ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದಿಂದ ಆಟಗಾರರ ವಲಸೆ ಮುಂದುವರಿದಿದೆ. ಕಳೆದ ವರ್ಷ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಮತ್ತು ಕೆ.ವಿ ಸಿದ್ಧಾರ್ಥ್ ಕರ್ನಾಟಕ ತಂಡವನ್ನು ತೊರೆದು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರು. ಈ ಸಾಲಿಗೆ ಈಗ ಹೊಸ ಸೇರ್ಪಡೆ ಕರ್ನಾಟಕದ ಮತ್ತೊಬ್ಬ ರಣಜಿ ಹೀರೋ ರವಿಕುಮಾರ್ ಸಮರ್ಥ್ (R Samarth).

ಮೈಸೂರು ಮೂಲದ ಬಲಗೈ ಬ್ಯಾಟ್ಸ್’ಮನ್ ಆರ್.ಸಮರ್ಥ್ ಕರ್ನಾಟಕ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದು, 2024-25ನೇ ಸಾಲಿನ ದೇಶೀಯ ಕ್ರಿಕೆಟ್’ನಲ್ಲಿ ಉತ್ತರಾಖಂಡ್ ತಂಡದ ಪರ ಆಡಲಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ (Karnataka State Cricket Association) ಈಗಾಗಲೇ ನಿರಪೇಕ್ಷಣಾ ಪತ್ರ ( No Objection Certificate – NOC) ಪಡೆದಿರುವ ಸಮರ್ಥ್, ಸದ್ಯದಲ್ಲೇ ಉತ್ತರಾಖಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ : T20 World Cup 2024 Super-8 : ಹೈ ಸ್ಕೋರಿಂಗ್ ಗ್ರೌಂಡ್‌ನಲ್ಲಿ ಭಾರತ Vs ಆಸ್ಟ್ರೇಲಿಯಾ ಸೂಪರ್-8 ಮ್ಯಾಚ್ !
2013-14ನೇ ಸಾಲಿನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ 31 ವರ್ಷದ ಸ್ಟೈಲಿಷ್ ಓಪನರ್ ಆರ್.ಸಮರ್ಥ್ 2013-14 ಹಾಗೂ 2024-15ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಇರಾನಿ ಕಪ್’ಗಳನ್ನು ಗೆದ್ದ ಕರ್ನಾಟಕ ತಂಡದ ಸದಸ್ಯನಾಗಿದ್ದರು.
ಇದನ್ನೂ ಓದಿ : Smriti Mandhana: ಚಿನ್ನಸ್ವಾಮಿಯಲ್ಲಿ ಮನೆಮಗಳು ಸ್ಮೃತಿ ಮಂಧನ ಮತ್ತೊಂದು ಶತಕ, ನಾಯಕಿ ಕೌರ್ ಸೆಂಚುರಿ ಸಂಭ್ರಮ !

ಕರ್ನಾಟಕ, ದಕ್ಷಿಣ ವಲಯ, ಭಾರತ ಎ, ರೆಸ್ಟ್ ಆಫ್ ಇಂಡಿಯಾ ತಂಡಗಳನ್ನು ಪ್ರತಿನಿಧಿಸಿರುವ ಆರ್.ಸಮರ್ಥ್ ಒಟ್ಟು 88 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 13 ಶತಕಗಳು ಹಾಗೂ 29 ಅರ್ಧಶತಕಗಳ ಸಹಿತ 38.51ರ ಸರಾಸರಿಯಲ್ಲಿ 5,508 ರನ್ ಕಲೆ ಹಾಕಿದ್ದಾರೆ. 64 ಲಿಸ್ಟ್ ಎ ಪಂದ್ಯಗಳಿಂದ 8 ಶತಕ ಮತ್ತು 16 ಅರ್ಧಶತಕಗಳೊಂದಿಗೆ 48.45ರ ಉತ್ತಮ ಸರಾಸರಿಯಲ್ಲಿ 2665 ರನ್ ಗಳಿಸಿದ್ದಾರೆ. ಕರ್ನಾಟಕ ಪರ 23 ಟಿ20 ಪಂದ್ಯಗಳನ್ನೂ ಆಡಿರುವ ಸಮರ್ಥ್ 275 ರನ್ ಗಳಿಸಿದ್ದಾರೆ. 2023-24ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಆರ್.ಸಮರ್ಥ್ ಕರ್ನಾಟಕ ಪರ 341 ರನ್ ಕಲೆ ಹಾಕಿದ್ದರು.
Exclusive Karnataka cricketer Ravikumar Samarth quits the Karnataka state Cricket team
ಇದನ್ನೂ ಓದಿ : T20 World Cup Super-8: ಸೂಪರ್-8ನಲ್ಲಿ ಟೀಮ್ ಇಂಡಿಯಾ ಎದುರಾಳಿಗಳು ಇವರೇ !