India Vs West Indies 1st test : ನಾಳೆಯಿಂದ ಇಂಡಿಯಾ Vs ವಿಂಡೀಸ್ ಪ್ರಥಮ ಟೆಸ್ಟ್, WTC ಸೈಕಲ್’ನಲ್ಲಿ ಭಾರತಕ್ಕೆ ಮೊದಲ ಚಾಲೆಂಜ್

ಡೊಮಿನಿಕಾ : India Vs West Indies 1st test : ಕಳೆದ ತಿಂಗಳು ಇಂಗ್ಲೆಂಡ್’ನ ಲಂಡನ್’ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ (WTC) ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದ ಭಾರತ, ಬುಧವಾರ ಆರಂಭವಾಗರಲಿರುವ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೂಲಕ ಮುಂದಿನ ಸಾಲಿನ ನೂತನ 2023-25ನೇ ಸಾಲಿನ WTC ಋತುವನ್ನು ಆರಂಭಿಸಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ India Vs West test series) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ. ಈ ಪಂದ್ಯದ ಮೂಲಕ ಮುಂಬೈನ ಯುವ ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಲಿದ್ದಾರೆ. ವಿಶೇಷ ಏನೆಂದರೆ 2011ರಲ್ಲಿ ಇದೇ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ, ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟಿದ್ದರು.

ಇದನ್ನೂ ಓದಿ : IPL 2024 LSG Coach : ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೋಚ್ ಆ್ಯಂಡಿ ಫ್ಲವರ್’ಗೆ ಗೇಟ್ ಪಾಸ್ 

ಇದನ್ನೂ ಓದಿ : David Warner – Candice Warner : ಟೆಸ್ಟ್ ಕ್ರಿಕೆಟ್’ಗೆ ಡೇವಿಡ್ ವಾರ್ನರ್ ವಿದಾಯ? ರಹಸ್ಯ ಬಿಚ್ಚಿಟ್ಟ ಪತ್ನಿಯ ಇಸ್‌ಸ್ಟಾಗ್ರಾಂ ಪೋಸ್ಟ್

ನಾಯಕ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿರುವ ಕಾರಣ, ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು 5ನೇ ಕ್ರಮಾಂಕದಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಆಡಲಿದ್ದಾರೆ. ವಿಕೆಟ್ ಕೀಪರ್ ಸ್ಥಾನಕ್ಕೆ ಕೆ.ಎಸ್ ಭರತ್ ಮತ್ತು ಇಶಾನ್ ಕಿಶನ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಭಾರತ Vs ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್
ಪಂದ್ಯ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ವಿಂಡ್ಸರ್ ಪಾರ್ಕ್ ಮೈದಾನ, ಡೊಮಿನಿಕಾ
ನೇರ ಪ್ರಸಾರ/ ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ/ ಫ್ಯಾನ್ ಕೋಡ್ (JioCinema and FanCode)

ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

  • ರೋಹಿತ್ ಶರ್ಮಾ (ನಾಯಕ)
  • ಯಶಸ್ವಿ ಜೈಸ್ವಾಲ್
  • ಶುಭಮನ್ ಗಿಲ್
  • ವಿರಾಟ್ ಕೊಹ್ಲಿ
  • ಅಜಿಂಕ್ಯ ರಹಾನೆ (ಉಪನಾಯಕ)
  • ಕೆ.ಎಸ್ ಭರತ್/ಇಶಾನ್ ಕಿಶನ್ (ವಿಕೆಟ್ ಕೀಪರ್)
  • ರವೀಂದ್ರ ಜಡೇಜ
  • ರವಿಚಂದ್ರನ್ ಅಶ್ವಿನ್
  • ಶಾರ್ದೂಲ್ ಠಾಕೂರ್
  • ಮೊಹಮ್ಮದ್ ಸಿರಾಜ್
  • ಜೈದೇವ್ ಉನಾದ್ಕಟ್/ ಮುಕೇಶ್ ಕುಮಾರ್/ ನವದೀಪ್ ಸೈನಿ

India Vs West Indies 1st Test: India Vs West Indies 1st Test from tomorrow, India’s first challenge in WTC cycle

Comments are closed.