Mayank Agarwal ಸುಬ್ರಮಣ್ಯ: ಟೀಮ್ ಇಂಡಿಯಾದ ಸ್ಟಾರ್, ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಪುರಾಣ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸುಬ್ರಮಣ್ಯನ ದರ್ಶನ ಪಡೆದಿದ್ದಾರೆ. ಪತ್ನಿ ಆಶಿತಾ ಸೂದ್ ಅಗರ್ವಾಲ್, ಪುತ್ರ ಹಾಗೂ ಕುಟುಂಬಸ್ಥರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಶ್ರೀ ಸುಬ್ರಮಣ್ಯಕ್ಕೆ ಮಯಾಂಕ್ ಅಗರ್ವಾಲ್ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ಥಾನದ ವತಿಯಿಂದ ಮಯಾಂಕ್ ಅಗರ್ವಾಲ್ ದಂಪತಿಯನ್ನು ಸ್ವಾಗತಿಸಲಾಯಿತು.

ಇತ್ತೀಚೆಗೆ ಮಯಾಂಕ್ ಅಗರ್ವಾಲ್ ಕುಟುಂಬ ಸದಸ್ಯರು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದರು. ಐಪಿಎಲ್ ನಂತರ ಕ್ರಿಕೆಟ್’ನಿಂದ ವಿರಾಮ ಪಡೆದಿರುವ ಮಯಾಂಕ್ ಅಗರ್ವಾಲ್, ವಿಶ್ರಾಂತಿಯ ಸಮಯದಲ್ಲಿ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. 33 ವರ್ಷ ವಯಸ್ಸಿನ ಮಯಾಂಕ್ ಅಗರ್ವಾಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ದಯನೀಯ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ : Jasprit Bumrah Net Worth: ಜಸ್ಪ್ರೀತ್ ಬುಮ್ರಾ ಎಷ್ಟು ಶ್ರೀಮಂತ ? ಇಲ್ಲಿದೆ ಬುಮ್ರಾ ಸಂಪತ್ತಿನ ಕೋಟೆ ರಹಸ್ಯ !

4 ಪಂದ್ಯಗಳಲ್ಲಷ್ಟೇ ಆಡುವ ಅವಕಾಶ ಪಡೆದಿದ್ದ ಮಯಾಂಕ್ ಅಗರ್ವಾಲ್ 16ರ ಸರಾಸರಿಯಲ್ಲಿ ಕೇವಲ 64 ರನ್ ಗಳಿಸಿದ್ದರು. ಕರ್ನಾಟಕ ತಂಡದ ನಾಯಕರಾಗಿರುವ ಮಯಾಂಕ್ ಅಗರ್ವಾಲ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಭಾರತ ಪರ ಒಟ್ಟು 21 ಟೆಸ್ಟ್ ಪಂದ್ಯಗಳನ್ನಾಡಿರುವ ಮಯಾಂಕ್ ಅಗರ್ವಾಲ್ 41.33ರ ಸರಾಸರಿಯಲ್ಲಿ 4 ಶತಕ ಹಾಗೂ 6 ಅರ್ಧಶತಕಗಳ ಸಹಿತ 1488 ರನ್ ಕಲೆ ಹಾಕಿದ್ದಾರೆ. ಬಲಗೈ ಬ್ಯಾಟ್ಸ್’ಮನ್ ಮಯಾಂಕ್ ಭಾರತ ಪರ 5 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.
Exclusive: Indina Cricketer Mayank Agarwal visited Kukke Subramanya along with his wife
ಇದನ್ನೂ ಓದಿ : KL Rahul & Monank Patel: ಟಿ20 ವಿಶ್ವಕಪ್: ಅಮೆರಿಕ ತಂಡದ ನಾಯಕ ನಮ್ಮ ಕನ್ನಡಿಗ ರಾಹುಲ್ ಅಭಿಮಾನಿಯಂತೆ !