Yere Gouda : ಬೆಂಗಳೂರು: ಕರ್ನಾಟಕ ರಣಜಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮುಂದಾಗಿದ್ದು, ಹಾಲಿ ಕೋಚ್ ಪಿ.ವಿ ಶಶಿಕಾಂತ್’ಗೆ ಗೇಟ್’ಪಾಸ್ ನೀಡಿ ರಾಜ್ಯದ ಮಾಜಿ ಕ್ರಿಕೆಟಿಗ ಯರೇಗೌಡ (Yere Gouda ) ಗೆ ಕೋಚ್ ಪಟ್ಟ ಕಟ್ಟಲು ನಿರ್ಧರಿಸಲಾಗಿದೆ (Yere Gouda appointed as new Karnataka coach).

ರಾಯಚೂರಿನವರಾದ ಯರೇಗೌಡ ರಾಜ್ಯ ತಂಡದ ಕೋಚ್ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ. 2022ರಿಂದ ಎರಡು ವರ್ಷಗಳ ಕಾಲ ಪಿ.ವಿ ಶಶಿಕಾಂತ್ ರಾಜ್ಯ ತಂಡದ ಕೋಚ್ ಆಗಿದ್ದರು. ಶಶಿಕಾಂತ್ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ನಿರಂತರ ವೈಫಲ್ಯ ಎದುರಿಸಿರುವ ಕಾರಣ, ಕೋಚ್ ಬದಲಾವಣೆಗೆ ಕೆಎಸ್’ಸಿಎ ಮುಂದಾಗಿದೆ.
ಇದನ್ನೂ ಓದಿ : Jasprit Bumrah Net Worth: ಜಸ್ಪ್ರೀತ್ ಬುಮ್ರಾ ಎಷ್ಟು ಶ್ರೀಮಂತ ? ಇಲ್ಲಿದೆ ಬುಮ್ರಾ ಸಂಪತ್ತಿನ ಕೋಟೆ ರಹಸ್ಯ !
2023-24ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್’ನಲ್ಲಿ ವಿದರ್ಭ ವಿರುದ್ಧ ಸೋಲು ಕಂಡಿತ್ತು. 2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಜ್ಯ ತಂಡ ಸೆಮಿಫೈನಲ್’ನಲ್ಲಿ ಸೌರಾಷ್ಟ್ರ ವಿರುದ್ಧ ಮುಗ್ಗರಿಸಿತ್ತು. 52 ವರ್ಷದ ಯರೇ ಗೌಡ ಇತ್ತೀಚೆಗೆ ಸಿ.ಕೆ ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಕರ್ನಾಟಕ ಕಿರಿಯರ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ : ಛತ್ತೀಸ್‌ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್: ರಾಯ್ಪುರ ರೈನೋಸ್ ತಂಡಕ್ಕೆ ಕನ್ನಡಿಗ ಮುಕುಂದ್ ಗೌಡ ಕೋಚ್!
2020ರಿಂದ 21ರವರೆಗೆ ಯರೇ ಗೌಡ ಕರ್ನಾಟಕ ಹಿರಿಯರ ತಂಡದ ಕೋಚ್ ಆಗಿದ್ದರು. ನಂತರ ಪಿ.ವಿ ಶಶಿಕಾಂತ್ ಅವರಿಗೆ ಕೋಚ್ ಪಟ್ಟ ಕಟ್ಟಲಾಗಿತ್ತು. ಇದೀಗ ಮತ್ತೆ ಶಶಿಕಾಂತ್’ಗೆ ಕೊಕ್ ನೀಡಿ ಯರೇ ಗೌಡಗೆ ಮಣೆ ಹಾಕಲಾಗಿದೆ. ದೇಶೀಯ ಕ್ರಿಕೆಟ್’ನ ದಿಗ್ಗಜ ಆಟಗಾರನಾಗಿರುವ ಯರೇಗೌಡ ರೈಲ್ವೇಸ್ ತಂಡದ ನಾಯಕನಾಗಿ ರಣಜಿ ಟ್ರೋಫಿ ಗೆದ್ದುಕೊಟ್ಟಿದ್ದರು. ರೈಲ್ವೇಸ್ ಪರ ಯರೇ ಗೌಡ 2 ರಣಜಿ ಟ್ರೋಫಿಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲ, 3 ಬಾರಿ ಇರಾನಿ ಕಪ್ ಗೆದ್ದ ತಂಡದ ಸದಸ್ಯರಾಗಿದ್ದರು.

1994ರಲ್ಲಿ ಕರ್ನಾಟಕ ಪರ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಯರೇಗೌಡ 1995ರಲ್ಲಿ ರೈಲ್ವೇಸ್ ತಂಡಕ್ಕೆ ವಲಸೆ ಹೋಗಿದ್ದರು. 11 ವರ್ಷಗಳ ಕಾಲ ರೈಲ್ವೇಸ್ ಪರ ಆಡಿದ್ದ ಯರೇ ಗೌಡ 2006-07ನೇ ಸಾಲಿನಲ್ಲಿ ಕರ್ನಾಟಕಕ್ಕೆ ವಾಪಸ್ ಆಗಿ ರಾಜ್ಯ ತಂಡದ ನಾಯಕತ್ವ ವಹಿಸಿದ್ದರು. ರಣಜಿ ಟ್ರೋಫಿಯಲ್ಲಿ 100 ಪಂದ್ಯಗಳನ್ನಾಡಿದ ದೇಶಯ ಕೆಲವೇ ಕೆಲ ಆಟಗಾರರಲ್ಲಿ ಯರೇ ಗೌಡ ಒಬ್ಬರು.
ಇದನ್ನೂ ಓದಿ : Exclusive: ಕುಕ್ಕೆ ಸುಬ್ರಮಣ್ಯಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್
ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಒಟ್ಟು 134 ಪಂದ್ಯಗಳನ್ನಾಡಿರುವ ಯರೇ ಗೌಡ 45.53ರ ಸರಾಸರಿಯಲ್ಲಿ 16 ಶತಕ ಹಾಗೂ 39 ಅರ್ಧಶತಕಗಳ ನೆರವಿನಿಂದ 7650 ರನ್ ಕಲೆ ಹಾಕಿದ್ದಾರೆ. 49 ಲಿಸ್ಟ್ ಎ ಪಂದ್ಯಗಳಿಂದ 1051 ರನ್ ಹಾಗೂ 7 ಟಿ20 ಪಂದ್ಯಗಳಿಂದ 17 ರನ್ ಗಳಿಸಿದ್ದಾರೆ. 2011ರಲ್ಲಿ ಯರೇ ಗೌಡ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವಾಡಿದ್ದರು.
Exclusive Yare Gowda Coach for Karnataka Cricket Team Replace for PV Shashikant