ಗಡಿಯಲ್ಲಿ ಪಾಕ್ ನಿಂದ ಅಪ್ರಚೋದಿತ ದಾಳಿ : ಓರ್ವ ಯೋಧ ಹುತಾತ್ಮ : ಭಾರತೀಯ ಸೈನಿಕರ ಪ್ರತಿದಾಳಿಗೆ ಇಬ್ಬರು ಪಾಕ್ ಸೈನಿಕರು ಉಡೀಸ್

0

ನವದೆಹಲಿ : ಪಾಕಿಸ್ತಾನ ಮತ್ತೆ ಗಡಿಯಲ್ಲಿ ಕ್ಯಾತೆ ತೆಗೆದಿದ್ದು, ಭಾರತೀಯ ಯೋಧರ ಮೇಲೆ ಅಪ್ರಚೋದಿತ ದಾಳಿ ನಡೆದಿದೆ. ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಗಡಿ ನಿಯಂತ್ರಣ ರೇಖೆ (LOC)ಬಳಿ ಭಾರತೀಯ ಯೋಧರನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಪಾಕ್ ದಾಳಿಯ ಬೆನ್ನಲ್ಲೇ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿದ್ದು, ಇಬ್ಬರು ಪಾಕ್ ಯೋಧರನ್ನು ಹೊಡೆದುರುಳಿಸಿದೆ.

ಪೂಂಚ್‌ನ ಕೃಷ್ಣ ಘಾಟಿ, ನೌಶೇರಾ ಸೆಕ್ಟರ್ ಹಾಗು ಕಥುವಾ ಜಿಲ್ಲೆ ಗಡಿ ಬಳಿ ಶೆಲ್ಲಿಂಗ್ ದಾಳಿ ನಡೆಸಿದ್ದಾರೆ. ಪೆಟ್ರೋಲಿಂಗ್‌ನಲ್ಲಿದ್ದ ಯೋಧ ಹವಾಲ್ದಾರ್ ದೀಪಕ್ ಕರ್ಕಿ ಎಂಬವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ.

ಪಾಕ್ ಸೈನಿಕರ ದಾಳಿಯ ಬೆನ್ನಲೇ ಭಾರತೀಯ ಯೋಧರು ಪಾಕ್ ಸೈನಿಕರ ಮೇಲೆ ಪ್ರತಿದಾಳಿಯನ್ನು ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಪಾಕ್ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಶೆಲ್ ದಾಳಿಯಿಂದ ಈ ತಿಂಗಳಲ್ಲಿ ಒಟ್ಟು 4 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ರಜೌರಿಯಲ್ಲಿ ಜೂನ್ 4 ಹಾಗೂ 10 ರಂದು ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಪೂಂಚ್‌ನಲ್ಲಿ ಜೂನ್ 14 ರಂದು ನಡೆದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಯೋಧ ಮೃತಪಟ್ಟಿದ್ದರು.

Leave A Reply

Your email address will not be published.