗಿನ ಬಿಸಿಸಿಐ ಕಾಂಟ್ರಾಕ್ಟ್ ಮಾರ್ಚ್’ನಲ್ಲಿ ಅಂತ್ಯಗೊಂಡಿದ್ದು, ಹೊಸ ಬ್ರಾಡ್’ಕಾಸ್ಟರ್ ಹುಡುಕುವಲ್ಲಿ ಬಿಸಿಸಿಐ ವಿಫಲವಾಗಿದೆ.

Duleep Trophy final BCCI: Another embarrassment for BCCI, no broadcasters for domestic tournaments, cricket boss offers to live stream himself

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular