ಕೋಲ್ಕತ್ತ : ರಣಜಿ ಕ್ರಿಕೆಟ್‌ನ ದಿಗ್ಗಜ ರಾಜಿಂದರ್ ಗೋಯೆಲ್ ನಿವಾಸದಲ್ಲೇ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಪತ್ನಿ ಮತ್ತು ಪುತ್ರ, ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ಹಾಲಿ ದೇಶೀಯ ಮ್ಯಾಚ್ ರೆಫ್ರಿ ನಿತಿನ್ ಗೋಯೆಲ್ ಅವರನ್ನು ಅಗಲಿದ್ದಾರೆ.

ರಾಜಿಂದರ್ ಗೋಯೆಲ್ ಅವರ ನಿಧನಕ್ಕೆ ಬಿಸಿಸಿಐ, ಟೀಂ ಇಂಡಿಯಾ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೆಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರೂ ರಾಜಿಂದರ್ ಗೋಯೆಲ್‌ಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ. ರಣಜಿ ಟ್ರೋಫಿಯಲ್ಲಿ ಅತ್ಯಧಿಕ 637 ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆ ಈಗಲೂ ರಾಜಿಂದರ್ ಗೋಯೆಲ್ ಅವರ ಹೆಸರಿನಲ್ಲಿದೆ.