FIFA World Cup- 2022: FIFA ಫುಟ್ ಬಾಲ್ ವಿಶ್ವಕಪ್ ವೀಕ್ಷಿಸಲು 23 ಲಕ್ಷದ ಮನೆಯನ್ನೇ ಖರೀದಿಸಿದ 17 ಮಂದಿ; ಇದರ ಹಿಂದಿದೆ ಒಗ್ಗಟ್ಟಿನ ಮಂತ್ರ

ಕೇರಳ: FIFA World Cup- 2022: ಅವರು ಒಂದೇ ಕುಟುಂಬವಲ್ಲ. ಆದರೆ ಅವರ ನಡುವೆ ಒಗ್ಗಟ್ಟಿಗೆ ಯಾವ ಕೊರತೆಯೂ ಇಲ್ಲ. ಫಿಫಾ ಫೂಟ್ ಬಾಲ್ ವಿಶ್ವಕಪ್ ಪಂದ್ಯ ವೀಕ್ಷಿಸಲೆಂದೇ ಅವರೆಲ್ಲರೂ 23 ಲಕ್ಷ ನೀಡಿ ಮನೆಯನ್ನು ಖರೀದಿಸಿದ್ದಾರೆ. ಯಾಕೆಂದರೆ ಅವರಿಗೆ ಪಂದ್ಯವನ್ನು ಎಲ್ಲರೂ ಒಟ್ಟಿಗೆ ಕುಳಿತು ನೋಡಬೇಕೆಂಬ ಹಂಬಲ ಅವರನ್ನು ಲಕ್ಷ ವ್ಯಯಿಸುವಂತೆ ಮಾಡಿದೆ.

ಕೇರಳದ ಕೊಚ್ಚಿಯ ಮುಂಡಕ್ಕಮುಗಲ್ ಗ್ರಾಮದ 17 ನಿವಾಸಿಗಳು 23 ಲಕ್ಷ ರೂ. ನೀಡಿ ಮನೆಯೊಂದನ್ನು ಖರೀದಿಸಿದ್ದಾರೆ. ಇದರ ಹಿಂದಿನ ಉದ್ದೇಶ ಒಂದೇ ಆ 17 ಮಂದಿ ಅಭಿಮಾನಿಗಳೂ ಒಟ್ಟಿಗೆ ಒಂದೇ ಸ್ಥಳದಲ್ಲಿ ಕೂತು ಫಿಫಾ ಪಂದ್ಯಗಳನ್ನು ವೀಕ್ಷಿಸಬೇಕು ಅನ್ನೋದು. ಕತಾರ್ ನಲ್ಲಿ ಫಿಫಾ ವಿಶ್ವಕಪ್-2022 ಶುರುವಾದ ಬೆನ್ನಲ್ಲೇ ಕೇರಳದ ಈ ಅಭಿಮಾನಿಗಳ ಹುಚ್ಚಭಿಮಾನ ಸಾಕಷ್ಟು ಸುದ್ದಿ ಮಾಡುತ್ತಿದೆ.

ಇದನ್ನೂ ಓದಿ: Chattisgarh murder: ಶೃದ್ಧಾ ಕೇಸ್ ನಂತೆ ಮತ್ತೊಂದು ಹೇಯ ಕೃತ್ಯ: ಗೆಳತಿಯನ್ನು ಕೊಂದು 4 ದಿನ ಮೆಡಿಕಲ್ ಶಾಪ್ ನಲ್ಲಿಟ್ಟ ಕ್ರೂರಿ

ಅಂದಹಾಗೆ ಮನೆಯನ್ನು ಖರೀದಿಸಿದ್ದಷ್ಟೆ ಅಲ್ಲ ಅದಕ್ಕೆ ಹೊಸ ರೂಪವನ್ನೂ ಈ ಅಭಿಮಾನಿಗಳ ತಂಡ ನೀಡಿದೆ. ವಿಶ್ವಕಪ್ ನಲ್ಲಿ ಭಾಗವಹಿಸುವ 32 ತಂಡಗಳ ಧ್ವಜಗಳ ಜೊತೆಗೆ ಫುಟ್ ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಅವರ ಭಾವಚಿತ್ರಗಳನ್ನು ಮನೆ ಗೋಡೆಗಳ ಮೇಲೆ ಅಂಟಿಸಿ ತಮ್ಮ ಫುಟ್ ಬಾಲ್ ಪ್ರೇಮವನ್ನು ಮೆರೆದಿದ್ದಾರೆ. ಮಾತ್ರವಲ್ಲ ಎಲ್ಲರೂ ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸಲು ಅನುಕೂಲವಾಗುವಂಥ ದೊಡ್ಡ ಪರದೆಯ ಟಿವಿ ಅಳವಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅಭಿಮಾನಿ ಶೆಫಿರ್ ಪಿಎ ಎಂಬುವವರು, 2022ರ ಫಿಫಾ ವಿಶ್ವಕಪ್ ಗಾಗಿ ನಾವು ವಿಶೇಷವಾಗಿ ಏನಾದರೂ ಮಾಡಬೇಕೆಂಬ ಯೋಚನೆಯಿಂದ 17 ಮಂದಿ ಒಟ್ಟಿಗೆ ಸೇರಿ 23 ಲಕ್ಷ ರೂ. ನೀಡಿ ಮನೆಯನ್ನು ಖರೀದಿಸಿ ಅದನ್ನು ಫಿಫಾ ತಂಡಗಳ ಧ್ವಜಗಳಿಂದ ಅಲಂಕರಿಸಿದ್ದೇವೆ. ಎಲ್ಲರೂ ಒಟ್ಟಿಗೆ ಸೇರಿ ಪಂದ್ಯ ವೀಕ್ಷಿಸಲು ಯೋಜಿಸಿದ್ದು. ಅದಕ್ಕಾಗೊ ದೊಡ್ಡ ಪರದೆಯ ಟಿವಿ ಖರೀದಿಸಿದ್ದೇವೆ ಎಂದು ಹೇಳಿದ್ದಾರೆ.

ಅಂದಹಾಗೆ ಮನೆಯನ್ನು ಖರೀದಿಸುವ ಮೊದಲಿಗೂ ಈ ತಂಡ ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸುತ್ತಿತ್ತಂತೆ. ಕಳೆದ 15-20 ವರ್ಷಗಳಿಂದಲೂ ಇವರು ಇದೇ ಒಗ್ಗಟ್ಟನ್ನು ಪ್ರದರ್ಶನ ಮಾಡುತ್ತಾ ಬಂದಿದ್ದು, ಈಗ ಮನೆ ಖರೀದಿಸುವ ಮೂಲಕ ತಮ್ಮ ಕ್ರೀಡಾಪ್ರೇಮವನ್ನು ಪ್ರದರ್ಶಿಸಿದ್ದಾರೆ. ಮುಂದಿನ ಪೀಳಿಗೆಯೂ ಇದೇ ಒಗ್ಗಟ್ಟನ್ನು ಮುಂದುವರೆಸಿಕೊಂಡು ಹೋಗುತ್ತದೆ ಎನ್ನುವುದು ಈ ತಂಡದ ವಿಶ್ವಾಸ. ಅಂದ ಹಾಗೆ ವಿಶ್ವಕಪ್ ಮುಗಿದ ಮೇಲೆ ಈ ಮನೆ ತುರ್ತು ಸೇವೆ, ಸಾಮಾಜಿಕ ಕಾರ್ಯ ಹಾಗೂ ಕ್ರೀಡಾಕೂಟಗಳಿಗೆ ಅನುಕೂಲವಾಗಲಿದೆಯಂತೆ.

ಇದನ್ನೂ ಓದಿ: IND vs NZ 2nd T20 : ಸೂರ್ಯ ಶತಕದ ಶಿಕಾರಿ, ಕಿವೀಸ್ ವಿರುದ್ಧ ಭಾರತದ ವಿಜಯದ ನಗಾರಿ

ಈ ಬಾರಿಯ ವಿಶ್ವಕಪ್ ಕತಾರ್ ನ ಅಲ್ ಖೋರ್ ನ ಅಲ್ ಬೇತ್ ಸ್ಟೇಡಿಯಂನಲ್ಲಿ ಇಂದಿನಿಂದ (ನ.20) ಡಿಸೆಂಬರ್ 18ರವರೆಗೆ ನಡೆಯಲಿದೆ. 32 ರಾಷ್ಟ್ರೀಯ ತಂಡಗಳ ಆಟಗಾರರು ಇದರಲ್ಲಿ ಸ್ಪರ್ಧೆ ಮಾಡುತ್ತಿದ್ದು, ಡಿ.18ರಂದು ಫೈನಲ್ ಪಂದ್ಯ ನಡೆಯಲಿದೆ.

FIFA World Cup- 2022: 17 Football Fans In Kerala Buy 23 Lakhs House To Watch World Cup Matches Together

Comments are closed.